ಮೈಸೂರು ಗ್ಯಾಂಗ್‌ರೇಪ್‌ : ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಕ್ಷಮೆ ಯಾಚಿಸಿದ ಆರಗ ಜ್ಞಾನೇಂದ್ರ

ಬೆಂಗಳೂರು : ಮೈಸೂರು ಗ್ಯಾಂಗ್‌ರೇಪ್‌ ಪ್ರಕರಣಕ್ಕೆ ಸಂಬಂಧಿಸಿದ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೊನೆಗೂ ಕ್ಷಮೆಯಾಚಿಸಿದ್ದಾರೆ. ನಾನು ಹೇಳಿದ ಮಾತನ್ನು ವಾಪಾಸ್‌ ಪಡೆಯುತ್ತೇನೆ ಎಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರಗ ಜ್ಞಾನೇಂದ್ರ ಅವರು ಮಾತನಾಡು ಭರದಲ್ಲಿ, ಕಾಂಗ್ರೆಸ್‌ನವರು ರಾಜಕೀಯ ಲಾಭಗಳಿಸಲು ಯತ್ನಿಸುತ್ತಿದ್ದಾರೆ. ರೇಪ್‌ ಆಗಿದ್ದು ಅಲ್ಲಿ, ಕಾಂಗ್ರೆಸ್‌ನವರು ನನ್ನನ್ನು ಅತ್ಯಾಚಾರ ಮಾಡುತ್ತಿದ್ದಾರೆ ಎಂದಿದ್ದರು. ಆದ್ರೆ ಈ ಹೇಳಿಕೆಯ ಬೆನ್ನಲ್ಲೇ ತಮ್ಮ ಮಾತನ್ನು ವಾಪಾಸ್‌ ಪಡೆಯುತ್ತೇನೆ. ನಾನು ತಪಾಷೆ ರೀತಿಯಲ್ಲಿ ಮಾತನಾಡಿದ್ದೇನೆ. ಯಾರಿಗೂ ನೋವು ಮಾಡುವ ಉದ್ದೇಶ ನನ್ನದಲ್ಲ ಎಂದಿದ್ದಾರೆ.

ಇದನ್ನೂ ಓದಿ : ಯುವತಿಯ ವಿಡಿಯೋ ಮಾಡಿ 3 ಲಕ್ಷಕ್ಕೆ ಬೇಡಿಕೆಯಿಟ್ಟ ಕಾಮುಕರು : ಮೊಬೈಲ್‌ ಟವರ್‌ ಆಧರಿಸಿ ತನಿಖೆ

ಅಲ್ಲದೇ ಆ ಯುವಕ, ಯುವತಿ ಸಂಜೆ ೭.೩೦ರ ಸುಮಾರಿಗೆ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತಯ. ಆದರೆ ಹೋಗಬೇಡಿ ಎಂದು ತಡೆಯೋದಕ್ಕೆ ಆಗೋದಿಲ್ಲ. ಸದ್ಯ ಯುವಕ ಹಾಗೂ ಯುವತಿ ಶಾಕ್‌ನಲ್ಲಿದ್ದಾರೆ. ಹೀಗಾಗಿ ಅವರಿಂದ ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ಆದರೆ ಅಧಿಕಾರಿಗಳು ಈ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ : ಮೈಸೂರಿನ ಜನರನ್ನ ಬೆಚ್ಚಿ ಬೀಳಿಸಿದೆ  ಗ್ಯಾಂಗ್‌ ರೇಪ್‌ ಪ್ರಕರಣ

ಇದನ್ನೂ ಓದಿ : ಕಾರನ್ನು ನಾಲೆಗೆ ಹಾರಿಸಿ ಆತ್ಮಹತ್ಯೆಗೆ ಯತ್ನ : ಇಬ್ಬರು ನಾಪತ್ತೆ, ತಾಯಿ, ಮಗು ಸೇಫ್‌

(Mysore gangrape: Arrag Jnanendra apologizes after controversial statement )

Comments are closed.