ಭಾರತ ಕ್ರಿಕೆಟ್ ತಂಡದ (Indian Cricket Team) ಖ್ಯಾತ ಆಟಗಾರ ವಿರಾಟ್ ಕೊಹ್ಲಿ (Virat Kohli) ವಿಶ್ವಕಪ್ನಲ್ಲಿ (World Cup 2023) ದಕ್ಷಿಣ ಆಫ್ರಿಕಾ ವಿರುದ್ದ ಶತಕ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ದಾಖಲೆ ಹೊಂದಿರುವ ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ತನ್ನ ದಾಖಲೆ ಮುರಿದ ಬೆನ್ನಲ್ಲೇ ಸಚಿನ ತೆಂಡೂಲ್ಕರ್ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ121 ಎಸೆತಗಳಲ್ಲಿ 10 ಬೌಂಡರಿ ನೆರವಿನಿಂದ 101 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಅವರು ಶತಕ ಸಿಡಿಸುತ್ತಿದ್ದಂತೆಯೇ ವಿಶ್ವ ಕ್ರಿಕೆಟ್ ವಿರಾಟ್ ಕೊಹ್ಲಿಯತ್ತ ಚಿತ್ತ ಹರಿಸಿತ್ತು. ವಿಶ್ವಕಪ್ನಲ್ಲಿ ಸತತವಾಗಿ ಆರ್ಭಟಿಸುವ ಮೂಲಕ 49 ಶತಕಗಳನ್ನು ಬಾರಿಸಿದ್ದಾರೆ.

ಈ ಹಿಂದೆ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 49 ಶತಕ ಬಾರಿಸಿದ್ದರು. ಆದರೆ ವಿರಾಟ್ ಕೊಹ್ಲಿ ಅತೀ ಕಡಿಮೆ ಪಂದ್ಯಗಳಲ್ಲಿಯೇ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇನ್ನೊಂದು ಶತಕ ಬಾರಿಸಿದ್ರೆ ವಿರಾಟ್ ಕೊಹ್ಲಿ ಅತೀ ಹೆಚ್ಚು ಶತಕ ಸಿಡಿಸಿದ ನಂ.1 ಆಟಗಾರ ಎನಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ : ವಿಶ್ವಕಪ್ 2023 : ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಯಾರಾಗ್ತಾರೆ ಟೀಂ ಇಂಡಿಯಾ ನಾಯಕ ?
ವಿಶ್ವಕಪ್ನಲ್ಲಿ ಅದ್ನುತ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ಎಂಟು ಪಂದ್ಯಗಳ ಪೈಕಿ ಒಟ್ಟು ಮೂರು ಶತಕ ಸಿಡಿಸಿದ್ದಾರೆ. ಆದರೆ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಲು ಅವಕಾಶವಿದ್ದರೂ ಕೂಡ ಅಂತಿಮ ಕ್ಷಣದಲ್ಲಿ ಶತಕದಿಂದ ವಂಚಿತರಾಗಿದ್ದರು. ನ್ಯೂಜಿಲೆಂಡ್ ವಿರುದ್ದ ವಿರಾಟ್ ಕೊಹ್ಲಿ 95 ರನ್ ಗಳಿಸಿ ಔಟಾದ್ರೆ, ಶ್ರೀಲಂಕಾ ವಿರುದ್ಧ 88 ರನ್ ಗಳಿಸಿ ಫೆವಿಲಿಯನ್ ಹಾದಿ ಹಡಿದಿದ್ದರು.
ವಿರಾಟ್ ಕೊಹ್ಲಿ ಅವರ ಸಾಧನೆಯನ್ನು ವಿಶ್ವ ಕ್ರಿಕೆಟ್ ಕೊಂಡಾಡುತ್ತಿದೆ. ಅದ್ರಲ್ಲೂ ತನ್ನ ದಾಖಲೆಯನ್ನು ಸರಿಗಟ್ಟಿದ ಬಳಿಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದು, ವಿರಾಟ್ ಕೊಹ್ಲಿ ಸಾಧನೆಯನ್ನು ಗುಣಗಾನ ಮಾಡಿದ್ದಾರೆ. ನಾನು ಎಂದಿಗೂ ಉತ್ತಮವಲ್ಲ, ವಿರಾಟ್ ಕೊಹ್ಲಿ ಸಾಧನೆಗೆ ಸೆಲ್ಯೂಟ್ ಎಂದಿದ್ದಾರೆ.
ವಿರಾಟ್ ತುಂಬಾ ಚೆನ್ನಾಗಿ ಆಡಿದ್ದಾರೆ. ಈ ವರ್ಷವೇ ಅವರು 49 ರಿಂದ 50 ಶತಕ ಪೂರೈಸಲಿದ್ದಾರೆ. ನನಗೆ 49 ಶತಕ ಸಿಡಿಸಲು 365 ದಿನಗಳು ಬೇಕಾಗಿದ್ದವು. ಆದರೆ ನೀವು 49 ರಿಂದ 50 ಶತಕಗಳನ್ನು ಸಿಡಿಸುವ ಮೂಲಕ ನಮ್ಮ ದಾಖಲೆಯನ್ನು ಮುರಿಯುತ್ತೀರಿ ಎಂದಿದ್ದಾರೆ. ನಿಮ್ಮ ಸಾಧನೆಗೆ ಅಭಿನಂದನೆಗಳು ಎಂದಿದ್ದಾರೆ.

ಇನ್ನು ಸಚಿನ್ ತೆಂಡೂಲ್ಕರ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ ಸಂದೇಶವು ತುಂಬಾ ವಿಶೇಷವಾಗಿದೆ. ನನ್ನ ನಾಯಕನ ದಾಖಲೆಯನ್ನು ಸರಿಗಟ್ಟಿದ್ದು ದೊಡ್ಡ ಗೌರವ. ನಾಣು ಅವರಷ್ಟು ಒಳ್ಳೆಯವನಲ್ಲ. ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿರುವುದು ಒಂದು ಭಾವನಾತ್ಮಕ ಕ್ಷಣ ಎಂದಿದ್ದಾರೆ.
ಇದನ್ನೂ ಓದಿ : India Vs Sri Lanka : ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಪಾಲಿಗೆ 3 ಕೆಟ್ಟ ದಿನಗಳು !
ಸಚಿನ್ ತೆಂಡೂಲ್ಕರ್ ಅವರನ್ನು ನಾನು ಟಿವಿಯಲ್ಲಿ ನೋಡಿದ ದಿನಗಳು ಗೊತ್ತಿದೆ. ನಾನು ಕ್ರಿಕೆಟ್ಗೆ ಬಂದಿರುವ ದಿನಗಳೂ ಗೊತ್ತಿದೆ. ಅವರಿಂದ ಮೆಚ್ಚುಗೆ ಪಡೆಯುವುದು ನನಗೆ ತುಂಬಾ ಖುಷಿ ಕೊಟ್ಟಿದೆ ಎಂದು ವಿರಾಟ್ ಕೊಹ್ಲಿ ಪಂದ್ಯದ ಬಳಿಕ ಹೇಳಿದ್ದಾರೆ.
Virat Kohli 49 century world record, Why did Sachin Tendulkar say this about Kohli who equalled his record ?