WTC final 2023 : WTC 2021-23ರಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ಸರಾಸರಿ ನೋಡಿದ್ರೆ ಬೆಚ್ಚಿ ಬೀಳ್ತೀರಿ..!

ಬೆಂಗಳೂರು : (WTC final 2023) ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಡಿಫೆನ್ಸ್‌ಗೆ ಹೆಸರಾದವರು. ಬ್ಯಾಟಿಂಗ್ ವಿಚಾರಕ್ಕೆ ಬಂದ್ರೆ ದ್ರಾವಿಡ್ ಅವರ ಡಿಫೆನ್ಸ್ ಅತ್ಯುತ್ತಮ. ಆದರೆ ಅದೇ ಡಿಫೆನ್ಸ್ ಅನ್ನು ಅವರು ಭಾರತ ತಂಡದ ಈಗಿನ ಬ್ಯಾಟ್ಸ್‌ಮನ್‌ಗಳನ್ನು ಸಮರ್ಥಿಸಿಕೊಳ್ಳಲು ಬಳಸಿಕೊಳ್ಳಲೇಬಾರದು.

ಕಳೆದ ಭಾನುವಾರ ಇಂಗ್ಲೆಂಡ್‌ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಅಂತ್ಯಗೊಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (ICC World test Championship final – WTC final 2023) ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 209 ರನ್‌ಗಳ ಹೀನಾಯ ಸೋಲು ಕಂಡಿದೆ.

ಆಸ್ಟ್ರೇಲಿಯಾ ವಿರುದ್ಧ ಭಾರತದ ಸೋಲಿಗೆ ಕಾರಣ ಅಗ್ರಕ್ರಮಾಂಕದ ಬ್ಟಾಟ್ಸ್‌ಮನ್‌ಗಳ ಹೀನಾಯ ಪ್ರದರ್ಶನ. ಕಂಬ್ಯಾಕ್ ಹೀರೋ ಅಜಿಂಕ್ಯ ರಹಾನೆ ಹೊರತು ಪಡಿಸಿದರೆ ಬೇರೆ ಯಾವ ಬ್ಯಾಟ್ಸ್‌ಮನ್ ಕೂಡ ಎರಡೂ ಇನ್ನಿಂಗ್ಸ್‌ಗಳಲ್ಲಿ ಕನಿಷ್ಠ ಅರ್ಧಶತಕವನ್ನೂ ಗಳಿಸಿರಲಿಲ್ಲ. ಇದರ ಪರಿಣಾಮ ಭಾರತ ಪ್ರಥಮ ಇನ್ನಿಂಗ್ಸ್‌ನಲ್ಲಿ 296 ರನ್ನಿಗೆ ಆಲೌಟಾದ್ರೆ, 2ನೇ ಇನ್ನಿಂಗ್ಸ್‌ನಲ್ಲಿ 234 ರನ್ನಿಗೆ ಮುಗ್ಗರಿಸಿ ಹೀನಾಯ ಸೋಲು ಕಂಡಿತ್ತು. ಕೆಳ ಕ್ರಮಾಂಕದಲ್ಲಿ ಶಾರ್ದೂಲ್ ಠಾಕೂರ್ ಪ್ರಥಮ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸುವ ಮೂಲಕ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳಿಗೆ ಬ್ಯಾಟಿಂಗ್ ಪಾಠ ಹೇಳಿ ಕೊಟ್ಟಿದ್ದರು.

WTC 2021-23ನೇ ಸಾಲಿನಲ್ಲಿ ಜಗತ್ತಿನ ಟಾಪ್ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ಸರಾಸರಿ ಮತ್ತು ಭಾರತೀಯ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ಸರಾಸರಿಯ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ಪ್ರಸಕ್ತ ಸಾಲಿನಲ್ಲಿ ಭಾರತದ ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡ 50ರ ಬ್ಯಾಟಿಂಗ್ ಸರಾಸರಿ ದಾಟಿಲ್ಲ.

WTC 2021-23ನೇ ಸಾಲಿನಲ್ಲಿ ಬೆಸ್ಟ್ ಬ್ಯಾಟಿಂಗ್ ಸರಾಸರಿ:

  • ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್): 75.20
  • ಉಸ್ಮಾನ್ ಖವಾಜ (ಆಸ್ಟ್ರೇಲಿಯಾ): 64.84
  • ಬಾಬರ್ ಅಜಂ (ಪಾಕಿಸ್ತಾನ): 61.08
  • ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ): 55.56
  • ಜೋ ರೂಟ್ (ಇಂಗ್ಲೆಂಡ್): 53.19
  • ಮಾರ್ನಸ್ ಲಬುಶೇನ್ (ಆಸ್ಟ್ರೇಲಿಯಾ): 52.53
  • ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ): 52.11
  • ಜಾನಿ ಬೇರ್’ಸ್ಟೋ (ಇಂಗ್ಲೆಂಡ್): 51.40

ಇದನ್ನೂ ಓದಿ : India tour of West Indies 2023 : ಟೀಮ್ ಇಂಡಿಯಾದ ವೆಸ್ಟ್ ಪ್ರವಾಸದ ವೇಳಾಪಟ್ಟಿ ಬಿಡುಗಡೆ, ಕೆರಿಬಿಯನ್ ನಾಡಿನಲ್ಲಿ 2 ಟೆಸ್ಟ್, 3 ಏಕದಿನ, 5 ಟಿ20 ಪಂದ್ಯ

WTC 2021-23ನೇ ಸಾಲಿನಲ್ಲಿ ಭಾರತದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ಸರಾಸರಿ:

  • ಶ್ರೇಯಸ್ ಅಯ್ಯರ್: 44.40
  • ರಿಷಭ್ ಪಂತ್ : 43.40
  • ರೋಹಿತ್ ಶರ್ಮಾ: 42.11
  • ಶುಭಮನ್ ಗಿಲ್: 33.79
  • ವಿರಾಟ್ ಕೊಹ್ಲಿ: 32.13
  • ಚೇತೇಶ್ವರ್ ಪೂಜಾರ: 32.00
  • ಕೆ.ಎಲ್ ರಾಹುಲ್: 30.28
  • ಅಜಿಂಕ್ಯ ರಹಾನೆ: 24.64

WTC final 2023 : You will be shocked if you see the batting average of Indian batsmen in WTC 2021-23..!

Comments are closed.