Opinion: ಡಿ ಕೆ ಶಿವಕುಮಾರ್ ಅವರು ಪಾದಯಾತ್ರೆಯ ವೇಳೆ ತೂರಾಡಲು Vertigo ಸಮಸ್ಯೆಯೂ ಕಾರಣವಾಗಿರಬಹುದು

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಅವರು ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ (Mekedatu Hiking) ಇಂದಿಗೆ ಮೂರನೆ ದಿನ ತಲುಪಿದೆ. ಡಿ.ಕೆ.ಶಿವಕುಮಾರ್ ಅವರು ಪಾದಯಾತ್ರೆಯ ವೇಳೆ, ಸಂಗಮದಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಕೊಂಚ ತೂರಾಡಿರುವ ವಿಡಿಯೋ ಇಟ್ಟುಕೊಂಡು ಹಲವರು ಟ್ರೋಲ್ (Trolls on DK Shivakumar) ಮಾಡುತ್ತಿದ್ದಾರೆ. ಅಪಹಾಸ್ಯ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮದ್ಯಪಾನ ಮಾಡಿದ್ದಾರೆಂದು ವಿರೋಧಿಗಳು ಟೀಕಿಸುತ್ತಿದ್ದಾರೆ. ಆದರೆ ಮಹತ್ವಾಕಾಂಕ್ಷೆಯುಳ್ಳ ಪ್ರಮುಖ ಸ್ಥಾನದಲ್ಲಿರುವ ವ್ಯಕ್ತಿಯೋರ್ವ ತಾನೇ ಕೇಂದ್ರಬಿಂದುವಾಗಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮದ್ಯಪಾನ ಮಾಡಿಕೊಂಡು ಭಾಗವಹಿಸಲು ಸಾಧ್ಯವೇ ಎಂಬುದು ಪ್ರಜ್ಞೆಯುಳ್ಳ ಎಂಥಹವರಿಗೂ ಮೂಡುವ ಪ್ರಶ್ನೆ. ಮದ್ಯಪಾನ ಮಾಡಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಆಗುವ ಪರಿಣಾಮಗಳ ಕುರಿತು ಅವರಿಗೂ ಅರಿವಿರುತ್ತದೆ. ಹಾಗಾದರೆ ಕೆಪಿಸಿಸಿ ಅಧ್ಯಕ್ಷರು ಪಾದಯಾತ್ರೆಯಲ್ಲಿ ಸಂಜೆಯ ವೇಳೆಗೆ ತೂರಾಡಲು-ಅತ್ತಿತ್ತ ವಾಲಾಡಲು ಕಾರಣವೇನಿರಬಹುದು? ಈಕುರಿತು ಜನಪ್ರಿಯ ಸಾಹಿತಿ ಗುರುರಾಜ ಕೋಡ್ಕಣಿ ಅವರ ಅಭಿಪ್ರಾಯ ಹೀಗಿದೆ.

Vertigo ಸಮಸ್ಯೆ ನಿಜಕ್ಕೂ ಒಂದು ವಿಲಕ್ಷಣ ಸಮಸ್ಯೆ.ಕಿವಿಗಳ ದ್ರವದ ಅಸಮತೋಲನ,ಕತ್ತಿನ ನರಗಳ ಸಮಸ್ಯೆ,ಮೆದುಳಿನ ತೊಂದರೆ,ನಿದ್ರಾಹೀನತೆ ಅತೀಯಾದ ಗಾಸ್ಟ್ರಿಕ್ ಸಮಸ್ಯೆಯಂತಹ ತೊಂದರೆಗಳಲ್ಲಿ vertigo ಕಾಣಿಸಿಕೊಳ್ಳುತ್ತದೆ.ಕೆಲವು ಔಷಧಿಗಳ ದುಷ್ಪರಿಣಾಮದ ಫಲವಾಗಿಯೂ vertigo ತೊಂದರೆಯಾಗಬಹುದು.ಸಾಮಾನ್ಯವಾಗಿ ವೃದ್ಧರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯಾದರೂ ಯಾವುದೇ ವಯಸ್ಸಿನಲ್ಲಿ ಇದು ಕಾಣಿಸಿಕೊಳ್ಳುವುದು ಸಹ ಸುಳ್ಳಲ್ಲ.

ಈ ಸಮಸ್ಯೆಯ ಬಹುಮುಖ್ಯ ಅಂಶವೆಂದರೆ ಏಕಾಏಕಿ ತೀವೃವಾದ ತಲೆಸುತ್ತುವಿಕೆ.ಕತ್ತು ಮೇಲೆತ್ತಿ ನೋಡಿದರೆ ,ಕೂತಲ್ಲಿಂದ ಎದ್ದು ನಿಂತರೆ ,ಯಾವುದೋ ಒಂದು ಮಗ್ಗುಲಲ್ಲಿ ಮಲಗಿದರೆ ಇಡೀ ಮನೆ ಮೇಲ್ಚಾವಣಿ ಗಿರಿಗಿರಿ ತಿರುಗಿದಂತಾಗಿ, ಕಾಯಿಲೆಯಿರುವ ವ್ಯಕ್ತಿ ಆಯತಪ್ಪಿ ಬಿದ್ದು ಬಿಡಬಹುದು.ಜೊತೆಗೆ ಅತಿಯಾದ ತಲೆ ತಿರುಗುವಿಕೆಯಿಂದಾಗಿ ಅನೇಕರಿಗೆ ವಾಂತಿಯಾಗುವ,ಹೊಟ್ಟೆ ತೊಳಸುವ ಸಾಧ್ಯತೆ ಸಹ ಇದೆ.ಗಂಭೀರ ಸ್ವರೂಪದ ವರ್ಟಿಗೊ ಇರುವ ರೋಗಿಗಳಿಗೆ ವಾಹನ ಚಾಲನೆ ನಿಷಿದ್ಧ. ಒಟ್ಟಾರೆಯಾಗಿ ಅಪಾಯಕಾರಿ ಅಲ್ಲದಿದ್ದರೂ ಸಂದರ್ಭಕ್ಕೆ ಅಪಾಯಕಾರಿಯಾಗುವ ಸಾಧ್ಯತೆಗಳಿಲ್ಲ.

ನಿನ್ನೆಯಿಂದ ಡಿಕೆಶಿಯವರದ್ದೊಂದು ತೂರಾಡುತ್ತಿರುವ ವಿಡಿಯೊ ಇಲ್ಲಿ ಓಡಾಡುತ್ತಿದೆ.ಕೆಲವರ ಪ್ರಕಾರ ಅವರು ಕುಡಿದು ತೂರಾಡುತ್ತಿದ್ದಾರಂತೆ. ಅವರಿಗೆ ವರ್ಟಿಗೊ ಸಮಸ್ಯೆಯಿದೆ ಎನ್ನುವುದು ಕೆಲವರ ವಾದ. ವರ್ಟಿಗೊದಲ್ಲಿ ಹಾಗೆ ತೂರಾಡುವುದಿಲ್ಲ ಎನ್ನುವುದು ಕೆಲವರ ಪ್ರತಿವಾದ.

ಅವರ ಕುಡಿತದ ಬಗ್ಗೆ ಗೊತ್ತಿಲ್ಲವಾಗಲಿ,ವರ್ಟಿಗೊದಲ್ಲಿ ತೂರಾಡುವಿಕೆ,ಮಾತು ತೊದಲುವಿಕೆಯ ಲಕ್ಷಣಗಳು ಇದ್ದೇ ಇವೆ.ಹಾಗಾಗಿ ಸುತ್ತಾಟದ ದೈಹಿಕ ಬಳಲಿಕೆಯ ಕಾರಣಕ್ಕೂ ವರ್ಟಿಗೊದ ಸಮಸ್ಯೆ ಉಲ್ಬಣಿಸಿ ಡಿಕೆಶಿ ತೂರಾಡಿದ ಸಾಧ್ಯತೆಯನ್ನು ಸಹ ತಳ್ಳಿಹಾಕುವಂತಿಲ್ಲ

ಡಿಕೆಶಿ ಮುಖ್ಯಮಂತ್ರಿಯಾಗಬೇಕೆನ್ನುವ ಮಹತ್ವಾಕಾಂಕ್ಷೆಯುಳ್ಳವರು,ಕಾಂಗ್ರೆಸ್ಸಿನ ಗಟ್ಟಿ ನಾಯಕರ ಪೈಕಿ ಅಗ್ರಗಣ್ಯರು.ಹೀಗಿರುವಾಗ,ತನ್ನದೇ ಪಕ್ಷದವರೆದುರು, ಮಾಧ್ಯಮದವರಿದ್ದಾರೆ,ಟಿವಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತದೆ ಎಂಬುದರ ಅರಿವಿದ್ದೂ  ಹಾಗೆ ಎಲ್ಲರೆದರೂ ಕುಡಿದು ತೂರಾಡುತ್ತಾರೆ ಎನ್ನುವುದನ್ನ ನಂಬುವುದು ತಾರ್ಕಿಕವಾಗಿ ಕಷ್ಟವೇ.

ಅಭಿಪ್ರಾಯ ಬರಹ: ಗುರುರಾಜ ಕೋಡ್ಕಣಿ
ಜನಪ್ರಿಯ ಬರಹಗಾರ, ಕಥೆಗಾರ

ಇದನ್ನೂ ಓದಿ: Opinion : ಧಾರ್ಮಿಕ ಪ್ರಾರ್ಥನಾಲಯಗಳ ಹುಂಡಿಗೂ ಬರಲಿ ಕ್ಯೂಆರ್ ಕೋಡ್

(Opinion on DK Shivakumar Mekedatu Hike trolls and his health)

Comments are closed.