Exclusive : ಪರಶುರಾಮ ವಿವಾದ inside Story : ನಿಜಕ್ಕೂ ಅವ್ಯವಹಾರ ನಡೆದಿದ್ಯಾ ?

ಕಾರ್ಕಳ (Karkala) : ಕಾರ್ಕಳ ಪರಶುರಾಮ ಮೂರ್ತಿ ವಿವಾದಕ್ಕೆ ಬಿಗ್‌ಟ್ವಿಸ್ಟ್‌ ಸಿಕ್ಕಿದೆ. ಪರಶುರಾಮನ ಮೂರ್ತಿ ಫೈಬರ್‌ ಅಲ್ಲಾ ಅನ್ನೋದು ದೃಢಪಟ್ಟಿದೆ. ಹಾಗಾದ್ರೆ, ನಿಜಕ್ಕೂ ಕಾರ್ಕಳ ಪರಶುರಾಮ ಥೀಮ್‌ ಪಾರ್ಕ್‌ ( Parashurama Theme Park ) ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ಯಾ ?

Kannada News Next Exclusive ಸ್ಟೋರಿಯನ್ನು ನಿಮ್ಮ ಮುಂದೆ ಇಡ್ತಾ ಇದೆ. ಇದಕ್ಕೆ ಪೂರಕ ದಾಖಲೆಯನ್ನು ಒದಗಿಸುತ್ತಿದೆ. ಹಾಗಾದ್ರೆ ಅವ್ಯವಹಾರದ ಆರೋಪ ಕೇಳಿಬಂದಿದ್ದು ಯಾಕೆ ಅನ್ನೋ ಡಿಟೇಲ್ಸ್‌ ಇಲ್ಲಿದೆ.

ಕಾರ್ಕಳ ಪರಶುರಾಮನ ವಿವಾದಕ್ಕೆ ಕಾರ್ಕಳ ಪೊಲೀಸರೇ ತಾರ್ತಿಕ ಅಂತ್ಯ ಹಾಡಿದ್ದಾರೆ. ಪರಶುರಾಮ ಮೂರ್ತಿಯನ್ನು ಫೈಬರ್‌ನಿಂದ ಮಾಡಿಲ್ಲ, ಬದಲಾಗಿ ಇದು ಹಿತ್ತಾಳೆಯ ಮೂರ್ತಿ ಅನ್ನೋದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Karkala Parashurama Theme park : 11 ಕೋಟಿಯ ಯೋಜನೆ : ಬಿಡುಗಡೆ ಆಗಿದ್ದೇ 5.80 ಕೋಟಿ

ಕಾರ್ಕಳ ಪರಶುರಾಮ ಥೀಮ್‌ ಪಾರ್ಕ್‌ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿಗೆ. ಈ ಯೋಜನೆಯನ್ನು ಒಟ್ಟು 14 ಕೋಟಿಯಲ್ಲಿ ಆರಂಭಿಸಲಾಗಿತ್ತು.

ಆದರೆ ಮೊದಲ ಹಂತದಲ್ಲಿ ಉಡುಪಿಯ ನಿರ್ಮಿತಿ ಕೇಂದ್ರ ಸುಮಾರು 11 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತು.

ಕರ್ನಾಟಕ ಸರಕಾರದ ವಿವಿಧ ಇಲಾಖೆಗಳಿಂದ 5.80 ಕೋಟಿ ರೂಪಾಯಿಯನ್ನು ಒಟ್ಟುಗೂಡಿಸಿ ಉಡುಪಿಯ ನಿರ್ಮಿತಿ ಕೇಂದ್ರಕ್ಕೆ ಬಿಡುಗಡೆ ಮಾಡಲಾಗಿದೆ.

ಆದರೆ 11 ಕೋಟಿ ರೂಪಾಯಿ ಕಾಮಗಾರಿಯ ಪೈಕಿ ಉಳಿಕೆಯ 5 ಕೋಟಿಗೂ ಅಧಿಕ ಹಣವನ್ನು ಸರಕಾರ ಉಡುಪಿಯ ನಿರ್ಮಿತಿ ಕೇಂದ್ರಕ್ಕೆ ಇಂದಿಗೂ ಬಿಡುಗಡೆ ಮಾಡಿಲ್ಲ.

ಸರಕಾರದಿಂದ ಬಿಡುಗಡೆ ಆಗಿರುವ 5.80 ಕೋಟಿ ರೂಪಾಯಿ ಹಣದಲ್ಲಿ ಉಡುಪಿಯ ನಿರ್ಮಿತಿ ಕೇಂದ್ರ 1.25 ಕೋಟಿ ರೂಪಾಯಿಯನ್ನು ಪರಶುರಾಮ ಮೂರ್ತಿಯ ಶಿಲ್ಪಿ ಕೃಷ್ಣ ನಾಯ್ಕ್‌ ಅವರಿಗೆ ಸೇರಿದ ಕ್ರಿಶ್‌ ಆರ್ಟ್‌ ವಲ್ಡ್‌ನ ಬ್ಯಾಂಕ್‌ ಖಾತೆಗೆ ಜಮೆ ಮಾಡಿದೆ.

11 ಕೋಟಿ ರೂಪಾಯಿ ಯೋಜನೆಗೆ ನಿರ್ಮಿತಿ ಕೇಂದ್ರ ಸುಮಾರು 1.98 ಕೋಟಿ ರೂಪಾಯಿಯನ್ನು ಜಿಎಸ್‌ಟಿ ಪಾವತಿಸಬೇಕಾಗಿತ್ತು.

Exclusive Karkala Parashurama Theme park controversy inside Story Did a scam really happen in Kannada News

ಹೀಗಾಗಿ ಸರಕಾರದಿಂದ ಬಿಡುಗಡೆ ಆದ ಹಣದಲ್ಲಿ ನಿರ್ಮಿತಿ ಕೇಂದ್ರಕ್ಕೆ ಉಳಿಕೆ ಆಗಿರುವುದು 2.59 ಕೋಟಿ ರೂಪಾಯಿ ಮಾತ್ರ.

ಎರಡು ಕೋಟಿ ರೂಪಾಯಿ ಹಣದಲ್ಲಿ ಪರಶುರಾಮನ ಥೀಮ್‌ ಪಾರ್ಕ್‌ ನಿರ್ಮಾಣ ಮಾಡೋದಕ್ಕೆ ಸಾಧ್ಯಾನಾ ? ಆದರೂ ಉಡುಪಿಯ ನಿರ್ಮಿತಿ ಕೇಂದ್ರ ತನ್ನ ಖಾತೆಯಲ್ಲಿದ್ದ ಹಣವನ್ನು ಬಳಕೆ ಮಾಡಿಕೊಂಡು ಪರಶುರಾಮ ಥೀಮ್‌ ಪಾರ್ಕ್‌ ನಿರ್ಮಾಣ ಮಾಡಿತ್ತು.

ಅಷ್ಟೇ ಅಲ್ಲಾ ಲೋಕಾರ್ಪಣೆಯನ್ನು ಮಾಡಿದೆ. ನಿರ್ಮಿತಿ ಕೇಂದ್ರ ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ರಸ್ತೆ, ವಿದ್ಯುತ್‌, ನೀರು ಸೇರಿದಂತೆ ಇತರ ಮೂಲಭೂತ ಸೌಕರ್ಯವನ್ನು ಕಲ್ಪಿಸಿದೆ.

ಅಲ್ಲದೇ ಜೊತೆಗೆ ಪರಶುರಾಮನ 33 ಅಡಿ ಎತ್ತರದ ಮೂರ್ತಿ, ಬಯಲು ರಂಗ ಮಂದಿರ, ಕಲಾ ಗ್ಯಾಲರಿ, ಭಜನಾ ಮಂದಿರ, ಆಧುನಿಕ ಆಡಿಯೋ – ವಿಶುವಲ್‌ ಮ್ಯೂಸಿಯಂ ಇದೆ.

450 ಅಡಿ ಎತ್ತರದ ಬೆಟ್ಟದ ಮೇಲೆ ವೀಕ್ಷಣಾಲಯ, ಪರಶುರಾಮನ ಕುರಿತಾದ ಮ್ಯೂರಲ್‌ ಪೈಟಿಂಗ್‌ ಇರುವ ಹಾಲ್‌, ಪ್ರವಾಸಿಗರ ಅನುಕೂಲಕ್ಕಾಗಿ ರೆಸ್ಟೋರೆಂಟ್‌ ನಿರ್ಮಾಣ ಮಾಡಲಾಗಿದೆ.

ಕೇವಲ 2 ಕೋಟಿ ರೂಪಾಯಿ ಹಣದಲ್ಲಿ ಇಷ್ಟೆಲ್ಲಾ ಕಾಮಗಾರಿ ನಡೆಸೋದಕ್ಕೆ ಸಾಧ್ಯವೇ ? ಕರ್ನಾಟಕ ಸರಕಾರ ಪರಶುರಾಮ ಥೀಮ್‌ ಪಾರ್ಕ್‌ಗೆ ಬಿಡುಗಡೆ ಮಾಡಬೇಕಾಗಿದ್ದ 5 ಕೋಟಿಗೂ ಅಧಿಕ ಹಣವನ್ನು ಸರಕಾರ ಇಂದಿಗೂ ಬಿಡುಗಡೆ ಮಾಡಿಲ್ಲ.

ಪರಶುರಾಮನ ಮೂರ್ತಿ ಫೈಬರ್‌ ನಿಂದ ಮಾಡಲಾಗಿದೆ ಅನ್ನೋ ಆರೋಪವನ್ನು ಹೊರತು ಪಡಿಸಿದ್ರೆ, ಇತರ ಯಾವುದೇ ಕಾಮಗಾರಿಯಲ್ಲಿ ಲೋಪ ಆಗಿದೆ ಅಂತಾ ಯಾರೂ ಆರೋಪಿಸಿಲ್ಲ.

ಇದನ್ನೂ ಓದಿ : ಕಾರ್ಕಳ ಪರಶುರಾಮನ ಮೂರ್ತಿ ಹಿತ್ತಾಳೆ, ಫೈಬರ್‌ ಅಂದವರಿಗೆ ಹಿನ್ನೆಡೆ : ಪೊಲೀಸರಿಂದ ಚಾರ್ಜ್‌ಶೀಟ್‌ ಸಲ್ಲಿಕೆ

ಆದ್ರೆ ಮೂರ್ತಿಯನ್ನೂ ಕೂಡ ಫೈಬರ್‌ ನಿಂದ ನಿರ್ಮಿಸಿಲ್ಲ, ಬದಲಾಗಿ ಹಿತ್ತಾಳೆಯಿಂದ ಮಾಡಲಾಗಿದೆ ಅನ್ನೋದನ್ನು ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.

ಕಂಚು, ಹಿತ್ತಾಳೆ ಎರಡೂ ಕೂಡ ಮಿಶ್ರ ಲೋಹ. ಎರಡಕ್ಕೂ ಅತ್ಯಧಿಕ ಪ್ರಮಾಣದಲ್ಲಿ ತಾಮ್ರವನ್ನೇ ಬಳಕೆ ಮಾಡ್ತಾರೆ. ದೇಶದಲ್ಲಿ ನಿರ್ಮಾಣಗೊಂಡಿರುವ ಎಲ್ಲಾ ಕಂಚಿನ ಪ್ರತಿಮೆಯನ್ನು ತಜ್ಞರ ಅಧ್ಯಯನಕ್ಕೆ ಒಳಪಡಿಸಿದ್ರೆ ಸತ್ಯಾಸತ್ಯತೆ ಹೊರ ಬೀಳಲಿದೆ.

ಆದರೆ ರಾಜ್ಯ ಸರಕಾರ ಥೀಮ್‌ ಪಾರ್ಕ್‌ ಗೆ ಬಿಡುಗಡೆ ಮಾಡಬೇಕಾಗಿದ್ದ ಹಣವನ್ನು ತಡೆ ಹಿಡಿದು, ಅಕ್ರಮದ ಆರೋಪ ಮಾಡ್ತಾ ಇರೋದು ಸರಿನಾ ಅನ್ನೋದು ಕಾರ್ಕಳದ ನಿವಾಸಿಗಳ ಪ್ರಶ್ನೆ.

Karkala Parashurama Theme park : ಪರಶುರಾಮ ಮೂರ್ತಿ ವೆಚ್ಚ 2.05 ಕೋಟಿ : ಬಿಡುಗಡೆ ಆಗಿದ್ದು ಕೇವಲ 1.25 ಕೋಟಿ..!

ಬೆಂಗಳೂರಿನ ಕ್ರಿಶ್‌ ಆರ್ಟ್‌ ವಲ್ಡ್‌ಗೆ ಪರಶುರಾಮ ಮೂರ್ತಿಯ ನಿರ್ಮಾಣ ಮಾಡಲು 1.83 ಕೋಟಿ ರೂಪಾಯಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಗುತ್ತಿಗೆ ಹಣಕ್ಕೆ ಹೆಚ್ಚುವರಿಯಾಗಿ ಶೇಕಡಾ 18 ರಷ್ಟು ಹಣವನ್ನು ನಿರ್ಮಿತಿ ಕೇಂದ್ರ ಪಾವತಿಸಬೇಕಾಗಿತ್ತು.

ಪರಶುರಾಮ ಮೂರ್ತಿಯ ಒಟ್ಟು ವೆಚ್ಚ 2.05 ಕೋಟಿ ರೂಪಾಯಿ ಆಗಿತ್ತು. ಆದರೆ ಉಡುಪಿಯ ನಿರ್ಮಿತಿ ಕೇಂದ್ರ ಇದುವರೆಗೆ ಕ್ರಿಶ್‌ ಆರ್ಟ್‌ ವಲ್ಡ್‌ ಖಾತೆಗೆ ಒಟ್ಟು 1,25,50,000 ರೂಪಾಯಿಯನ್ನು ಜಮೆ ಮಾಡಿದೆ.

Exclusive Karkala Parashurama Theme park controversy inside Story Did a scam really happen in Kannada News

ಈ ಕುರಿತ ದಾಖಲೆಯನ್ನು ನ್ಯೂಸ್‌ ನೆಕ್ಸ್ಟ್‌ ನಿಮ್ಮ ಮುಂದೆ ಇಟ್ಟಿದೆ. ಶಿಲ್ಪಿ ಕೃಷ್ಣ ನಾಯ್ಕ್‌ ಅವರಿಗೆ ಉಳಿಕೆಯ 80 ಲಕ್ಷ ರೂಪಾಯಿ ಹಣವನ್ನು ಇಂದಿಗೂ ನಿರ್ಮಿತಿ ಕೇಂದ್ರ ಪಾವತಿ ಮಾಡಿಲ್ಲ.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಬದಲಾವಣೆ ಖಚಿತ : ಡಿಕೆ ಶಿವಕುಮಾರ್‌ ಅಲ್ಲ, ಈ ನಾಯಕನಿಗೆ ಕರ್ನಾಟಕ ಸಿಎಂ ಪಟ್ಟ

ಆದರೂ ಶಿಲ್ಪಿ ಕೃಷ್ಣ ನಾಯ್ಕ್‌ ಬಾಕಿ ಹಣವನ್ನು ತಾನೇ ಹೊಂದಿಸಿಕೊಂಡು ಕಾರ್ಕಳದಲ್ಲಿ ಪರಶುರಾಮನ ಮೂರ್ತಿಯನ್ನು ನಿಲ್ಲಿಸಿದ್ದರು.

ಕರ್ನಾಟಕದ ಕಾಂಗ್ರೆಸ್‌ ಸರಕಾರ ಪರಶುರಾಮ ಮೂರ್ತಿ ನಿರ್ಮಾಣಕ್ಕೆ ಬೇಕಾದ ಹಣವನ್ನು ಸಂಪೂರ್ಣವಾಗಿ ಪಾವತಿ ಮಾಡದೇ ಶಿಲ್ಪಿಯ ಮೇಲೆ ಜಿಎಸ್‌ಟಿ ವಂಚನೆಯ ಕುರಿತು ಪ್ರಕರಣ ದಾಖಲಿಸಿದೆ.

Karkala Parashurama Theme park : ಯೋಜನೆಗೆ ಪೂರ್ಣ ಹಣ ನೀಡದೇ ಅವ್ಯವಹಾರದ ಆರೋಪ..!

ಸರಕಾರ ಯಾವುದೇ ಯೋಜನೆಗೆ ಸಂಪೂರ್ಣ ಹಣವನ್ನು ಸರಕಾರ ಬಿಡುಗಡೆ ಮಾಡಿ, ಕಾಮಗಾರಿಗೂ ಪೂರ್ಣಗೊಂಡ ನಂತರದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡುವುದರಲ್ಲಿ ಅರ್ಥವಿದೆ.

ಆದ್ರೆ ಸರಕಾರ ಬಿಡುಗಡೆ ಮಾಡಬೇಕಾದ ಹಣವನ್ನೇ ಇದುವರೆಗೂ ಬಿಡುಗಡೆ ಮಾಡದೆ, ಕಾಂಗ್ರೆಸ್‌ ನಾಯಕರು ಅವ್ಯವಹಾರದ ಆರೋಪ ಮಾಡುವುದು ಸರಿಯಾ ಅಂತಾ ಜನ ಪ್ರಶ್ನಿಸುತ್ತಿದ್ದಾರೆ.

ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣವಾಗಬೇಕಾಗಿದ್ದ ಪರಶುರಾಮನ ಥೀಮ್‌ ಪಾರ್ಕ್‌ ಕಳೆದ ಎರಡು ವರ್ಷಗಳಿಂದಲೂ ಪ್ರವಾಸಿಗರೇ ಇಲ್ಲದೇ ಸೊರಗಿ ಹೋಗಿದೆ. ಫೈಬರ್‌ ಮೂರ್ತಿ ಅಂತಾ ಸುಳ್ಳು ಆರೋಪ ಮಾಡಿ ಎರಡು ವರ್ಷಗಳನ್ನು ವ್ಯರ್ಥ ಮಾಡಲಾಗಿದೆ ಅಂತಾ ಜನರು ಆರೋಪಿಸುತ್ತಿದ್ದಾರೆ.

ಸರಕಾರ ಆದಷ್ಟು ಶೀಘ್ರದಲ್ಲಿ ಪರಶುರಾಮ ಥೀಮ್‌ ಪಾರ್ಕ್‌ಗೆ ಬಿಡುಗಡೆ ಆಗಿದ್ದ ಪೂರ್ಣ ಹಣವನ್ನು ನಿರ್ಮಿತಿ ಕೇಂದ್ರಕ್ಕೆ ಪಾವತಿ ಮಾಡಬೇಕಾಗಿದೆ. ಈ ಮೂಲಕ ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣ ಪ್ರವಾಸಿಗರಿಗೆ ತೆರದುಕೊಳ್ಳಬೇಕಾಗಿದೆ.

Exclusive Karkala Parashurama Theme park controversy inside Story: Did a scam really happen in Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories