ಪಶುವೈದ್ಯೆ ಸಮೀಕ್ಷಾರೆಡ್ಡಿ ಸಾವಿನ ಹಿಂದೆ ಹತ್ತಾರು ಅನುಮಾನ

ಡಾ.ಸಮೀಕ್ಷಾ ರೆಡ್ಡಿ ಟಾರ್ಚ್ ಹಿಡಿದು ಮೊದಲು ವಿಡಿಯೋ ಮಾಡಿದ್ದಾರೆ. ಆ ಟಾರ್ಚ್‌ ಈಗಲೂ ನೀರಾನೆ ಬಳಿಯೇ ಇದೆ ಎಂದಿದ್ದಾರೆ. ಟಾರ್ಚ್‌ಲೈಟ್‌ಗೆ ಕೆರಳಿ ದಾಳಿ ಮಾಡಿತಾ ನೀರಾನೆ ಎಂಬ ಅನುಮಾನವೂ ಇದೆ.

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ನೀರಾನೆ ದಾಳಿಗೆ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ದಾರುಣವಾಗಿ ಮೃತಪಟ್ಟಿದ್ದಾರೆ. ದೇಹದ ಉಷ್ಣತೆಯನ್ನು ಪರೀಕ್ಷಿಸಲು ತೆರಳಿದ್ದ ವೇಳೆ ಗರ್ಭಿಣಿ ನೀರಾನೆ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ಸಮೀಕ್ಷಾ ರೆಡ್ಡಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಅರಣ್ಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ.

ಪಶುವೈದ್ಯೆ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಾಹಿತಿ ನೀಡದೆ ಚಿಕಿತ್ಸೆಗೆ ಹೋಗಿದ್ರು ಅಂಥ ಕೇರ್ ಟೇಕರ್ ಪವನ್ ಹೇಳಿದ್ದಾರೆ. ಹಾಗಾದ್ರೆ ಸಮೀಕ್ಷಾ ರೆಡ್ಡಿ ಕೇರ್‌ ಟೇಕರ್‌ ಗಮನಕ್ಕೆ ತಾರದೆ ನೀರಾನೆ ಬಳಿ ಹೋಗಿದ್ರಾ? ಎಂಬ ಪ್ರಶ್ನೆ ಮೂಡಿದೆ. ಡಾ.ಸಮೀಕ್ಷಾ ರೆಡ್ಡಿ ಟಾರ್ಚ್ ಹಿಡಿದು ಮೊದಲು ವಿಡಿಯೋ ಮಾಡಿದ್ದಾರೆ. ಆ ಟಾರ್ಚ್‌ ಈಗಲೂ ನೀರಾನೆ ಬಳಿಯೇ ಇದೆ ಎಂದಿದ್ದಾರೆ. ಟಾರ್ಚ್‌ಲೈಟ್‌ಗೆ ಕೆರಳಿ ದಾಳಿ ಮಾಡಿತಾ ನೀರಾನೆ ಎಂಬ ಅನುಮಾನವೂ ಇದೆ. ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ಇದೆ. ಆದ್ರೆ ಸಿಬ್ಬಂದಿ ಸಿಸಿಟಿವಿ ದೃಶ್ಯ ಡಿಲೀಟ್ ಆಗಿದೆ ಅಂತಿದ್ದಾರೆ. ಅರಣ್ಯ ಅಧಿಕಾರಿಗಳ ನಿರ್ಲಕ್ಷ ಮುಚ್ಚಿಡುವ ಪ್ರಯತ್ನ ನಡೆದಿದ್ಯಾ..? ಅಧಿಕಾರಿಗಳ ಈ ನಡೆ ಕೂಡಾ ಶಂಕೆ ಮೂಡಿಸುತ್ತಿದೆ.

ರೂಲ್ಸ್ ಬ್ರೇಕ್ ಮಾಡಿದ್ರಾ?

ನೀರಾನೆ ಕೇಜ್‌ಗೆ ಹೋಗಲು ಕೆಲ ನಿಯಮಗಳಿವೆ.

  • ಒಬ್ಬ RFO ಮೆಲ್ಮಟ್ಟದ ಅಧಿಕಾರಿಯೊಬ್ಬರು ಜೊತೆಯಲ್ಲಿ ಇರಬೇಕು. ಕೇಜ್‌ ಒಳಗೆ ಹೋಗುವ ಮುನ್ನ ವಾಟರ್ ಗನ್ ಇರಬೇಕು.
  • ನಾಲ್ಕು ಜನ ಕೆಲಸ ಮಾಡುವ ಸಿಬ್ಬಂದಿ ಜೊತೆಯಲ್ಲಿ ಇರಬೇಕು. ಪಟಾಕಿಗಳು, ಡಾಟ್ ಗನ್ ಇರಬೇಕು. ಕೇಜ್‌ನ ಪ್ರಾಣಿಪಾಲಕರು ಕಡ್ಡಾಯವಾಗಿ ಇರಲೇಬೇಕು.
  • ಇಷ್ಟೆಲ್ಲಾ ನಿಯಮ ಇದ್ದರೂ ಡಾ ಸಮೀಕ್ಷಾ ರೆಡ್ಡಿ ಹೋಗಿದ್ಹೇಗೆ..? ನಿಯಮಗಳನ್ನು ಮೀರಿ ಕೇಜ್‌ ಒಳಗೆ ಕಳುಹಿಸಿದ್ದು ಯಾರು..? ನೀರಾನೆ ಡೇಂಜರ್‌ ಆಗಿರುತ್ತದೆ ಅನ್ನೋದು ವೈದ್ಯೆಗೂ ಗೊತ್ತೇ ಇರುತ್ತೆ.
  • ಇದು ನಿಜವಾಗಲೂ ನೀರಾನೆಯಿಂದ ನಡೆದಿರುವ ಕೃತ್ಯವೋ..? ಅಥವಾ ಬೇರೆ ಏನಾದ್ರೂ ನಡೆದಿದೆಯಾ? ಅಧಿಕಾರಿಗಳು ಸಿಸಿಟಿವಿ ದೃಶ್ಯ ಕೊಡದೆ ಡಿಲೀಟ್‌ ಅಂತಿರೋದು ಯಾಕೆ? ಈ ಎಲ್ಲಾ

ಪ್ರಶ್ನೆಗಳು ಅನುಮಾನ ಮೂಡಿಸಿವೆ. ತನಿಖೆ ಬಳಿಕವಷ್ಟೇ ಇದೆಲ್ಲದಕ್ಕೂ ಉತ್ತರ ಸಿಗಲಿದೆ.

ಅರಣ್ಯ ಸಚಿವರ ಸಂತಾಪ

ಪಶು ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಸಾವಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸಂತಾಪ ಸೂಚಿಸಿದ್ದಾರೆ. ಇದೊಂದು ದುರದೃಷ್ಟಕರ ಘಟನೆ ಎಂದು ಶೋಕ ವ್ಯಕ್ತಪಡಿಸಿರುವ ಈಶ್ವರ್ ಖಂಡ್ರೆ ಈ ದುಃಖದ ಸಂದರ್ಭದಲ್ಲಿ ಮೃತ ವೈದ್ಯರ ಕುಟುಂಬದೊಂದಿಗೆ ಸರ್ಕಾರ ನಿಲ್ಲುತ್ತದೆ. ಪ್ರತಿಯೊಂದು ಜೀವವೂ ಅಮೂಲ್ಯ. ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದಿದ್ದಾರೆ.

ತನಿಖೆಗೆ ಆದೇಶ
ಈ ದುರಂತದ ಬಗ್ಗೆ ಹಿರಿಯ ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳನ್ನು ಒಳಗೊಂಡ ತಂಡದಿಂದ ತನಿಖೆ ಮಾಡಿಸಿ, 7 ದಿನಗಳ ಒಳಗಾಗಿ ವರದಿ ನೀಡುವಂತೆ ಸಚಿವರು ಆದೇಶಿಸಿದ್ದಾರೆ. ಕುಟುಂಬಸ್ಥರು ಸೂಕ್ತ ತನಿಖೆಯಾಗಿ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories