IPL 2022 ನಿಂದ RCB Out : ಫೈನಲ್ ಪ್ರವೇಶಿಸಿದ ರಾಜಸ್ಥಾನ್ ರಾಯಲ್ಸ್

ಅಹಮದಾಬಾದ್ : ‌ರೋಸ್‌ ಬಟ್ಲರ್‌ ಅಬ್ಬರದ ಶತಕ ಹಾಗೂ ಪ್ರಸಿದ್ದ ಕೃಷ್ಣ ಮತ್ತು ಒಬೆಡ್ ಮೆಕಾಯ್ ಅವರ ಬೌಲಿಂಗ್‌ ದಾಳಿಗೆ ತತ್ತರಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ (RCB Out) ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಸೋಲನ್ನು ಕಂಡಿದೆ. ಈ ಮೂಲಕ ಸಂಜು ಸ್ಯಾಮ್ಸನ್‌ ನೇತೃತ್ವದಲ್ಲಿ ರಾಜಸ್ಥಾನ ತಂಡ ಫೈನಲ್‌ ಪ್ರವೇಶಿಸಿದೆ. ಭಾನುವಾರ ನಡೆಯಲಿರುವ ಐಪಿಎಲ್ 2022 ರ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡಕ್ಕೆ ಕನ್ನಡಿಗ ಪ್ರಸಿದ್ದ ಕೃಷ್ಣ ವಿರಾಟ್‌ ಕೊಹ್ಲಿ ವಿಕೆಟ್‌ ಪಡೆಯುವ ಮೂಲಕ ಆಘಾತ ನೀಡಿದ್ರು. ನಂತರದಲ್ಲಿ ನಾಯಕ ಡುಪ್ಲಸಿಸ್‌ ಹಾಗೂ ರಜತ್‌ ಪಾಟೀದಾರ್ ಇನ್ನಿಂಗ್ಸ್‌ ಕಟ್ಟುವ ಕಾರ್ಯಕ್ಕೆ ಮುಂದಾದ್ರು. ಈ ಜೋಡಿ ಎರಡನೇ ವಿಕೆಟ್‌ ಗೆ ಅರ್ಧ ಶತಕದ ಜೊತೆಯಾಟ ನೀಡಿದ್ರು. ನಂತರ ಮ್ಯಾಕ್ಸ್‌ವೆಲ್‌ 24 ರನ್‌ ಗಳಿಸಿ ಆಡುತ್ತಿದ್ದರು ಕೂಡ ಕೆಟ್ಟ ಹೊಡೆತಕ್ಕೆ ಮನ ಮಾಡಿ ವಿಕೆಟ್‌ ಒಪ್ಪಿಸಿದ್ರು. ಒಂದೆಡೆ ರಜತ್‌ ಪಾಟೀದಾರ್‌ ‌42ಎಸೆತಗಳಲ್ಲಿ 58 ರನ್‌ ಬಾರಿಸಿದ್ದಾರೆ. ಆದರೆ ಪಾಟೀದಾರ್‌ ಔಟ್‌ ಆಗುತ್ತಲೇ ಆರ್‌ಸಿಬಿ ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಅಂತಿಮವಾಗಿ ೨೦ ಓವರ್‌ ಗಳಲ್ಲಿ ಆರ್‌ಸಿಬಿ 8 ವಿಕೆಟ್‌ ಕಳೆದುಕೊಂಡು 157 ರನ್‌ ಬಾರಿಸಿದೆ. ರಾಜಸ್ಥಾನ ರಾಯಲ್ಸ್‌ ಪರ ಪ್ರಸಿದ್ದ ಕೃಷ್ಣ ಹಾಗೂ ಒಬೆಡ್ ಮೆಕಾಯ್ ತಲಾ 3 ವಿಕೆಟ್‌ ಪಡೆದುಕೊಂಡಿದ್ದಾರೆ. ಅಲ್ಲದೇ ಬೋಲ್ಟ್‌ ಹಾಗೂ ಅಶ್ವಿನ್‌ ತಲಾ ಒಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ನಂತರ ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ ರಾಯಲ್ಸ್‌ ಪರ ಯಶಸ್ವಿ ಜೈಸ್ವಾಲ್‌ ಹಾಗೂ ಜೋಸ್‌ ಬಟ್ಲರ್‌ ಮೊದಲ ವಿಕೆಟ್‌ಗೆ 61 ರನ್‌ ಜೊತೆಯಾಟವಾಡಿದ್ರು. 21ರನ್‌ ಗಳಿಸಿ ಆಡುತ್ತಿದ್ದ ಜೈಸ್ವಾಲ್‌ ಹಜಲ್‌ ವುಡ್‌ಗೆ ವಿಕೆಟ್‌ ಒಪ್ಪಿಸಿದ್ರು. ನಂತರ ಬಂದ ಸಂಜು ಸ್ಯಾಮ್ಸನ್‌ ಬಟ್ಲರ್‌ ಗೆ ಸಾಥ್‌ ಕೊಟ್ರು. ಸ್ಪೋಟಕ ಆಟಕ್ಕೆ ಮನ ಮಾಡಿದ ಬಟ್ಲರ್‌ 60 ಎಸೆತಗಳಲ್ಲಿ 106ರನ್‌ ಬಾರಿಸಿದ್ದಾರೆ. ಆದರೆ 23 ರನ್‌ ಗಳಿಸಿದ್ದ ಸ್ಯಾಮ್ಸನ್‌ ಹಸರಂಗಗೆ ವಿಕೆಟ್‌ ಒಪ್ಪಿಸಿದ್ರು. ಅಂತಿಮವಾಗಿ ರಾಜಸ್ಥಾನ ರಾಯಲ್ಸ್‌ ತಂಡ 20 ಓವರ್‌ ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 161 ರನ್‌ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿದೆ. ಆರ್‌ ಸಿಬಿ ಪರ ಹಜಲ್‌ವುಡ್‌ 2, ಹಸರಂಗ 1 ವಿಕೆಟ್‌ ಪಡೆದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌ :
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು : ( 157/8 ) ರಜತ್‌ ಪಾಟೀದಾರ್‌ 58, ಫಾಪ್‌ ಡುಪ್ಲಸಿಸ್‌ 25, ಮ್ಯಾಕ್ಸ್‌ವೆಲ್‌ 24, ಶಹಬಾಜ್‌ ಅಹ್ಮದ್‌ 12, ಪ್ರಸಿದ್ದ ಕೃಷ್ಣ 22/3, ಓಬೆಡ್‌ ಮಕಾಯ್‌ 23/3, ಬೋಲ್ಟ್‌ 28/1, ಆರ್.‌ಅಶ್ವಿನ್‌ 45/1

ರಾಜಸ್ಥಾನ ರಾಯಲ್ಸ್‌ : (161/3) ಜೋಸ್‌ ಬಟ್ಲರ್‌ 106, ಸಂಜು ಸ್ಯಾಮ್ಸನ್‌ 23, ಯಶಸ್ವಿ ಜೈಸ್ವಾಲ್‌ 21, ಜೋಸ್‌ ಹಜಲ್‌ವುಡ್‌ 23/2, ವನಿಂದು ಹಸರಂಗ 26/1

ಇದನ್ನೂ ಓದಿ : KL Rahul creates history : IPL 2022ನಿಂದ ಹೊರಬಿದ್ದ ಲಕ್ನೋ : ಇತಿಹಾಸ ಸೃಷ್ಟಿಸಿದ ಕೆ.ಎಲ್.ರಾಹುಲ್‌

ಇದನ್ನೂ ಓದಿ : IPL Crickter Umran Mailk ಭರವಸೆಯ ದ್ರುವತಾರೆ ಉಮ್ರಾನ್ ಮಲ್ಲಿಕ್

RCB out Rajasthan Royals enter IPL 2022 final

Comments are closed.