ರಾಜ್ಯದ ಮಹಿಳೆಯರೇ ಗಮನಿಸಿ: ವರ್ಷಕ್ಕೊಮ್ಮೆ ನೀವು ಈ ಕೆಲಸ ಮಾಡಲೇಬೇಕು!

Gruhalakshmi Scheme New Rules: ಬೆಂಗಳೂರು: ರಾಜ್ಯದ ಕೋಟ್ಯಂತರ ಮಹಿಳೆಯರ ಆರ್ಥಿಕ ಆಸರೆಯಾಗಿರುವ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಮಹತ್ವದ ಬದಲಾವಣೆಯೊಂದು ಬರಲಿದ್ದು, ಇನ್ಮುಂದೆ ಫಲಾನುಭವಿ ಮಹಿಳೆಯರು ವರ್ಷಕ್ಕೊಮ್ಮೆ ತಮ್ಮ ‘ಅಸ್ತಿತ್ವ’ವನ್ನು ಸಾಬೀತುಪಡಿಸುವುದು ಅನಿವಾರ್ಯವಾಗುವ ಸಾಧ್ಯತೆಯಿದೆ.

ಯೋಜನೆಯ ಹಣ ದುರುಪಯೋಗವಾಗುವುದನ್ನು ತಡೆಯಲು ಮತ್ತು ಅರ್ಹರಿಗೆ ಮಾತ್ರ ತಲುಪುವಂತೆ ಮಾಡಲು ರಾಜ್ಯ ಸರ್ಕಾರ ‘ಜೀವಿತ ಪ್ರಮಾಣ ಪತ್ರ’ (Life Certificate) ನಿಯಮವನ್ನು ಜಾರಿಗೆ ತರಲು ಗಂಭೀರ ಚಿಂತನೆ ನಡೆಸಿದೆ.

ಮಹಿಳೆಯರು ಮಾಡಬೇಕಾಗಿರುವುದೇನು?

ಈ ನಿಯಮ ಅಧಿಕೃತವಾಗಿ ಜಾರಿಯಾದಲ್ಲಿ, ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿರುವ ಸುಮಾರು 1.24 ಕೋಟಿ ಮಹಿಳೆಯರು ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ:

ವರ್ಷಕ್ಕೊಮ್ಮೆ ಭೇಟಿ: ಪ್ರಸ್ತುತ ಸರ್ಕಾರಿ ಪಿಂಚಣಿದಾರರು ಮಾಡುವಂತೆಯೇ, ಮಹಿಳೆಯರು ವರ್ಷಕ್ಕೊಮ್ಮೆ ತಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಬೇಕು.

ಬಯೋಮೆಟ್ರಿಕ್ ದೃಢೀಕರಣ: ಅಲ್ಲಿ ತಮ್ಮ ಬೆರಳಚ್ಚು (Biometric) ಅಥವಾ ಆಧಾರ್ ಆಧಾರಿತ ದೃಢೀಕರಣ ನೀಡುವ ಮೂಲಕ ತಾವು ಜೀವಂತವಿರುವುದನ್ನು ಖಚಿತಪಡಿಸಬೇಕು.

ನವೀಕರಣ: ಹೀಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸಿದ ಮಹಿಳೆಯರ ಖಾತೆಗೆ ಮಾತ್ರ ಮುಂದಿನ ಒಂದು ವರ್ಷದವರೆಗೆ ಪ್ರತಿ ತಿಂಗಳು ₹2,000 ಹಣ ಜಮಾವಣೆಯಾಗುತ್ತಾ ಸಾಗುತ್ತದೆ.

    ಈ ಹೊಸ ನಿಯಮದ ಅವಶ್ಯಕತೆಯೇನು?

    ಅಕ್ರಮಕ್ಕೆ ಬ್ರೇಕ್: ಯೋಜನೆಯ ಕೆಲವು ಫಲಾನುಭವಿಗಳು ಮೃತಪಟ್ಟಿದ್ದರೂ, ಆ ವಿಷಯ ಸರ್ಕಾರದ ಗಮನಕ್ಕೆ ಬಾರದೆ ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮಾವಣೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ತಡೆಯಲು ಈ ಮಾಸ್ಟರ್ ಪ್ಲಾನ್ ಮಾಡಲಾಗಿದೆ.

    ಹಾಸನದಿಂದ ಮುಂದಿನ ಪ್ರಧಾನಿ ಅಥವಾ ಮುಖ್ಯಮಂತ್ರಿ ಆಯ್ಕೆ; ಕೋಡಿಮಠದ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲಜ್ಞಾನ ಶಿವಯೋಗಿ ಸ್ವಾಮೀಜಿ ಭವಿಷ್ಯ

    ಹಣದ ಸದ್ಬಳಕೆ: ಮೃತಪಟ್ಟವರ ಹೆಸರಲ್ಲಿ ವ್ಯರ್ಥವಾಗುವ ಕೋಟ್ಯಂತರ ರೂಪಾಯಿ ಹಣವನ್ನು ಉಳಿಸಿ, ಅದನ್ನು ರಾಜ್ಯದ ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸಲು ಸರ್ಕಾರ ಮುಂದಾಗಿದೆ.

    ಮುಖ್ಯಮಂತ್ರಿಗಳ ಸೂಚನೆ:

    ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಸಲ್ಲಿಸಿದ್ದ ಈ ಪ್ರಸ್ತಾವನೆಯನ್ನು ಸಿಎಂ ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಕುರಿತು ಪರಿಶೀಲಿಸಿ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ.

    ಒಟ್ಟಾರೆಯಾಗಿ, ಗೃಹಲಕ್ಷ್ಮಿ ಹಣ ಯಾವುದೇ ಅಡೆತಡೆಯಿಲ್ಲದೆ ನಿಮ್ಮ ಕೈಸೇರಬೇಕಾದರೆ, ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದ ಕೂಡಲೇ ಈ ‘ಜೀವಿತ ಪ್ರಮಾಣ ಪತ್ರ’ ಸಲ್ಲಿಸುವ ಕೆಲಸವನ್ನು ಮಹಿಳೆಯರು ಮರೆಯದೇ ಮಾಡಬೇಕಾಗುತ್ತದೆ.

    Vidhya | ವಿದ್ಯಾಶ್ರೀ

    ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

    Related Stories