IND vs AFG 3rd ODI : ಭಾರತ – ಅಪ್ಘಾನಿಸ್ತಾನ್‌ ಇಂದೇ ಕೊನೆಯ ಪಂದ್ಯ; ಅರ್ಷದೀಪ್, ಶ್ರೇಯಸ್ ಔಟ್ !

India vs Afghanistan : ಸತತ ಎರಡು ಪಂದ್ಯಗಳನ್ನು ಜಯಿಸಿರುವ ಕಾರಣದಿಂದಲೇ ಭಾರತ ತಂಡದಲ್ಲಿ ಬದಲಾವಣೆ ಆಗುವ ನಿರೀಕ್ಷೆಯಿದೆ. ಅದ್ರಲ್ಲೂ ಇಂದಿನ ಪಂದ್ಯದ ಪ್ಲೇಯಿಂಗ್ 11 ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಟೀಂ ಇಂಡಿಯಾ ಮ್ಯಾನೇಜ್ಮೆಂಟ್‌ ಶ್ರೇಯಸ್‌ ಅಯ್ಯರ್‌, ಅರ್ಷದೀಪ್‌ ಸಿಂಗ್‌ ಸೇರಿ ಪ್ರಮುಖ ಆಟಗಾರರಿಗೆ ಕೋಕ್‌ ಕೊಡಲಿದೆ ಎನ್ನಲಾಗುತ್ತಿದೆ.

India vs Afghanistan : ಚೆನ್ನೈ: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ ಇಂದು (ಜೂನ್ 20) ಚೆನ್ನೈನ ಪ್ರಸಿದ್ಧ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೂರು ಪಂದ್ಯಗಳ ಸರಣಿಯಲ್ಲಿ 2 ಪಂದ್ಯಗಳನ್ನು ಜಯಿಸಿರುವ ಟೀಂ ಇಂಡಿಯಾ ಸರಣಿಯನ್ನು ಕ್ಲೀನ್ ಸ್ವೀಪ್ (Clean Sweep) ಸಾಧಿಸುವ ತವಕದಲ್ಲಿದೆ.

ಸತತ ಎರಡು ಪಂದ್ಯಗಳನ್ನು ಜಯಿಸಿರುವ ಕಾರಣದಿಂದಲೇ ಭಾರತ ತಂಡದಲ್ಲಿ ಬದಲಾವಣೆ ಆಗುವ ನಿರೀಕ್ಷೆಯಿದೆ. ಅದ್ರಲ್ಲೂ ಇಂದಿನ ಪಂದ್ಯದ ಪ್ಲೇಯಿಂಗ್ 11 ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಟೀಂ ಇಂಡಿಯಾ ಮ್ಯಾನೇಜ್ಮೆಂಟ್‌ ಶ್ರೇಯಸ್‌ ಅಯ್ಯರ್‌, ಅರ್ಷದೀಪ್‌ ಸಿಂಗ್‌ ಸೇರಿ ಪ್ರಮುಖ ಆಟಗಾರರಿಗೆ ಕೋಕ್‌ ಕೊಡಲಿದೆ ಎನ್ನಲಾಗುತ್ತಿದೆ.

ವೇಗಿ ಹರ್ಶಿತ್ ರಾಣಾ, ಆಲ್ರೌಂಡರ್ ನಿತೀಶ್ ರೆಡ್ಡಿ ಕಣಕ್ಕೆ!

ಈಗಾಗಲೇ ಟೀಂ ಇಂಡಿಯಾ ಸೇರಿಕೊಂಡಿರುವ ಹರ್ಷಿತ್‌ ರಾಣಾ ಮೊಣಕಾಲು ನೋವಿನಿಂದ ಸಂಪೂರ್ಣವಾಗಿ ಫಿಟ್‌ ಆಗಿದ್ದಾರೆ. ಮತ್ತೊಂದೆಡೆಯಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಕೂಡ ಫಿಟ್‌ ಆಗಿದ್ದು, ಹಾರ್ದಿಕ್‌ ಪಾಂಡ್ಯ ಅವರ ಸ್ಥಾನದಲ್ಲಿ ಕಳಕ್ಕೆ ಇಳಿಯುವ ನಿರೀಕ್ಷೆಯಿದೆ.

ಭಾರತ ಕ್ರಿಕೆಟ್‌ ತಂಡದ ಪ್ಲೇಯಿಂಗ್ 11 ನಲ್ಲಿ ಬದಲಾವಣೆಗಳು ಹೇಗೆ ಇರಲಿವೆ ?

ಅರ್ಷದೀಪ್ ಸಿಂಗ್‌ಗೆ ವಿಶ್ರಾಂತಿ: ಮೊದಲ ಎರಡು ಪಂದ್ಯಗಳಲ್ಲಿ ಸತತವಾಗಿ ಬೌಲಿಂಗ್ ಮಾಡಿದ್ದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರಿಗೆ ಇಂದಿನ ಪಂದ್ಯದಿಂದ ವಿಶ್ರಾಂತಿ ನೀಡುವುದು ಖಚಿತ ಎನ್ನಲಾಗುತ್ತಿದೆ. ಅರ್ಷದೀಪ್‌ ಸಿಂಗ್‌ ಅವರ ಸ್ಥಾನವನ್ನು ಹರ್ಷಿತ್‌ ರಾಣಾ ತುಂಬುವುದು ಖಚಿತ.

ಯಶಸ್ವಿ ಜೈಸ್ವಾಲ್‌ಗೆ ಸಿಗುತ್ತಾ ಮತ್ತೊಂದು ಅವಕಾಶ : ಕಳೆದ ಪಂದ್ಯದಲ್ಲಿ ಕೇವಲ 4 ರನ್‌ಗೆ ಔಟ್ ಆಗಿದ್ದರೂ, ಯಶಸ್ವಿ ಜೈಸ್ವಾಲ್ ಅವರಿಗೆ ಮತ್ತೊಂದು ಅವಕಾಶ ನೀಡಲಾಗುವುದು ಎಂದು ಕೋಚ್ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಅಥವಾ ಕೆ.ಎಲ್. ರಾಹುಲ್ ಇಬ್ಬರಲ್ಲಿ ಒಬ್ಬರಿಗೆ ವಿಶ್ರಾಂತಿ ಸಿಗಲಿದೆ.

ಸ್ಪಿನ್ ವಿಭಾಗದ ಟ್ವಿಸ್ಟ್: ಚೆನ್ನೈನ ಕ್ರೀಡಾಂಗಣ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ಕಾರಣದಿಂದಲೇ ಕುಲದೀಪ್‌ ಯಾದವ್‌ ಅವರ ಜೊತೆಗೆ ಹರ್ಷ ದುಬೆ ಮತ್ತೆ ಇಂದಿನ ಆಡುವ ಬಳಗದಲ್ಲಿ ಕಾಣಸಿಕೊಳ್ಳುವುದು ದಟ್ಟವಾಗಿದೆ.

ಭಾರತ ತಂಡ (India)- ಸಂಭ್ಯಾವ :

ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್/ ಕೆ.ಎಲ್. ರಾಹುಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್/ಹರ್ಷ್ ದುಬೆ, ಗುರ್ನೂರ್ ಬ್ರಾರ್, ಪ್ರಿನ್ಸ್ ಯಾದವ್, ಹರ್ಷಿತ್ ರಾಣಾ.

ಅಫ್ಘಾನಿಸ್ತಾನ ತಂಡ (Afghanistan ಸಂಭ್ಯಾವ):

ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ಸೆದಿಕುಲ್ಲಾ ಅಟಲ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಮೊಹಮ್ಮದ್ ನಬಿ/ದರ್ವಿಶ್ ರಸೂಲಿ, ಅಜ್ಮತುಲ್ಲಾ ಒಮರ್ಜಾಯ್/ಬಿಲಾಲ್ ಸಾಮಿ, ರಶೀದ್ ಖಾನ್, ನಂಗೇಯಾಲ ಖರೋಟಿ, ಎ.ಎಮ್. ಗಜನ್‌ಫರ್, ಮೊಹಮ್ಮದ್ ಸಲೀಮ್.

India vs Afghanistan 2026 3rd ODI Predicted Playing 11 ind vs afg squad Shreyas Iyer, Arshdeep Singh OUt

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories