PM Kisan :ರೈತರ ಖಾತೆಗೆ ಜಮೆಯಾಯ್ತು ಪಿಎಂ ಕಿಸಾನ್ ಹಣ :ನಿಮ್ಮ ಅಕೌಂಟ್ಗೆ 2,000 ರೂ. ಬಂದಿದೆಯೇ? ಮೊಬೈಲ್ನಲ್ಲೇ ಹೀಗೆ ಚೆಕ್ ಮಾಡಿ
ಕರ್ನಾಟಕ ಸೇರಿದಂತೆ ದೇಶದ ಸುಮಾರು 9.2 ಕೋಟಿಗೂ ಅಧಿಕ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ತಲಾ 2,000 ರೂಪಾಯಿ ಜಮೆ ಮಾಡಲಾಗಿದೆ.

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಅನ್ನದಾತರಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ 17ನೇ ಕಂತಿನ ಹಣವನ್ನು (17th Installment) ಪ್ರಧಾನಿ ನರೇಂದ್ರ ಮೋದಿ ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಿದ್ದಾರೆ. ನಿಮ್ಮ ಖಾತೆಗೆ ಹಣ ಜಮೆ ಆಗಿದ್ಯಾ ಎಂದು ಚೆಕ್ ಮಾಡಲು ಈ ಸ್ಟೋರಿಯನ್ನು ಓದಿ.
ಕರ್ನಾಟಕ ಸೇರಿದಂತೆ ದೇಶದ ಸುಮಾರು 9.2 ಕೋಟಿಗೂ ಅಧಿಕ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ತಲಾ 2,000 ರೂಪಾಯಿ ಜಮೆ ಮಾಡಲಾಗಿದೆ. ಇಂದು ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಮೊಬೈಲ್ ಮೂಲಕವೇ ಮನೆಯಲ್ಲಿಯೇ ಕುಳಿತು ಕೇವಲ 2 ನಿಮಿಷದಲ್ಲಿ ಪಿಎಂ ಕಿಸಾನ್ ಹಣ ಜಮೆ ಆಗಿರುವ ಮಾಹಿತಿ ಪಡೆಯಬಹುದಾಗಿದೆ.
Also Read : ಈಗ ಪ್ಯಾನ್ ಕಾರ್ಡ್ ಫೋಟೋ ಬದಲಾವಣೆಗೆ ಸರಳ ಅರ್ಜಿ ಪ್ರಕ್ರಿಯೆ! ಆನ್ಲೈನ್ ಮೂಲಕವೇ ಸಾಧ್ಯ
ಮೊಬೈಲ್ ಮೂಲಕ ಪಿಎಂ ಕಿಸಾನ್ ಯೋಜನೆ ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ ?
ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡಿರುವ ಅರ್ಹ ಫಲಾನುಭವಿ ರೈತರ ಖಾತೆಗೆ ಈಗಾಗಲೇ ಹಣ ಜಮೆ ಆಗುವ ಪ್ರಕ್ರಿಯೆ ಆರಂಭಗೊಂಡಿದೆ. ನಿಮ್ಮ ಖಾತೆಗೆ 2000 ರೂಪಾಯಿ ಹಣ ಜಮೆ ಆಗಿರುವ ಕುರಿತು ಮಾಹಿತಿಯನ್ನು ಪಡೆಯಲು ಕಳೆಗಿನ ಹಂತವನ್ನು ಪರಿಶೀಲಿಸಿ.
- ಪಿಎಂ ಕಿಸಾನ್ : ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
ಹಂತ 1.ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಬ್ರೌಸರ್ ಓಪನ್ ಮಾಡಿ, ಪಿಎಂ ಕಿಸಾನ್ ಯೋಜನೆಯ ಅಧಿಕೃತ ಪೋರ್ಟಲ್ ಆದ pmkisan.gov.in ಗೆ ಲಾಗಿನ್ ಆಗಿ.
2.’Know Your Status’ ಆಯ್ಕೆ ಮಾಡಿ
ಹಂತ 2.ವೆಬ್ಸೈಟ್ನ ಮುಖಪುಟದಲ್ಲಿ (Homepage) ಕೆಳಗೆ ಸ್ಕ್ರಾಲ್ ಮಾಡಿದಾಗ ಕಾಣಿಸುವ ‘Farmers Corner’ ವಿಭಾಗದಲ್ಲಿ ‘Know Your Status’ (ನಿಮ್ಮ ಸ್ಥಿತಿಯನ್ನು ತಿಳಿಯಿರಿ) ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
3.ನೋಂದಣಿ ಸಂಖ್ಯೆ ನಮೂದಿಸಿ
ಹಂತ 3.ಈಗ ತೆರೆದುಕೊಳ್ಳುವ ಹೊಸ ಪೇಜ್ನಲ್ಲಿ ನಿಮ್ಮ Registration Number (ನೋಂದಣಿ ಸಂಖ್ಯೆ) ಮತ್ತು ಸ್ಕ್ರೀನ್ ಮೇಲೆ ಕಾಣುವ ಕ್ಯಾಪ್ಚಾ ಕೋಡ್ (Captcha Code) ಅನ್ನು ಸರಿಯಾಗಿ ಟೈಪ್ ಮಾಡಿ.
4.ಓಟಿಪಿ ವೆರಿಫೈ ಮಾಡಿ ಸ್ಟೇಟಸ್ ನೋಡಿ
ಹಂತ 4.ಬಳಿಕ ‘Get Data’ ಅಥವಾ ‘Get OTP’ ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಎಂಟರ್ ಮಾಡಿದ ತಕ್ಷಣ, ನಿಮ್ಮ ಸಂಪೂರ್ಣ ಕಂತಿನ ವಿವರ ಹಾಗೂ ಇಂದಿನ ಹಣ ಜಮೆಯಾಗಿರುವ ಸ್ಟೇಟಸ್ (FTO Processed – Yes) ಪರದೆಯ ಮೇಲೆ ಕಾಣಿಸುತ್ತದೆ.
ಪಿಎಂ ಕಿಸಾನ್ ನೋಂದಣಿ ಸಂಖ್ಯೆ (Registration Number) ಮರೆತುಹೋಗಿದ್ದರೆ ಏನು ಮಾಡಬೇಕು?
ರೈತರ ಗಮನಕ್ಕೆ: ಒಂದು ವೇಳೆ ನಿಮ್ಮ ಬಳಿ ರಿಜಿಸ್ಟ್ರೇಷನ್ ನಂಬರ್ ಇಲ್ಲದಿದ್ದರೆ, ನೀವು ಗಾಬರಿ ಆಗುವ ಅಗತ್ಯವಿಲ್ಲ. ‘Know Your Status’ ಪೇಜ್ನಲ್ಲಿಯೇ ಮೇಲ್ಭಾಗದಲ್ಲಿ ಕಾಣುವ ‘Know Your Registration Number’ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಆಧಾರ್ ಕಾರ್ಡ್ ನಂಬರ್ ಅಥವಾ ಪಿಎಂ ಕಿಸಾನ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಸುಲಭವಾಗಿ ನಿಮ್ಮ ಐಡಿಯನ್ನು ಪಡೆದುಕೊಳ್ಳಬಹುದು.
ಪಿಎಂ ಕಿಸಾನ್ ಹಣ ಬಾರದೇ ಇದ್ದರೆ ಈ 3 ತಪ್ಪುಗಳೇ ಕಾರಣ ಇರಬಹುದು
ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದರೂ ಕೆಲವೊಮ್ಮೆ ರೈತರ ಖಾತೆಗೆ ಹಣ ಬರುವುದಿಲ್ಲ. ಅದಕ್ಕೆ ಮುಖ್ಯವಾಗಿ ಈ ಕೆಳಗಿನ ಮೂರು ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳದಿರುವುದೇ ಕಾರಣವಾಗಿರುತ್ತದೆ:
- ಇ-ಕೆವೈಸಿ (e-KYC): ಪಿಎಂ ಕಿಸಾನ್ ಪೋರ್ಟಲ್ನಲ್ಲಿ ಆಧಾರ್ ಕಾರ್ಡ್ ಮೂಲಕ ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿ ಪೂರ್ಣಗೊಂಡಿರಬೇಕು.
- ಭೂ ದಾಖಲೆಗಳ ಲಿಂಕಿಂಗ್ (Land Seeding): ನಿಮ್ಮ ಜಮೀನಿನ ಪಹಣಿ (RTC) ವಿವರಗಳು ಕಿಸಾನ್ ಐಡಿಗೆ ಮ್ಯಾಪ್ ಆಗಿರಬೇಕು (Land Seeding Status- ‘YES’ ಇರಬೇಕು).
- ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ: ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಮತ್ತು ಡಿಬಿಟಿ (Direct Benefit Transfer) ಸಕ್ರಿಯವಾಗಿರಬೇಕು.
ಒಂದೊಮ್ಮೆ ನಿಮ್ಮ ಸ್ಟೇಟಸ್ನಲ್ಲಿ ಯಾವುದೇ ಒಂದರ ಮುಂದೆ ‘NO’ ಎಂದು ಇದ್ದರೆ ಈ ಕಂತಿನ ಹಣ ನಿಮ್ಮ ಖಾತೆಗೆ ಜಮೆ ಆಗೋದಿಲ್ಲ. ನಿಮ್ಮ ಖಾತೆಗೆ ಪಿಎಂ ಕಿಸಾನ್ ಹಣ ಬಾರದೇ ಇದ್ರೆ ತಕ್ಷಣವೇ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಿಎಸ್ಸಿ (CSC) ಡಿಜಿಟಲ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಇದನ್ನು ಸರಿಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಪಿಎಂ ಕಿಸಾನ್ ಹೆಲ್ಪ್ಲೈನ್ ಸಂಖ್ಯೆ 155261 ಗೆ ಕರೆ ಮಾಡಿ ನೆರವು ಪಡೆಯಬಹುದು.
pm kisan 23 installment dbt status check online link



