Airforce plane in Shimoga Airport: ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ಲ್ಯಾಂಡ್ ಆಯ್ತು ವಾಯುಸೇನೆಯ ವಿಮಾನ

ಶಿವಮೊಗ್ಗ: (Airforce plane in Shimoga Airport) ಮಲೆನಾಡಿನ ಮೊದಲ ವಿಮಾನ ನಿಲ್ದಾಣ ಇದೀಗ ಲೋಕಾರ್ಪಣೆಗೆ ಸಜ್ಜಾಗಿದೆ. ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿಂದು ವಾಯುಸೇನೆಯ ವಿಮಾನವೊಂದು ಪ್ರಾಯೋಗಿಕ ಹಾರಾಟ ನಡೆಸಿದೆ. ಲ್ಯಾಂಡಿಂಗ್ ಹಾಗೂ ಟೇಕಾಫ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದೆ. ಮುಂದಿನ ದಿನಗಳಲ್ಲಿ ಕಮರ್ಷಿಯಲ್ ಫ್ಲೈಟ್ ಗಳು ಹಾರಾಟ ನಡೆಸಲಿವೆ.

ಲೋಕಾರ್ಪಣೆಗೆ ಸಿದ್ದವಾಗಿರುವ ಕುವೆಂಪು ವಿಮಾನ ನಿಲ್ದಾಣದಲ್ಲಿನ ರನ್‌ ವೇ ಮತ್ತು ಲ್ಯಾಂಡಿಂಗ್‌ ವ್ಯವಸ್ಥೆಯನ್ನು ಸೇನೆಯ ಪೈಲೆಟ್ ಗಳು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇಂದು ಮಧ್ಯಾಹ್ನ 2.16 ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರಪ್ರಥಮ ವಿಮಾನ ಬಂದಿಳಿದಿದ್ದು, ಈ ವಿಮಾನದ ಪೈಲೆಟ್​ಗೆ ಏರ್​ಪೋರ್ಟ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಸಂಸದ ಬಿ.ವೈ. ರಾಘವೇಂದ್ರ ಹೂಗುಚ್ಚ ನೀಡಿ ಸ್ವಾಗತಿಸಿದ್ದಾರೆ. ಅಲ್ಲದೇ, ನಿಲ್ದಾಣಕ್ಕೆ ಬಂದ ವಿಮಾನಕ್ಕೆ ಫೈರ್ ಇಂಜಿನ್ ಮೂಲಕ ನೀರು ಸಿಂಪಡಿಸಿ, ವೆಲ್ ಕಮ್ ಕೋರಿ ಟರ್ಮಿನಲ್ ಹಿಂಭಾಗದಲ್ಲಿ ಕೆಲ ಸಮಯ ನಿಲ್ಲಿಸಲಾಯಿತು.

ಸುಮಾರು ಅರ್ಧ ಗಂಟೆ ನಿಲ್ಲಿಸಿದ ಬಳಿಕ ವಾಪಾಸ್‌ ಹಿಂತಿರುಗಿದ ಭಾರತೀಯ ವಾಯುಸೇನೆ ವಿಮಾನ, ಕಾಚಿನಕಟ್ಟೆ ಗ್ರಾಮದ ಸುತ್ತ ಒಂದು ಸುತ್ತು ಹಾರಾಟ ನಡೆಸಿ, ಪುನಃ ರನ್ ವೇ ಮೇಲೆ ಬಂದು ಬೆಂಗಳೂರಿಗೆ ಮರಳಿತು. ಮೊದಲ ವಿಮಾನ ಹಾರಾಟ ಕಂಡ ಸ್ಥಳೀಯರು ಮತ್ತು ಏರ್​ಪೋರ್ಟ್​ಗೆ ಭೂಮಿ ನೀಡಿದ ದಾನಿಗಳು ಸಂತಸ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಫೆ.27ರಂದು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದು, ಅದೇ ದಿನ ಒಂದು ಗಂಟೆ ಸುಮಾರಿಗೆ ಪ್ರಧಾನಿ ವಿಮಾನ ನೇರವಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲೇ ಲ್ಯಾಂಡಿಂಗ್ ಆಗಲಿದೆ. ಅಲ್ಲದೇ ಈ ವಿಮಾನ ನಿಲ್ದಾಣಕ್ಕೆ ಕುವೆಂಪು ಎಂದು ಹೆಸರಿಡಲಾಗಿದ್ದು, ಲೋಕಾರ್ಪಣೆಯ ಹೊತ್ತಲ್ಲೇ ಪ್ರಧಾನಿ ಮೋದಿ ಅವರು ಅಧೀಕೃತವಾಗಿ ಗೋಷಣೆ ಮಾಡಲಿದ್ದಾರೆ.

ಇದನ್ನೂ ಓದಿ : Kota Srinivas Poojary : ಶ್ರೀ ನಾರಾಯಣಗುರು ವಸತಿ ಶಾಲೆ : ಕೊನೆಗೂ ಆದೇಶ ಹೊರಡಿಸಿದ ಸಿಎಂ ಬೊಮ್ಮಾಯಿ

ಇದನ್ನೂ ಓದಿ : Kolara students ill: ಚಿತ್ರಾನ್ನ ಸೇವಿಸಿ ಅಸ್ವಸ್ಥರಾಗಿದ್ದ ಮಕ್ಕಳು ಮತ್ತೊಮ್ಮೆ ಅಸ್ವಸ್ಥ

ಇದನ್ನೂ ಓದಿ : Shimoga airport: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷೆಯ ಬಗ್ಗೆ ನಿರ್ಲಕ್ಷ್ಯ : ಕನ್ನಡಿಗರ ಆಕ್ರೋಶ

Airforce plane in Shimoga Airport: Airforce plane landed at Shimoga Airport

Comments are closed.