ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ

ಹಾಸನ : ಜಿಲ್ಲೆಯ ಐತಿಹಾಸಿಕ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (Charukeethi Bhattarak Swamiji Passed away) ಅವರು ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಮುಂಜಾನೆ ಮಂಡ್ಯ ಜಿಲ್ಲೆಯ ಬೆಳ್ಳರೂ ಕ್ರಾಸ್​ನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ವಾಮೀಜಿ ಅವರಿಗೆ ಇಂದು ಮುಂಜಾನೆ ದಿಡೀರ್ ಅರೋಗ್ಯ ಸ್ಥಿತಿಯಲ್ಲಿ ಏರು ಪೇರು ಆಗಿದ್ದು, ಕೂಡಲೆ ಶ್ರವಣಬೆಳಗೊಳದ ಜೈನ ಮಠಕ್ಕೆ ವೈದ್ಯರು ಆಗಮಿಸಿ ಪರೀಕ್ಷೆ ನಡೆಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ಕಾರಣಕ್ಕೆ ಶ್ರೀ ಆದಿಚುಂಚನಗಿರಿ ಆಸ್ಪತ್ರೆಗೆ ಸ್ವಾಮೀಜಿಯವರನ್ನ ಸ್ಥಳಾಂತರ ಮಾಡಲಾಗಿತ್ತು. ಅದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸ್ವಾಮೀಜಿ ಅವರು ಕೊನೆಯುಸಿರೆಳೆದಿದ್ದಾರೆ.

ಮೂಲತ ಶ್ರವಣ ಬೆಳಗೊಳದ ಜೈನ ಮಠದ ಸ್ವಾಮೀಜಿಗಳಾದ ಇವರಿಗೆ 13ನೆ ಶತಮಾನದಲ್ಲಿ (1118-19) ಹೊಯ್ಸಳ ದೊರೆ ಬಲ್ಲಾಳರಾಯನು “ಚಾರುಕೀರ್ತಿ” ಎಂದು ಬಿರಿದು ನೀಡಿದನು. ಆಗಿನಿಂದ ಆ ಪೀಠದ ಸ್ವಾಮೀಜಿಗಳಿಗೆ ಸ್ವಸ್ಥಿ ಶ್ರಿ ಚಾರುಕೀರ್ತಿ”ಎಂದೆ ಕರೆಯಲಾಗುತ್ತದೆ. ನಂತರ ಸ್ವಾಮೀಜಿಗಳು ದಕ್ಷಿಣ ಕನ್ನಡದ ನಲ್ಲೂರು ಗ್ರಾಮದಲ್ಲಿ ಜೈನಮಠ ವನ್ನು ಸ್ಥಾಪನೆ ಮಾಡುವುದರ ಜೊತೆಗೆ ಮುಡುಬಿದ್ರೆಯಲ್ಲೂ ಕೂಡ ಮತ್ತೊಂದು ಮಠವನ್ನು ಸ್ಥಾಪನೆ ಮಾಡುತ್ತಾರೆ. ಬಳಿಕ ಕೆಲ ಕಾಲದ ನ೦ತರ ಅವರ ನಲ್ಲೂರಿನಲ್ಲಿ ಸಮಾಧಿ ಸಲ್ಲೇಖನವಾಗುತ್ತದೆ ಇದಕ್ಕೆ ಜೈನ ಪರಿ ಭಾಷೆ ಯಲ್ಲಿ ವ್ರತ ಮರಣ ಎ೦ದು ಹೇಳುತ್ತಾರೆ.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು 1949ರ ಮೇ 3 ರಂದು ಜನಿಸಿದ್ದರು. ಮೂಲತಃ ಕಾರ್ಕಳದ ವರಂಗ ಗ್ರಾಮದವರು. 1970 ರಲ್ಲಿ ಜೈನ ಮಠದ ಪೀಠವೇರಿದ್ದ ಶ್ರೀಗಳು, ಇತಿಹಾಸ ತಜ್ಞ, ತತ್ವಜ್ಞಾನಿ, ಇತಿಹಾಸ, ಕನ್ನಡ, ಸಂಸ್ಕೃತ ದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಪ್ರಾಕೃತ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1981ರ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ನೆರವೇರಿಸಿದ್ದಕ್ಕೆ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಇವರಿಗೆ ಕರ್ಮಯೋಗಿ ಎಂದು ಬಿರುದು ನೀಡಿದ್ದರು.

ಇದನ್ನೂ ಓದಿ : Anjanamurthy : ಮಾಜಿ ಸಚಿವ ಅಂಜನಾಮೂರ್ತಿ ಹೃದಯಾಘಾತ ದಿಂದ ನಿಧನ

ಇದನ್ನೂ ಓದಿ : ಉಡುಪಿ – ಮಂಗಳೂರು : ಗುರುವಾರದಿಂದ ರಂಜಾನ್‌ ಉಪವಾಸ ಆರಂಭ

Charukeethi Bhattarak Swamiji Passed away : Charukeerthi Bhattarak Swamiji of Jain Math passed away

Comments are closed.