Virat Kohli batting Strategy : “ರೋಹಿತ್ ಮತ್ತು ರಾಹುಲ್ ಹೇಳಿದ್ರು..” ಆಸೀಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಸ್ಟ್ರಾಟಜಿ ರಹಸ್ಯ ಬಿಚ್ಟಿಟ್ಟ ಕಿಂಗ್ ಕೊಹ್ಲಿ

ಹೈದರಾಬಾದ್: (Virat Kohli batting Strategy) ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಆಡಿದ ಅಮೋಘ ಆಟವನ್ನು ನೀವು ಖಂಡಿತಾ ನೋಡಿರ್ತೀರಿ. ಗೆಲ್ಲಲು ಆಸೀಸ್ ಒಡ್ಡಿದ 187 ರನ್ ಟಾರ್ಗೆಟ್ ಮುಂದೆ ಟೀಮ್ ಇಂಡಿಯಾ ಆರಂಭಿಕರು ಬೇಗನೆ ಔಟಾದಾಗ ತಂಡಕ್ಕೆ ರಕ್ಷಾ ಕವಚವಾಗಿ ನಿಂತದ್ದು ವಿರಾಟ್ ಕೊಹ್ಲಿ. ಆರಂಭ ದಿಂದಲೇ ಬಿರುಸಿನ ಆಟಕ್ಕೆ ಮುಂದಾಗಿದ್ದ ವಿರಾಟ್ ಕೊಹ್ಲಿ, ಭಾರತದ ಪ್ರತಿಹೋರಾಟದ ನೇತೃತ್ವ ವಹಿಸಿ ಅಮೋಘ ಅರ್ಧಶತಕ ಬಾರಿಸಿದರು. ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾಗಿದ್ದ ಕೊಹ್ಲಿ, ಇನ್ನಿಂಗ್ಸ್ ಮಧ್ಯದ ಓವರ್’ಗಳಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಅಬ್ಬರಿಸಲು ಆರಂಭಿಸಿದಾಗ ವಿರಾಟ್ ಕೊಹ್ಲಿ ತಾಳ್ಮೆಯ ಆಟವಾಡಿದರು. ಆಸೀಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಸ್ಟ್ರಾಟಜಿಯ ಏನಾಗಿತ್ತು ಎಂಬುದನ್ನು ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.


“ಸೂರ್ಯಕುಮಾರ್ ಯಾದವ್ ದೊಡ್ಡ ಹೊಡೆತಗಳನ್ನು ಬಾರಿಸಲು ಆರಂಭಿಸಿದಾಗ ನಾನು ಡಗೌಟ್’ನತ್ತ ನೋಡಿದೆ. ಸೂರ್ಯ ಅಬ್ಬರಿಸುತ್ತಿದ್ದಾನೆ, ನೀನು ವಿಕೆಟ್ ನೀಡದೆ ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್ ಮುಂದುವರಿಸು ಎಂದು ಕೋಚ್ ರಾಹುಲ್ ದ್ರಾವಿಡ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ಕೈ ಸನ್ನೆ ಮೂಲಕ ಹೇಳಿದರು. ಅದರಂತೆ ನಾನು ಆಡಿದೆ” ಎಂದು ಪಂದ್ಯದ ನಂತರ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ನಿಗದಿತ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಭಾರತ 19.5 ಓವರ್’ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 187 ರನ್ ಗಳಿಸಿ ಸರಣಿ ಕೈವಶ ಮಾಡಿಕೊಂಡಿತು.

ಆರಂಭಿಕರಾದ ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ 30 ರನ್’ಗಳ ಒಳಗೆ ಪೆವಿಲಿಯನ್ ಸೇರಿಕೊಂಡಾಗ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಶತಕದ ಜೊತೆಯಾಟವಾಡಿ ತಂಡದ ಗೆಲುವಿಗೆ ಕಾರಣರಾದರು. ವಿರಾಟ್ ಕೊಹ್ಲಿ 48 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್’ಗಳ ಸಹಿತ 63 ರನ್ ಗಳಿಸಿದ್ರೆ, ಸ್ಫೋಟಕ ಆಟವಾಡಿದ ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ಸ್ ನೆರವಿನಿಂದ 69 ರನ್ ಬಾರಿಸಿ ಪಂದ್ಯಶ್ರೇಷ್ಠರಾಗಿ ಮೂಡಿಬಂದರು. ಆಸ್ಟ್ರೇಲಿಯಾ ವಿರುದ್ಧದ ಸರಣಿ ಕೈವಶ ಮಾಡಿಕೊಂಡಿರುವ ಭಾರತ, ಸೆಪ್ಟೆಂಬರ್ 28ರಿಂದ ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Virat Kohli Rohit Sharma : ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ಮಧ್ಯೆ ಕೋಲ್ಡ್ ವಾರ್ ಇದ್ಯಾ..? ಹಾಗಾದ್ರೆ ಇದೇನು ?

ಇದನ್ನೂ ಓದಿ : Arjun Tendulkar Yograj Singh : ಸಚಿನ್ ತೆಂಡೂಲ್ಕರ್ ಪುತ್ರನಿಗೆ ಯುವರಾಜ್ ಸಿಂಗ್ ತಂದೆಯೇ ಕೋಚ್

Virat Kohli INDvAUS 3rd T202 Virat Kohli Revels Batting Strategy

Comments are closed.