election year : ಚುನಾವಣೆ ವರ್ಷದಲ್ಲಿ ಸರ್ಕಾರಿ ನೌಕಕರಿಗೆ ಸಿಗಲಿದೆಯಾ ಭರ್ಜರಿ ಗಿಫ್ಟ್

election year : ಸರ್ಕಾರಿ ಉದ್ಯೋಗವೇ ಹಾಗೆ, ಒಮ್ಮೆ ಜಾಬ್ ಆದ್ರೆ ಸಾಕು ಆಮೇಲೆ ಲೈಫ್ ಫುಲ್ ಸೆಟಲ್ ಅನ್ನೋದು ಹೆಚ್ಚಿನವರ ಅಭಿಪ್ರಾಯ. ‌ಅದರಲ್ಲೂ ವೇತನ‌ ಹೆಚ್ಚಾಯಿತು ಅಂದ್ರೆ ಅದರಲ್ಲಿ ಸಿಗೋ ಸಂತೋಷ ಮತ್ಯಾವುದರಿಂದಲೂ‌ ಸಿಗಲ್ಲ‌‌‌ ಎಂಬ‌ ಅನುಭವ ಆಗುತ್ತದೆ. ಇದೀಗ ಇದೇ ಸರ್ಕಾರಿ ನೌಕರರಿಗೆ ಹೊಸ ವರ್ಷಾರಂಭದಲ್ಲಿ ವೇತನ ಹೆಚ್ಚಳವಾಗುವ ಸಾಧ್ಯತೆಯಿದೆ. ಈ ಮೂಲಕ ಚುನಾವಣೆ ವರ್ಷದಲ್ಲಿ ನೌಕರ ವರ್ಗಕ್ಕೆ ಭರ್ಜರಿ ಗಿಫ್ಟ್ ದೊರಕಲಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಆರನೇ ವೇತನ ಆಯೋಗದ ವರದಿಯಂತೆ ಸದ್ಯ ವೇತನ‌ ನೀಡಲಾಗುತ್ತಿದೆ. ಆದ್ರೆ ಏಳನೇ ವೇತನ‌ ಆಯೋಗ ಜಾರಿಗೊಳಿಸಬೇಕು ಎಂದು ರಾಜ್ಯ ಸರಕಾರಿ ನೌಕಕರರ ಸಂಘ ಒತ್ತಾಯಿಸಿತ್ತು. ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾದ ವೇತನ‌ ಮತ್ತು ಭತ್ಯೆ ನೀಡುವಂತೆ ಮನವಿಯನ್ನು ಸಹ‌ ಮಾಡಿಕೊಂಡಿತ್ತು. ಬಿ.ಎಸ್.ಯಡಿಯೂರಪ್ಪ ಸಿ.ಎಂ ಆಗಿದ್ದ ಸಂದರ್ಭದಲ್ಲಿ ವೇತನ ಪರಿಷ್ಕರಣೆ ಮಾಡುವ ಭರವಸೆ ನೀಡಿದ್ದರು. ಆದ್ರೆ ಇದು ಕೇವಲ‌ ಭರವಸೆವಾಗಿಯೆ ಉಳಿದಿದ್ದರಿಂದ ನೌಕರರ ಸಂಘ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ವೇತನ‌ ಪರಿಷ್ಕರಣೆ ಮಾಡುವಂತೆ ಮನವಿ ಸಲ್ಲಿಸಿತ್ತು. ಇದೀಗ ಈ ಮನವಿಗೆ ಪೂರಕ ಸ್ಪಂದನೆ ವ್ತಕ್ತವಾದಂತೆ ಕಾಣುತ್ತಿದೆ.

2022-23ನೇ ಸಾಲಿನ ಬಜೆಟ್ ಮೇಲಿನ ಉತ್ತರ ನೀಡುವ ವೇಳೆ ಈ ವಿಚಾರಕ್ಕೆ ಸಂಬಂಧಿಸಿ ಸಿ.ಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ರಾಜ್ಯ ಸರ್ಕಾರ ನೌಕರರ ವೇತನ ಹೆಚ್ಚಳಗೊಳಿಸುವಲ್ಲಿ ಬದ್ದವಾಗಿರಲಿದೆ ಎಂದು ಹೇಳಿದ್ದರು. ಇದಕ್ಕಾಗಿ ಅಧಿಕಾರಿಗಳ ಸಮಿತಿ ರಚಿಸಿ ವೇತನ ಹೆಚ್ಚಳ ಮಾಡಲು ಬೇಕಾದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.

ಇದೀಗ ಸಿ.ಎಂ‌‌‌‌ ಬೊಮ್ಮಾಯಿ ಅವರ ಮಾತಿನಂತೆ ವೇತನ ಪರಿಷ್ಕರಣೆ ಸಂಬಂಧ ಸಮತಿ‌ ರಚನೆ ಮಾಡೋದಕ್ಕೆ ತಯಾರಿಯನ್ನು ನಡೆಸಲಾಗುತ್ತಿದೆ. ಈ ಮೂಲಕ‌ ಚುನಾವಣೆ ವರ್ಷದಲ್ಲಿಯೇ ಭರ್ಜರಿ ಗಿಫ್ಟ್ ನ್ನು ಸರ್ಕಾರ ಸರ್ಕಾರಿ ನೌಕರರಿಗೆ ನೀಡಲಿದೆ. ಈ ಸಮಿತಿ ವರದಿ ನೀಡುವುದಕ್ಕೆ ಮೂರು ತಿಂಗಳ ಗಡುವು ನೀಡಲಾಗಿದೆ ಎಂಬ ಮಾಹಿತಿಯು ಇದೆ. ಜನವರಿ ಪ್ರಾರಂಭದಲ್ಲಿ ಈ ಸಮಿತಿಯಿಂದ ವರದಿ‌‌ ನಿರೀಕ್ಷಿಸಬಹುದಾಗಿದ್ದು ಆ ಬಳಿಕ ಪರಿಷ್ಕೃತ ವೇತನ ನೀತಿಯಂತೆ ವಿವಿಧ ಸೌಲಭ್ಯ ದೊರೆಯಲಿದೆ.

ಇನ್ನು ವೇತನ‌ ಪರಿಷ್ಕರಣೆ ಮಾಡೋದಕ್ಕೆ ಹಣಕಾಸು ಇಲಾಖೆ‌ ಸಕಾರಾತ್ಮಕ ಅಭಿಪ್ರಾಯ ನೀಡಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ವೇತನ ಪರಿಷ್ಕರಣೆಯಾದರೆ ವಾರ್ಷಿಕ ಹನ್ನೆರಡು ಸಾವಿರ ಕೋಟಿ ರೂ ಹೆಚ್ಚುವರಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ನಮ್ಮ‌ರಾಜ್ಯದಲ್ಲಿ ಮಂಜೂರಾದ ಹುದ್ದೆ ಕಡಿಮೆಯಿದ್ದು ಹೆಚ್ಚುವರಿ ಹುದ್ದೆ ಮಂಜೂರು ಮಾಡುವ ಸಾಧ್ಯತೆ‌‌ ಕಡಿಮೆಯಿದೆ. ಹೀಗಾಗಿ ನೌಕರರ ಮೇಲೆ‌ ಹೆಚ್ಚಿನ ಒತ್ತಡವಿದ್ದು,ಈ ಕಾರಣದಿಂದ ವೇತನ ಪರಿಷ್ಕರಣೆ ಮಾಡಬೇಕೆಂಬ ಒತ್ತಾಯವಿದೆ.

ಇದನ್ನು ಓದಿ : BHARAT JODO YATRE: ನಾಳೆಯಿಂದ ಕರುನಾಡಲ್ಲಿ ರಾಹುಲ್ ಜೋಡೋ ಯಾತ್ರೆ

ಇದನ್ನೂ ಓದಿ : Rest of India Team : ಇರಾನಿ ಕಪ್: ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಒಬ್ಬನೇ ಕನ್ನಡಿಗ

Government employees will get a huge gift in the election year

Comments are closed.