By Polls in Karnataka: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಉಪಚುನಾವಣೆ; ಏಪ್ರಿಲ್ 9ಕ್ಕೆ ವೋಟಿಂಗ್!
By Polls in Davanagere South and Bagalkote: ಬಾಗಲಕೋಟೆ ಶಾಸಕರಾಗಿದ್ದ ಹೆಚ್.ವೈ. ಮೇಟಿ ಮತ್ತು ದಾವಣಗೆರೆ ದಕ್ಷಿಣದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಈ ಎರಡು ಕ್ಷೇತ್ರಗಳು ತೆರವಾಗಿದ್ದವು. ಈಗ ಆಯೋಗವು ಈ ಕ್ಷೇತ್ರಗಳಿಗೆ ಮರುಚುನಾವಣೆ ಘೋಷಿಸಿದೆ.
ಬೆಂಗಳೂರು: ಪಂಚರಾಜ್ಯಗಳ ಚುನಾವಣಾ ವೇಳಾಪಟ್ಟಿಯ ಬೆನ್ನಲ್ಲೇ, ಕರ್ನಾಟಕದ ಎರಡು ಪ್ರಮುಖ (By-Poll in Karnataka) ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ದಿನಾಂಕವನ್ನೂ ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ರಾಜ್ಯದ ಬಾಗಲಕೋಟೆ (Bagalkote By-Polls) ಮತ್ತು ದಾವಣಗೆರೆ ದಕ್ಷಿಣ (Davanagere South By Polls) ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ.
ಚುನಾವಣೆಗೆ ಕಾರಣವೇನು?
ಬಾಗಲಕೋಟೆ ಶಾಸಕರಾಗಿದ್ದ ಹೆಚ್.ವೈ. ಮೇಟಿ ಮತ್ತು ದಾವಣಗೆರೆ ದಕ್ಷಿಣದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಈ ಎರಡು ಕ್ಷೇತ್ರಗಳು ತೆರವಾಗಿದ್ದವು. ಈಗ ಆಯೋಗವು ಈ ಕ್ಷೇತ್ರಗಳಿಗೆ ಮರುಚುನಾವಣೆ ಘೋಷಿಸಿದೆ.
ಪ್ರಮುಖ ದಿನಾಂಕಗಳು:
-
ಚುನಾವಣಾ ಅಧಿಸೂಚನೆ: ಮಾರ್ಚ್ 16, 2026
-
ನಾಮಪತ್ರ ಸಲ್ಲಿಸಲು ಕೊನೆಯ ದಿನ: ಮಾರ್ಚ್ 24, 2026
-
ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಮಾರ್ಚ್ 26, 2026
-
ಮತದಾನದ ದಿನಾಂಕ: ಏಪ್ರಿಲ್ 9, 2026
-
ಫಲಿತಾಂಶ: ಮೇ 4, 2026
ಟಿಕೆಟ್‌ಗಾಗಿ ತೀವ್ರ ಪೈಪೋಟಿ:
ದಿನಾಂಕ ಘೋಷಣೆಯಾಗುತ್ತಿದ್ದಂತೆ ಎರಡೂ ಪ್ರಮುಖ ಪಕ್ಷಗಳಲ್ಲಿ ಆಕಾಂಕ್ಷಿಗಳ ದಂಡೇ ಸೃಷ್ಟಿಯಾಗಿದೆ.
-
ದಾವಣಗೆರೆ ದಕ್ಷಿಣ: ಇಲ್ಲಿ ಶಾಮನೂರು ಕುಟುಂಬದ ಸಮರ್ಥ ಶಾಮನೂರು ಅವರ ಹೆಸರು ಮುಂಚೂಣಿಯಲ್ಲಿದ್ದರೆ, ಅತ್ತ ಮುಸ್ಲಿಂ ಸಮುದಾಯದಿಂದ ಮೊಹಮ್ಮದ್ ಖಾಲೀದ್ ಅವರು ಟಿಕೆಟ್‌ಗಾಗಿ ಭಾರಿ ಪಟ್ಟು ಹಿಡಿದಿದ್ದಾರೆ. ಬಿಜೆಪಿಯಲ್ಲಿಯೂ ಅನೇಕ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸುತ್ತಾ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.
100 ರೂಪಾಯಿಯಿಂದ 5 ಲಕ್ಷ ಪಡೆಯಿರಿ; SBI ರಿಕರಿಂಗ್ ಡೆಪಾಸಿಟ್ ಯೋಜನೆಯಿಂದ ಸಣ್ಣ ಉಳಿತಾಯ, ದೊಡ್ಡ ಲಾಭ!
-
ಬಾಗಲಕೋಟೆ: ಇಲ್ಲೂ ಕೂಡ ಎರಡೂ ಪಕ್ಷಗಳಲ್ಲಿ ಹೊಸ ಮುಖ ಹಾಗೂ ಹಿರಿಯ ನಾಯಕರ ನಡುವೆ ಟಿಕೆಟ್ ಫೈಟ್ ಜೋರಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಈ ಭಾಗಗಳಲ್ಲಿ ರಾಜಕೀಯ ಚಟುವಟಿಕೆಗಳು ರಂಗೇರಿದ್ದು, ಯಾರು ಅಖಾಡಕ್ಕೆ ಇಳಿಯಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ.



