ಭಾನುವಾರ, ಏಪ್ರಿಲ್ 27, 2025
HomeSportsCricketದಕ್ಷಿಣ ಆಫ್ರಿಕಾ ವಿರುದ್ಧದ T20I ಮತ್ತು ಏಕದಿನ ಸರಣಿಗೆ ಕೆಎಲ್‌ ರಾಹುಲ್‌ ನಾಯಕ ?

ದಕ್ಷಿಣ ಆಫ್ರಿಕಾ ವಿರುದ್ಧದ T20I ಮತ್ತು ಏಕದಿನ ಸರಣಿಗೆ ಕೆಎಲ್‌ ರಾಹುಲ್‌ ನಾಯಕ ?

- Advertisement -

KL Rahul  Captain Team Indian Cricket Team : ವಿಶ್ವಕಪ್‌ ಬೆನ್ನಲ್ಲೇ ಭಾರತ ಕ್ರಿಕೆಟ್‌ ತಂಡ ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಯನ್ನು ಆಡುತ್ತಿದ್ದು, ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದೆ. ಏಕದಿನ ಸರಣಿಯನ್ನು ಮುನ್ನೆಡೆಸಿದ್ದ ಕೆಎಲ್‌ ರಾಹುಲ್‌ ಇದೀಗ ದಕ್ಷಿಣ ಆಪ್ರಿಕಾ ವಿರುದ್ದದ ಸರಣಿಗೆ ಭಾರತ ತಂಡವನ್ನು ಮುನ್ನೆಡೆಸುವ ಸಾಧ್ಯತೆಯಿದೆ.

ಡಿಸೆಂಬರ್ 10 ರಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದೆ. ಮೂರು ODIಗಳು ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಅಲ್ಲದೇ ದಕ್ಷಿಣ ಆಫ್ರಿಕಾ ವಿರುದ್ದ T20I ಸರಣಿಯು 2024ರ ಟಿ20 ವಿಶ್ವಕಪ್‌ಗೆ ಸಿದ್ದತೆಯಾಗಲಿದೆ. ವಿಶ್ವಕಪ್‌ ಬೆನ್ನಲ್ಲೇ ನಡೆಯಲಿರುವ ಈ ಸರಣಿಗೆ ಭಾರತ ತಂಡದ ನಾಯಕ ಯಾರು ಅನ್ನೋದು ಸದ್ಯಕ್ಕಿರುವ ಪ್ರಶ್ನೆ.

KL Rahul lead Indian Cricket Team in T20I and ODI series against South Africa
Image Credit to Original Source

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ದ T20I ಸರಣಿಯನ್ನು ಸೂರ್ಯಕುಮಾರ್‌ ಯಾದವ್‌ ಮುನ್ನೆಡೆಸಿದ್ದರು. ಐದು ಪಂದ್ಯಗಳ ಸರಣಿಯಲ್ಲಿ ಮೂರು ಪಂದ್ಯಗಳು ಮುಕ್ತಾಯಗೊಂಡಿದ್ದು, ಎರಡು ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. ದಕ್ಷಿಣ ಆಫ್ರಿಕಾ ಸರಣಿಗೆ ಸ್ಟಾರ್‌ ಆಟಗಾರರು ತಂಡಕ್ಕೆ ಮರಳುವ ಸಾಧ್ಯತೆಯಿದೆ.

ಹಾರ್ದಿಕ್‌ ಪಾಂಡ್ಯ ವಿಶ್ವಕಪ್‌ ನಡುವಲ್ಲೇ ಗಾಯಗೊಂಡಿದ್ದು, ಸರಣಿಯಿಂದಲೇ ಹೊರ ನಡೆದಿದ್ದರು. ಇದೀಗ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡುತ್ತಾರಾ ಅನ್ನೋದು ಇನ್ನೂ ಖಚಿತವಾಗಿಲ್ಲ. ಹಾರ್ದಿಕ್‌ ಪಾಂಡ್ಯ ಅನುಪಸ್ಥಿತಿಯಲ್ಲಿ ಕೆಎಲ್‌ ರಾಹುಲ್‌ ಉಪನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನೆಡೆಸಿದ್ದಾರೆ.

ಇದನ್ನೂ ಓದಿ : ರಾಹುಲ್‌ ದ್ರಾವಿಡ್‌ ಟೀಂ ಇಂಡಿಯಾ ಕೋಚ್‌ ಆಗಿ ಮುಂದುವರಿಕೆ : ಬಿಸಿಸಿಐ ಅಧಿಕೃತ ಘೋಷಣೆ

ವಿಶ್ವಕಪ್‌ ಬೆನ್ನಲ್ಲೇ ವಿಶ್ರಾಂತಿ ಪಡೆದಿರುವ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡುವುದು ಇನ್ನೂ ಖಚಿತ ವಾಗಿಲ್ಲ. ಜೊತೆಗೆ ವಿರಾಟ್‌ ಕೊಹ್ಲಿ ಕೂಡ ಆಡುತ್ತಾರಾ ಅನ್ನೋದು ನಿರ್ಧಾರವಾಗಿಲ್ಲ. ಒಂದೊಮ್ಮೆ ರೋಹಿತ್‌ ಶರ್ಮಾ ಪುನರಾಗಮನ ಮಾಡುವ ಸಾದ್ಯತೆಯೂ ಇದೆ.

ರಾಹುಲ್‌ ದ್ರಾವಿಡ್‌ ಅವರನ್ನು IND vs AUS T20I ಸರಣಿಗೆ ಕೋಚ್‌ ಆಗಿ ಬಿಸಿಸಿಐ ನೇಮಕ ಮಾಡಿದೆ. ಹೀಗಾಗಿ ಮುಂದಿನ ವಾರ ಭಾರತ ಕ್ರಿಕೆಟ್‌ ತಂಡವನ್ನು ನೇಮಕ ಮಾಡುವ ಸಾಧ್ಯತೆಯಿದೆ. ಒಂದೊಮ್ಮೆ ರೋಹಿತ್‌ ಶರ್ಮಾ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಪಾಲ್ಗೊಳ್ಳದೇ ಇದ್ದಲ್ಲಿ, ಭಾರತ ತಂಡ ಉಪನಾಯಕನಾಗಿರುವ ಕೆಎಲ್‌ ರಾಹುಲ್‌ ತಂಡವನ್ನು ಮುನ್ನೆಡೆಸುವ ಸಾಧ್ಯತೆಯಿದೆ.

KL Rahul lead Indian Cricket Team in T20I and ODI series against South Africa
Image Credit to Original Source

ಇದನ್ನೂ ಓದಿ : IPL 2024: ಮುಂಬೈ ಇಂಡಿಯನ್ಸ್ ತಂಡಕ್ಕೆ ಯಾರು ನಾಯಕ ? ಹಾರ್ದಿಕ್‌ ಪಾಂಡ್ಯ ಅಥವಾ ರೋಹಿತ್‌ ಶರ್ಮಾ ?

ಭವಿಷ್ಯದ ದೃಷ್ಟಿಯಿಂದ ಭಾರತ ಕ್ರಿಕೆಟ್‌ ತಂಡಕ್ಕೆ ಹೊಸ ನಾಯಕನ ನೇಮಕವಾಗುವ ಸಾಧ್ಯತೆಯೂ ಇದೆ. ಚಾಂಪಿಯನ್ಸ್‌ ಟ್ರೋಫಿ, ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌, ಏಕದಿನ ವಿಶ್ವಕಪ್‌ ಸೋಲಿನ ಬೆನ್ನಲ್ಲೆ ರೋಹಿತ್‌ ಶರ್ಮಾ ನಾಯಕತ್ವದಿಂದ ಕೆಳಗೆ ಇಳಿಯುತ್ತಾರೆಂಬ ಮಾತುಗಳು ಕೇಳಿಬರುತ್ತಿದೆ. ಜೊತೆಗೆ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಗೆ ಸಿದ್ದ ಪಡಿಸಲಾಗಿರುವ ಪ್ರೋಮೋ ಕೂಡ ಕೆಎಲ್‌ ರಾಹುಲ್‌ ತಂಡವನ್ನು ಮುನ್ನೆಡೆಸುವ ಸುಳಿವು ನೀಡಿದೆ.

ಕೆಎಲ್‌ ರಾಹುಲ್‌ ಟೀಂ ಇಂಡಿಯಾದ ವಿಕೆಟ್‌ ಕೀಪರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಹಾಗೂ ಕೀಪಿಂಗ್‌ ಜವಾಬ್ದಾರಿಯನ್ನು ರಾಹುಲ್‌ ಸಮರ್ಥವಾಗಿ ನಿರ್ವಹಿಸಿದ್ದಾರೆ. ಕೆಎಲ್‌ ರಾಹುಲ್‌ ಅವರ ನಾಯಕತ್ವದಲ್ಲಿ ಭಾರತ ತಂಡ ಒಟ್ಟು 13 ಪಂದ್ಯಗಳನ್ನು ಆಡಿದ್ದು ಈ ಪೈಕಿ 9 ಪಂದ್ಯಗಳಲ್ಲಿ ಗೆಲುವು ದಾಖಲಿದ್ದು, ಕೇವಲ 4 ಪಂದ್ಯಗಳಲ್ಲಷ್ಟೇ ಸೋಲು ಕಂಡಿದೆ.

ಇದನ್ನೂ ಓದಿ : IPL 2024 : RCBಗೆ ವಿರಾಟ್‌ ಕೊಹ್ಲಿ ಗುಡ್‌ಬೈ ! ಸ್ಪೋಟಕ ಮಾಹಿತಿ ಬಾಯ್ಬಿಟ್ಟ ಕಿಂಗ್‌ ಕೊಹ್ಲಿ

ಕಳೆದ ಬಾರಿಯ ಐಪಿಎಲ್‌ ನಲ್ಲಿ ರಾಹುಲ್‌ ಉತ್ತಮ ಬ್ಯಾಟಿಂಗ್‌ ನಡೆಸಿದ್ದರು. ಆದರೆ ಗಾಯದ ಸಮಸ್ಯೆಯಿಂದ ಅವರು ಐಪಿಎಲ್‌ ಮಧ್ಯದಲ್ಲಿಯೇ ತಂಡವನ್ನು ತೊರೆದಿದ್ದರು. ಕಳೆದ ವರ್ಷ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ರಾಹುಲ್‌ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು. ಮುಂದಿನ ವಿಶ್ವಕಪ್‌ ಭವಿಷ್ಯದ ದೃಷ್ಟಿಯಿಂದ ಕೆಎಲ್‌ ರಾಹುಲ್‌ ಅವರಿಗೆ ಟೀಂ ಇಂಡಿಯಾದ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಹೆಚ್ಚಿದೆ.

KL Rahul lead Indian Cricket Team in T20I and ODI series against South Africa

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular