ಕರ್ನಾಟಕ ಬಜೆಟ್ ಅಧಿವೇಶನ ನಾಳೆಯಿಂದ ಆರಂಭ : ವಿಧಾನಸೌದದ ಸುತ್ತಲೂ ನಿಷೇಧಾಜ್ಞೆ ಜಾರಿ

ಬೆಂಗಳೂರು : ಕರ್ನಾಟಕ ಬಜೆಟ್ 2023 (Karnataka Budget 2023) ಅಧಿವೇಶನ ನಡೆಯಲಿದೆ. ನಾಳೆ (ಫೆಬ್ರವರಿ 10) ರಿಂದ 24 ರವರೆಗೆ ನಡೆಯಲಿದೆ. ಬಜೆಟ್ ಹಿನ್ನೆಲೆಯಲ್ಲಿ ಕಲಾಪಕ್ಕೆ ಅಡ್ಡಿಯಾಗಬಾರದು ಅನ್ನೋ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಅವರು ವಿಧಾನಸೌಧದ ಸುತ್ತಲೂ ಐಪಿಸಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಯನ್ನು ಹೊರಡಿಸಿದ್ದಾರೆ.

ಬಜೆಟ್ ಅಧಿವೇಶನ ಮುಕ್ತಾಯ ಆಗುವವರೆಗೆ ವಿಧಾನಸೌಧದ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿ ದಿನ ಬೆಳಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಒಂದೇ ಸ್ಥಳದಲ್ಲಿ 5ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಅಲ್ಲದೇ ಪ್ರತಿಭಟನೆ ನಡೆಸುವಂತಿಲ್ಲ. ಇನ್ನುಆಯುಧ, ಕಲ್ಲು, ಇಟ್ಟಿಗೆಗಳನ್ನು ಕೊಂಡೊಯ್ಯುವುದು, ಸ್ಫೋಟಕಗಳನ್ನು ಸಿಡಿಸುವುದಕ್ಕೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಇನ್ನು ಯಾವುದೇ ಪ್ರತಿಕೃತಿಗಳನ್ನು ಪ್ರದರ್ಶಿಸುವುದು ಹಾಗೂ ದಹಿಸುವುದಕ್ಕೆ ನಿಷೇಧ ಹೇರಲಾಗಿದೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಫೆ.17ರಂದು ಕರ್ನಾಟಕ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. 2023ರ ವಿಧಾನಸಭಾ ಚುನಾವಣೆ ವೇಳೆಗೆ ಬಜೆಟ್ ಮಂಡನೆಯಾಗುತ್ತಿದೆ. ಚುನಾವಣೆಯ ಹೊತ್ತಲ್ಲೇ ರಾಜ್ಯ ಸರಕಾರ ಭರಪೂರ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆಯಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಗೆ ಅನುಕೂಲಕರವಾಗುವ ಹೊಸ ಯೋಜನೆಗಳನ್ನೂ ಜಾರಿಗೆ ತರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಬಜೆಟ್ ಬೆನ್ನಲ್ಲೇ ಬಂಗಾರದ ಬೆಲೆ ಏರಿಕೆ

ಇನ್ನೊಂದೆಡೆಯಲ್ಲಿ ಕೇಂದ್ರ ಬಜೆಟ್ ಮಂಡನೆ ಬಳಿಕ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಚಿನ್ನದ ಬೆಲೆ 60 ಸಾವಿರದ ಗಡಿ ದಾಟಿದ್ದು, ಬಂಗಾರದ ಜತೆಗೆ ಬೆಳ್ಳಿಯ ಬೆಲೆಯೂ ಕೆಜಿಗೆ 75 ಸಾವಿರ ರೂ.ಗೆ ಏರಿಕೆಯಾಗಿದೆ. ಚಿನ್ನದ ಬೆಲೆ 60 ಸಾವಿರ ಗಡಿ ದಾಟುವ ಮೂಲಕ ಆಭರಣ ಪ್ರಿಯರನ್ನು ಬೆಚ್ಚಿ ಬೀಳಿಸಿದೆ. ಬಂಗಾರದ ಜತೆಗೆ ಬೆಳ್ಳಿ ಬೆಲೆಯೂ ಏರಿಕೆಯಾಗಿದ್ದು ಕೆ.ಜಿ.ಗೆ 75 ಸಾವಿರ ರೂ. ಇಂದಿನ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 59,300 ರೂಪಾಯಿಗಳಿಗೆ ಶಾಕ್ ನೀಡಿದೆ. ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಚಿನ್ನದ ಆಮದು ಸುಂಕವನ್ನು ಹೆಚ್ಚಿಸಿತ್ತು.

ಇದನ್ನೂ ಓದಿ : PM kisan 13th installment: ಪಿಎಂ ಕಿಸಾನ್‌ ಹಣ ಪಡೆಯಲು ಬ್ಯಾಂಕ್‌ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್‌ ಮಾಡಿ : ಇಂದೇ ಕೊನೆಯ ದಿನ

ಇದನ್ನೂ ಓದಿ :ಪತ್ನಿ ಭವಾನಿಗೆ ಟಿಕೇಟ್ ನೀಡದಿದ್ದರೇ ಎಚ್.ಡಿ.ರೇವಣ್ಣ ಬಂಡಾಯ: ಎಚ್.ಡಿ.ಕುಮಾರಸ್ವಾಮಿ ಮಾದರಿಯಲ್ಲೇ ಎರಡು ಕ್ಷೇತ್ರದಲ್ಲಿ ಸ್ಪರ್ಧೆ

Karnataka Budget 2023 Budget session from February 10 to 24 imposed Section 144

Comments are closed.