Kohli reveals secret of success Vs Pak : ಪಾಕಿಸ್ತಾನ ವಿರುದ್ಧದ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಸೀಕ್ರೆಟ್ ಬಿಚ್ಚಿಟ್ಟ ಕಿಂಗ್ ಕೊಹ್ಲಿ

ಮೆಲ್ಬೋರ್ನ್: (Kohli reveals secret of success Vs Pak) ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಮ್ಯಾಚ್ ಗೆಲ್ಲಿಸಿ ಭಾರತೀಯರಿಗೆ ದೀಪಾವಳಿಯ ಗಿಫ್ಟ್ ಕೊಟ್ಟಿರುವ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಇನ್ನಿಂಗ್ಸ್ ಹಿಂದಿನ ಗುಟ್ಟ(Kohli reveals secret of success Vs Pak)ನ್ನು ಬಿಚ್ಟಿಟ್ಟಿದ್ದಾರೆ.


ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದ ಪಾಕಿಸ್ತಾನ ವಿರುದ್ಧ(Kohli reveals secret of success Vs Pak)ದ ಹೈವೋಲ್ಟೇಜ್ ಪಂದ್ಯವನ್ನು ಭಾರತ 4 ವಿಕೆಟ್’ಗಳಿಂದ ರೋಚಕವಾಗಿ ಗೆದ್ದುಕೊಂಡಿತ್ತು. 160 ರನ್’ಗಳ ಗೆಲುವಿನ ಟಾರ್ಗೆಟ್ ಬೆನ್ನಟ್ಟಿದ್ದ ಭಾರತ ಇನ್ನಿಂಗ್ಸ್’ನ ಕೊನೇ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿತ್ತು. ಕಿಂಗ್ ಕೊಹ್ಲಿ ವಿರಾಟ್ 53 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು. ಭಾರತದ ಗೆಲುವಿಗೆ ಕೊನೆಯ 12 ಎಸೆತಗಳಲ್ಲಿ 31 ರನ್’ಗಳು ಬೇಕಿದ್ದಾಗ ಮೂರು ಸಿಕ್ಸರ್’ಗಳನ್ನು ಬಾರಿಸಿದ್ದ ಕೊಹ್ಲಿ, ಭಾರತದ ಗೆಲವಿನ ರೂವಾರಿಯಾಗಿ ಮೂಡಿ ಬಂದಿದ್ದರು.

ಪಾಕಿಸ್ತಾನ ವಿರುದ್ಧದ ಸ್ಮರಣೀಯ ಇನ್ನಿಂಗ್ಸ್ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ್ದು, ಆರಂಭದಲ್ಲಿ ವೇಗವಾಗಿ ರನ್ ಗಳಿಸಲು ವಿಫಲವಾದರೂ ಕೊನೆಯಲ್ಲಿ ಗುರಿ ಮುಟ್ಟಿದ್ದು ಹೇಗೆ ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ : soldier shot dead : ಪ್ರೇಮ ಪ್ರಕರಣದ ಕಾರಣಕ್ಕೆ ಭಾರತೀಯ ಯೋಧನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

“ನಾನು 21 ಎಸೆತಗಳಲ್ಲಿ 12 ರನ್’ಗಳನ್ನು ಗಳಿಸಿದ್ದಾಗ ಈ ಪಂದ್ಯವನ್ನು ನಿಜಕ್ಕೂ ಗೊಂದಲಕ್ಕೀಡು ಮಾಡುತ್ತಿದ್ದೇನೆ ಎಂದು ನನಗೆ ಅನ್ನಿಸಲು ಶುರುವಾಗಿತ್ತು. ಚೆಂಡನ್ನು ಗ್ಯಾಪ್’ಗಳಲ್ಲಿ ಬಾರಿಸಲು ನನಗೆ ಆಗ ಸಾಧ್ಯವಾಗುತ್ತಿರಲಿಲ್ಲ. ಆದರೆ ನಿಮ್ಮ ಬಳಿ ಅನುಭವವಿದ್ದರೆ ಮತ್ತು ಕೊನೆಯವರೆಗೂ ಬ್ಯಾಟಿಂಗ್ ಮಾಡಿದರೆ ನಾವು ಗುರಿ ತಲುಪಬಲ್ಲೆವು ಎಂಬ ವಿಶ್ವಾಸವಿತ್ತು. ಭಾರತ ಪರ ಆಡುವಾಗ ಅದೇ ನನ್ನ ಜವಾಬ್ದಾರಿಯಾಗಿರುತ್ತದೆ. ಇನ್ನಿಂಗ್ಸ್ ಕೊನೆಯಲ್ಲಿ ದೊಡ್ಡ ಹೊಡೆತಗಳನ್ನು ಬಾರಿಸಬಲ್ಲೆ ಎಂಬುದು ನನಗೆ ಗೊತ್ತಿತ್ತು” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ : Cyclone Sitrang : ದೀಪಾವಳಿ ಬೆನ್ನಲ್ಲೇ ಅಪ್ಪಳಿಸಿದ ಸಿತ್ರಾಂಗ್‌ ಚಂಡಮಾರುತ ; 7 ಮಂದಿ ಬಲಿ

ಭಾರತ ತಂಡ ಮೊದಲ 10 ಓವರ್’ಗಳಲ್ಲಿ 4 ವಿಕೆಟ್ ಕಳೆದುಕೊಂಡು ಕೇವಲ 45 ರನ್ ಗಳಿಸಿದ್ದಾಗ ಹಾರ್ದಿಕ್ ಪಾಂಡ್ಯ ಜೊತೆ ವಿರಾಟ್ ಕೊಹ್ಲಿ 5ನೇ ವಿಕೆಟ್’ಗೆ 78 ಎಸೆತಗಳಲ್ಲಿ 113 ರನ್ ಗಳಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು.

ಇದನ್ನೂ ಓದಿ : Diwali Festival 2022 : ದೀಪಾವಳಿ ಜೂಜಾಟ : 7 ಮಹಿಳೆಯರು ಸೇರಿ 29 ಮಂದಿ ಅರೆಸ್ಟ್, 58 ಲಕ್ಷ ರೂ.ವಶಕ್ಕೆ

“ಪ್ರಾಮಾಣಿಕವಾಗಿ ಹೇಳುವುದಾದರೆ, ಆ ಹಂತದಲ್ಲಿ ನಾನು ತುಂಬಾ ಒತ್ತಡದಲ್ಲಿದ್ದೆ. ಆದರೆ ಹಾರ್ದಿಕ್ ಪಾಂಡ್ಯ ಕ್ರೀಸ್’ಗೆ ಬರುತ್ತಿದ್ದಂತೆ ಒಂದೆರಡು ಬೌಂಡರಿಗಳನ್ನು ಬಾರಿಸಿದಾಗ ನನ್ನ ಮೇಲಿನ ಒತ್ತಡ ಕಡಿಮೆಯಾಯಿತು. ನಾವು 100 ರನ್’ಗಳ ಜೊತೆ ಆಟ ಪೂರ್ತಿಗೊಳಿಸಿದ್ದೇ ನಮಗೆ ತಿಳಿಯಲಿಲ್ಲ. ನಾವು ಮಾತನಾಡುತ್ತಲೇ ಇದ್ದೆವು. ವೇಗವಾಗಿ ಓಡುತ್ತಿದ್ದೆವು ಮತ್ತು ಪಾಕಿಸ್ತಾನ ತಂಡದ ಆಟಗಾರರ ಬಾಡಿ ಲಾಂಗ್ವೇಜನ್ನು ಗಮನಿಸುತ್ತಿದ್ದೆವು. ಪಂದ್ಯ ಯಾವುದಾದರೂ ಹಂತದಲ್ಲಿ ತಿರುವು ಪಡೆಯಲಿದೆ ಎಂಬುದು ನಮಗೆ ತಿಳಿದಿತ್ತು. ಆದರೆ ಅಂತಿಮ ಕ್ಷಣಗಳಲ್ಲಿ ಆ ರೀತಿಯ ತಿರುವುದು ಸಿಗಲಿದೆ ಎಂಬ ಬಗ್ಗೆ ಕಲ್ಪನೆಯು ಇರಲಿಲ್ಲ” ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ : Surya Grahan 2022 India : ಇಂದು ಕೇತುಗ್ರಸ್ತ ಸೂರ್ಯಗ್ರಹಣ: ಎಲ್ಲೆಲ್ಲಾ ಗೋಚರ, ಏನು ಮಾಡಬೇಕು ? ಏನು ಮಾಡಬಾರದು ?

ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದಲ್ಲಿ ತನ್ನ ಮೊದಲ ಪಂದ್ಯವನ್ನು ಗೆದ್ದುಕೊಂಡಿರುವ ಭಾರತ, ಗುರುವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯಲಿರುವ ಗ್ರೂಪ್-2ನ ತನ್ನ 2ನೇ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ.

(Kohli reveals secret of success Vs Pak) Virat Kohli, who won the match against Pakistan in the T20 World Cup tournament and gave a Diwali gift to the Indians, has revealed the secret behind his wonderful innings .

Comments are closed.