Biggboss : ಬಿಗ್‌ಬಾಸ್‌ ಮನೆಯಿಂದ ವೈಷ್ಣವಿ ಗೌಡ ಔಟ್‌

ಬಿಗ್‌ಬಾಸ್‌ ಸೀಸನ್‌ -8ರ ಗ್ರಾಂಡ್ ಫಿನಾಲೆ ಅದ್ದೂರಿಯಾಗಿ ನಡೆಯುತ್ತಿದೆ. ಈ ಬಾರಿಯ ಬಿಗ್‌ಬಾಸ್‌ ಆಗಿ ಯಾರು ಹೊರಹೊಮ್ಮುತ್ತಾರೆ ಅನ್ನೋ ಕುತೂಹಲ ಹೆಚ್ಚುತ್ತಿದೆ. ಈ ನಡುವೆ ನಾಲ್ಕನೇ ಕಂಟೆಸ್ಟೆಂಟ್‌ ಆಗಿ ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ ಬಿಗ್‌ಬಾಸ್‌ ಮನೆಯಿಂದ ಔಟ್‌ ಆಗಿದ್ದಾರೆ.

ಕಿರುತೆರೆ ಲೋಕದಲ್ಲಿ ಪ್ರೇಕಕ್ಷಕರನ್ನುಕತೂಹಲದಲ್ಲಿ ಮುಳುಗಿಸಿರುವ ಬಿಗ್‌ಬಾಸ್‌ ಇದೀಗ ಅಂತಿಮ ಘಟ್ಟ ತಲುಪಿಸಿದೆ. ದಿವ್ಯ ಉರುಡುಗ, ಅರವಿಂದ್‌ ಕೆ.ಪಿ. ಮಂಜುನಾಥ್‌ ಪಾವಗಡ ಈಗಾಗಲೇ ಅಂತಿಮ ಮೂರರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಬಿಗ್‌ಬಾಸ್‌ ಕಿರೀಟವನ್ನು ಪಡೆದುಕೊಳ್ಳುವ ನಿರೀಕ್ಷೆ ಹುಟ್ಟಿಸಿದ್ದ ವೈಷ್ಣವಿ ಗೌಡ ನಾಲ್ಕನೇ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

ವೈಷ್ಣವಿ ಗೌಡ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಟಾಸ್ಕ್ ಹಾಗೂ ತಮ್ಮ ಹಾಸ್ಯದ ಮೂಲಕವೇ ಪ್ರೇಕ್ಷಕರ ಮನ ಗೆದ್ದಿದ್ದರು. ಆದ್ರೆ ಇದೀಗ 10,21,831 ವೋಟ್‍ಗಳನ್ನು ಪಡೆಯುವ ಮೂಲಕ ವೈಷ್ಣವಿ ಬಿಗ್‍ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಆದರೂ ಕೂಡ ವೈಷ್ಣವಿ ಗೌಡ 3.5 ಲಕ್ಷ ರೂಪಾಯಿ ಬಹುಮಾನವನ್ನು ಪಡೆಯಲಿದ್ದಾರೆ. ಈ ಮೊದಲು ಪ್ರಶಾಂತ್‌ ಸಂಬರಗಿ ಐದನೇ ಸ್ಥಾನಿಯಾಗಿ ಬಿಗ್‌ಬಾಸ್‌ ಸ್ಪರ್ಧೆಯಿಂದ ಔಟ್‌ ಆಗಿದ್ದಾರೆ.

ಇದನ್ನೂ ಓದಿ : ಬಿಗ್‌ಬಾಸ್‌ ಮನೆಯಿಂದ ಹೊರಬಂದ ಪ್ರಶಾಂತ್‌ ಸಂಬರಗಿ

ಇದನ್ನೂ ಓದಿ : ನಿಧಿ ಸುಬ್ಬಯ್ಯಗೆ ಕ್ಷಮೆ ಕೇಳಿ ಪತ್ರ ಬರೆದ ಅರವಿಂದ್‌ : I LOVE U ನಿನ್ನ ಹಣೆಯ ಮೇಲೆ ಬರೆದುಕೋ ಅಂದಿದ್ಯಾಕೆ ನಿಧಿ

(Bigg boss season 8 vaishnavi gowda out biggboss house )

Comments are closed.