Virat Kohli : RCB ಆಟಗಾರ ವಿರಾಟ್ ಕೊಹ್ಲಿ IPL 2022 ನಿಂದ ಔಟ್ : ರವಿಶಾಸ್ತ್ರಿ ಸಲಹೆ ಪಾಲಿಸ್ತಾರಾ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli ) ಅವರು ಮಂಗಳವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ 9 ರನ್ ಗಳಿಸಿ ಔಟಾಗಿದ್ದಾರೆ. ಐಪಿಎಲ್‌ನ (IPL 2022) ಪ್ರಸಕ್ತ ಋತುವಿನಲ್ಲಿ ವಿರಾಟ್‌ ಕೊಹ್ಲಿ ರನ್‌ಗಳ ಬರ ಮುಂದುವರಿದಿದೆ. ಈ ನಡುವಲ್ಲೇ ವಿರಾಟ್‌ ಕೊಹ್ಲಿ ಫಾರ್ಮ್‌ ಸಮಸ್ಯೆ ಇದೀಗ ಕ್ರಿಕೆಟ್‌ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಜೊತೆಗೆ ಮಾಜಿ ಕೋಚ್‌ ರವಿಶಾಸ್ತ್ರಿ ನೀಡಿದ ಸಲಹೆಯ ಹಿನ್ನೆಲೆಯಲ್ಲಿ ಕೊಹ್ಲಿ ಐಪಿಎಲ್‌ನಿಂದ ಹೊರ ನಡೆಯುವ ಸಾಧ್ಯತೆಯಿದೆ.

ವಿರಾಟ್‌ ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರ. ಹಲವು ವರ್ಷಗಳಿಂದಲೂ ಕ್ರಿಕೆಟ್‌ ಆಡುತ್ತಿದ್ದಾರೆ. ಸುದೀರ್ಘ ಅವಧಿಗೆ ಭಾರತ ತಂಡ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ನೂರಕ್ಕೂ ಅಧಿಕ ಶತಕ ಬಾರಿಸುವ ಮೂಲಕ ಕ್ರಿಕೆಟ್‌ ವಲಯದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇಂತಹ ವಿರಾಟ್‌ ಕೊಹ್ಲಿ ಇದೀಗ ರನ್‌ ಗಳಿಸಲು ಪರದಾಡುತ್ತಿದ್ದಾರೆ. ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತೊಮ್ಮೆ ಕೊಹ್ಲಿ ತಮ್ಮ ಮನಸ್ಸನ್ನು ಫ್ರೆಶ್ ಮಾಡಲು ಬಿಡುವಿನ ಅಗತ್ಯವಿದೆ ಎಂದು ಪುನರುಚ್ಚರಿಸಿದ್ದಾರೆ. ಆರ್‌ಸಿಬಿ ತಂಡದ ಆರಂಭಿಕನಾಗಿ ಕಣಕ್ಕೆ ಇಳಿದಿದ್ದರೂ ಕೂಡ ಕೊಹ್ಲಿ ಎರಡು ಬಾರಿ ಗೋಲ್ಡನ್‌ ಡಕ್‌ ಆಗಿದ್ದಾರೆ.

ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಅವರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್ ಆರಂಭಿಸಿದ್ದರೂ ಕೂಡ ವಿರಾಟ್‌ ಕೊಹ್ಲಿ ಅದೃಷ್ಟ ಮಾತ್ರ ಬದಲಾವಣೆ ಯಾಗಿಲ್ಲ. ರಾಜಸ್ಥಾನ ರಾಯಲ್ಸ್‌ ವಿರುದ್ದದ ಪಂದ್ಯದಲ್ಲಿ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ್ದರು. ಕೊಹ್ಲಿ ಮೈಂಡ್ ಫ್ರೆಶ್ ಆಗಲು ಸ್ವಲ್ಪ ವಿರಾಮ ತೆಗೆದುಕೊಳ್ಳಬೇಕು ಎಂದು ರವಿಶಾಸ್ತ್ರಿ ಮತ್ತೊಮ್ಮೆ ಹೇಳಿದ್ದಾರೆ. ಕೊಹ್ಲಿ ತಡೆರಹಿತ ಕ್ರಿಕೆಟ್ ಆಡಿದ್ದಾರೆ. ಅವರು ಎಲ್ಲಾ ಸ್ವರೂಪಗಳಲ್ಲಿ ತಂಡದ ನಾಯಕತ್ವ ವಹಿಸಿರುವುದರಿಂದ ಅವರಿಗೆ ವಿರಾಮ ಸೂಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ರವಿಶಾಸ್ತ್ರಿ ಕಿವಿಮಾತು ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ಸೇರಿದಂತೆ ಹಲವು ವರ್ಷಗಳ ಕಾಲ ಕ್ರಿಕೆಟ್‌ ಆಡಿರುವ ಆಟಗಾರರು ಅಂತರಾಷ್ಟ್ರೀಯ ವೃತ್ತಿಜೀವನವನ್ನು ವಿಸ್ತರಿಸಲು ಬಯಸಿದ್ರೆ ಅವರು ಐಪಿಎಲ್‌ನಿಂದ ವಿರಾಮ ಪಡೆಯಲೇ ಬೇಕಾಗಿದೆ. ನೀವು 14-15 ವರ್ಷಗಳಿಂದ ಆಡಿದ್ದೀರಿ. ವಿರಾಟ್ ಮಾತ್ರವಲ್ಲ, ಇತರ ಆಟಗಾರರಿಗೆ ನಾನು ಅದನ್ನು ಹೇಳುತ್ತೇನೆ. ನೀವು ಭಾರತಕ್ಕಾಗಿ ಆಡಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಬಯಸಿದರೆ, ನೀವು ಆ ವಿರಾಮವನ್ನು ತೆಗೆದುಕೊಳ್ಳಿ ಎಂದಿದ್ದಾರೆ.

ಐಪಿಎಲ್‌ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಪ್ರಾಂಚೈಸಿಗಳಿಗೆ ತಾನು ಅರ್ಧದಷ್ಟು ಪಂದ್ಯಾವಳಿಯನ್ನು ಮಾತ್ರವೇ ಆಡುತ್ತೇನೆ. ನನಗೆ ಅರ್ಧದಷ್ಟು ಹಣವನ್ನು ಮಾತ್ರವೇ ಪಾವತಿ ಮಾಡಿ. ನಾನು ಅಂತರಾಷ್ಟ್ರೀಯ ಆಟಗಾರನಾಗಿ ಮುಂದುವರಿಯ ಬೇಕು ಅನ್ನೋದನ್ನು ಮನವರಿಕೆ ಮಾಡಬೇಕಾಗಿದೆ. ಕಠಿಣ ಅಭ್ಯಾಸದಿಂದ ಮತ್ತೆ ಲಯಕ್ಕೆ ಮರಳುವ ಸಾಧ್ಯತೆಯಿದೆ.

ಇದನ್ನೂ ಓದಿ : IPL 2022 : 0, 0, 9 ವಿರಾಟ್‌ ಕೊಹ್ಲಿಗೆ ಕೈ ಹಿಡಿಯದ ಅದೃಷ್ಟ : ಆರಂಭಿಕನಾಗಿ ಎಡವಿದ ಮಾಜಿ ನಾಯಕ

ಇದನ್ನೂ ಓದಿ : ಜನಾಂಗೀಯ ನಿಂದನೆ ಆರೋಪ ಮುಕ್ತರಾದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್

RCB player Virat Kohli out from IPL 2022, What former coach suggest

Comments are closed.