Dark neck and Elbows: ಕುತ್ತಿಗೆ, ಮೊಣಕೈ ಚರ್ಮ ಕಪ್ಪಾಗಿದ್ದರೆ ಈ ಮನೆಮದ್ದುಗಳನ್ನು ಉಪಯೋಗಿಸಿ ನೋಡಿ!!

ಚರ್ಮದ ಮೇಲಿನ ಕಪ್ಪು ಕಲೆಗಳು(Dark neck and Elbows) ಹೈಪರ್‌ಪಿಗ್ಮೆಂಟೇಶನ್‌ನಿಂದ ಉಂಟಾಗುತ್ತದೆ. ಇದು ದೇಹದಲ್ಲಿ ಮೆಲನಿನ್‌ ಹೆಚ್ಚಾದಾಗ ಕಾಣಿಸುತ್ತದೆ. ಮೆಲನಿನ್‌ ಚರ್ಮಕ್ಕೆ ಬಣ್ಣ ಕೊಡುವ ಒಂದು ರೀತಿಯ ದೃವ್ಯ. ಹೆಚ್ಚಿನ ಮೆಲನಿನ್‌ ಹೆಚ್ಚಿನ ಪಗ್ಮೆಂಟೇಷನ್‌ಗೆ ಕಾರಣವಾಗುತ್ತದೆ.

ಮೊಣಕೈ(elbow), ಮೊಣಕಾಲು(knees), ಕುತ್ತಿಗೆಯ(neck) ಭಾಗಗಳಲ್ಲಿ ಕಪ್ಪಾಗುವುದರಿಂದ ತೊಂದರೆಯೇನೂ ಇಲ್ಲ. ಆದರೆ ಅವುಗಳು ಹೆಚ್ಚಾಗಿ ಚರ್ಮದ ಅಂದವನ್ನು ಕೆಡಿಸುತ್ತದೆ. ಕಪ್ಪಾದ ತ್ವಚೆಯು (dark skin) ಅವರವರ ತ್ಚಚೆಯ ಪ್ರಕಾರಗಳ ಮೇಲೆ ವಿವಿಧ ಪರಿಣಾಮ ಬೀರುತ್ತದೆ. ಡಾರ್ಕ್‌ ಸ್ಕಿನ್‌ ಟೋನ್‌ ಹೊಂದಿರುವ ಜನರಲ್ಲಿ ಡಾರ್ಕ್‌ ಸ್ಕಿನ್‌ ಹೆಚ್ಚಾಗಿ ಕಂಡು ಬಂದರೂ, ಗಾಢವಾದ ಚರ್ಮದ ಟೋನ್‌ಗಳು ಮೆಲನಿನ್‌ ಅನ್ನು ಅಧಿಕವಾಗಿ ಉತ್ಪಾದಿಸುವ ಸಾಧ್ಯತೆಯಿದೆ. ಘರ್ಷಣೆ, ಸನ್‌ಟ್ಯಾನ್‌, ಕೆಲವು ಚರ್ಮದ ಪರಿಸ್ಥಿತಿಗಳು ಮತ್ತು ಸತ್ತ ಜೀವಕೋಶಗಳು ಚರ್ಮದ ಪಿಗ್ಮೆಂಟೇಷನ್‌ಗೆ ಕೆಲವು ಕಾರಣಗಳು.

ಪಿಗ್ಮೆಂಟೇಷನ್‌ಗಳು ಹಾನಿಕಾರಕವಲ್ಲ, ಅದಕ್ಕೆ ಚಿಕತ್ಸೆಯ ಅಗತ್ಯವಿಲ್ಲ. ಆದರೆ ಅದನ್ನು ಮನೆಮದ್ದು ಉಪಯೋಗಿಸಿ ಕಡಿಮೆ ಮಾಡಿಕೊಳ್ಳಬಹುದು.

ಅರಿಶಿಣ :
ಅರಿಶಿಣ ಸಾಂಪ್ರದಾಯಿಕವಾಗಿ ಚರ್ಮವನ್ನು ಲೈಟನ್‌ ಆಗಿಸಲು ಬಳಸಲಾಗುತ್ತದೆ. ಅದರ ಮುಖ್ಯ ಸಂಯುಕ್ತವು ಕರ್ಕುಮಿನ್‌. ಇದು ಮೆಲನಿನ್‌ ಉತ್ಪಾದನೆಯನ್ನು ಮಿತಗೊಳಿಸಲು ಸಹಾಯ ಮಾಡುತ್ತದೆ.

ಅರಿಶಿಣದ ಉಪಯೋಗ ಹೇಗೆ?

ಒಂದು ಬಟ್ಟಲಿನಲ್ಲಿ ಅರ್ಧ ಚಮಚ ಅರಿಶಿಣ, ಸ್ವಲ್ಪ ಮೊಸರು ಮತ್ತು ಜೇನುತುಪ್ಪವನ್ನು ತೆಗೆದುಕೊಂಡು ಪೇಸ್ಟ್‌ ಮಾಡಿ.
ಆ ಪೇಸ್ಟ್‌ ಅನ್ನು ನಿಮ್ಮ ಪಿಗ್ಮೆಂಟೇಷನ್ ಆದ ಜಾಗದಲ್ಲಿ ಹಚ್ಚಿ.10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಇಟ್ಟುಕೊಳ್ಳಿ.
ನಂತರ ತಂಪಾದ ನೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಪುನರಾವರ್ತಿಸಿ.

ಇದನ್ನೂ ಓದಿ : Coffee Powder Facial: ಸೌಂದರ್ಯವನ್ನು ಇಮ್ಮಡಿಗೊಳಿಸುತ್ತೆ ‘ಕಾಫಿಪೌಡರ್ ಫೇಶಿಯಲ್’

ಅಲೋವೆರಾ:
ಅಲೋವೆರಾದಲ್ಲಿಯ ಔಷಧೀಯ ಪ್ರಯೋಜನಗಳಿಂದಾಗಿಯೇ ಸಾಮಾನ್ಯವಾಗಿ ಎಲ್ಲರೂ ಅದನ್ನು ಉಪಯೋಗಿಸುತ್ತಾರೆ. ಅಲೋವೆರಾ ಪಿಗ್ಮೆಂಟೇಷನ್‌ ಅನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಅದರಲ್ಲಿಯ ಅಲೋಸಿನ್‌ ವಿಶೇಷವಾಗಿ ಸನ್‌ಟ್ಯಾನ್‌ ಅನ್ನು ಕಡಿಮೆ ಮಾಡುತ್ತದೆ.

ಅಲೋವೆರಾದ ಉಪಯೋಗ ಹೇಗೆ?

ಒಂದು ಚಮಚ ಅಲೋವೆರಾ ಜೆಲ್‌ ಅನ್ನು ಪಿಗ್ಮೆಂಟೇಷನ್‌ ಆದ ಜಾಗಕ್ಕೆ ಹಚ್ಚಿ.
ಮೃದುವಾಗಿ ಅದರ ಮೇಲೆ ಉಜ್ಜಿ.
ನಂತರ ನೀರಿನಿಂದ ತೊಳೆಯಿರಿ.
ಇದನ್ನು ವಾರಕ್ಕೆ 2 ರಿಂದ 3 ಬಾರಿ ಪುನರಾವರ್ತಿಸುವುದರಿಂದ ಉತ್ತಮ ಫಲಿತಾಂಶ ಸಿಗುವುದು.

ಇದನ್ನೂ ಓದಿ : Mouth Ulcer : ಬಾಯಿ ಹುಣ್ಣಿನಿಂದ ನೋವು ಅನುಭವಿಸುತ್ತಿದ್ದೀರಾ? ಈ ಮನೆಮದ್ದುಗಳನ್ನು ಒಮ್ಮೆ ಟ್ರೈ ಮಾಡಿ!!

(Dark neck and Elbows Home Remedies for dark knees, neck and elbows)

Comments are closed.