Fire at Forest: ಬಂಡೀಪುರ ಅರಣ್ಯಕ್ಕೆ ಬೆಂಕಿ: ಹೊತ್ತಿ ಉರಿದ ಕಾಡು, ಅಪಾರ ಹಾನಿ

ಚಾಮರಾಜನಗರ: (Fire at Forest) ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಗೌರಿಕಲ್ಲು ಬೆಟ್ಟ ಎಂಬಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸರಿಸುಮಾರು 25-30 ಹೆಕ್ಟೇರ್‌ ನಷ್ಟು ಕಾಡು ಬೆಂಕಿಗಾಹುತಿಯಾಗಿವೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಕಾಡಿಗೆ ಬೆಂಕಿ ಹೊತ್ತಿಕೊಂಡಿದ್ದು, ಹುಲ್ಲಿನ ಮೆದೆಗಳು ಬೆಂಕಿಯಲ್ಲಿ ಭಸ್ಮವಾಗಿವೆ.

ದಿನೇ ದಿನೇ ಜಿಲ್ಲೆಯಲ್ಲಿ ವಾತಾವರಣ ಬಿಸಿಲಿನ ತಾಪಕ್ಕೆ ಬಿಸಿ ಏರುತ್ತಿದ್ದು, ಇದರ ಮದ್ಯೆಯೇ ಕಿಡಿಗೇಡಿಗಳು ಈ ಕೃತ್ಯವನ್ನು ನಡೆಸುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಅರಣ್ಯ ಬೆಂಕಿಗಾಹುತಿಯಾಗಿದ್ದು, ಬೆಂಕಿ ವ್ಯಾಪಿಸುತ್ತಿದ್ದಂತೆ ಅರಣ್ಯ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಕಳೆದ ಮೂರು ವರ್ಷಗಳಿಂದ ನಿರಂತರ ಮಳೆ, ಕೊರೊನಾ ಆರ್ಭಟ ಸಂದರ್ಭದಲ್ಲಿ ಕಾಡಿಗೆ ಬೆಂಕಿ ಬೀಳುವ ಕೃತ್ಯಗಳು ನಡೆದಿರಲಿಲ್ಲ. ಆದರೆ ಕೊರೊನಾ ನಂತರದಲ್ಲಿ ಪರಿಸ್ಥಿತಿ ಬದಲಾಗಿದ್ದು, ಕಾಡುಗಳಿಗೆ ಕಂಟಕ ಆರಂಭವಾಗಿದೆ.

ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದಲ್ಲಿ ರೈತರು ಒಂದೇ ಜಾಗದಲ್ಲಿ ಒಂಬತ್ತು ಹುಲ್ಲಿನ ಮೆದೆಗಳನ್ನು ಹಾಕಿದ್ದರು. ಒಂದು ಮೆದೆಗೆ ಹತ್ತಿದ ಬೆಂಕಿ ನಂತರ ಎಲ್ಲದಕ್ಕೂ ವ್ಯಾಪಿಸಿ ಭಾರಿ ನಷ್ಟ ಉಂಟಾಗಿದೆ. ಇದೀಗ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಕೂಡ ಇದೇ ರೀತಿಯಾಗಿ ಕಾಡಿಗೆ ಬೆಂಕಿ ಹಚ್ಚಿ ಕಿಡಿಗೇಡಿಗಳು ದುಷ್ಕೃತ್ಯ ಮೆರೆದಿದ್ದರು. ಇದರಿಂದಾಗಿ ಕಾಡಿನಲ್ಲಿದ್ದ ಅದೆಷ್ಟೂ ಜೀವಿಗಳು ಬೆಂಕಿಗಾಹುತಿಯಾಗಿದ್ದವು.

ಇದನ್ನೂ ಓದಿ : Praveen Nettaru murder case: ಮತ್ತೋರ್ವ ಆರೋಪಿ ಬೆಂಗಳೂರಿನಲ್ಲಿ ಅರೆಸ್ಟ್‌

ಇದನ್ನೂ ಓದಿ : Extension of traffic fines: ವಾಹನ ಸವಾರರಿಗೆ ಗುಡ್‌ನ್ಯೂಸ್‌ : ಸಂಚಾರಿ ದಂಡ ಶೇ.50 ರಷ್ಟು ರಿಯಾಯಿತಿ, ಗಡುವು 15 ದಿನ ವಿಸ್ತರಣೆ

ಇದನ್ನೂ ಓದಿ : ಮಹಿಳಾ ಪ್ರಯಾಣಿಕರನ್ನು ಸೆಳೆಯಲು ಬಿಎಂಟಿಸಿ ಪ್ಲ್ಯಾನ್: ಉಚಿತ ಪ್ರಯಾಣ ಘೋಷಣೆ

Fire at Forest: Fire at Bandipur forest: Forest on fire, huge damage

Comments are closed.