U19 World Cup 2022 : ಇಂದು ವಿಶ್ವಕಪ್‌ 2 ನೇ ಸಮಿಫೈನಲ್‌, ಭಾರತ – ಆಸ್ಟ್ರೇಲಿಯಾ ಕದನ

ಆಂಟಿಗುವಾ : U19 ವಿಶ್ವಕಪ್‌ ಈಗಾಗಲೇ ಅಂತಿಮ ಹಂತವನ್ನು ತಲುಪಿದೆ. ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತ ಸೆಮಿಫೈನಲ್‌ (U19 World Cup 2022) ತಲುಪಿದೆ. ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಆಟಗಾರರ ಲಭ್ಯತೆಯ ನಡುವಲ್ಲೂ ಭಾರತ ಸೆಮಿಫೈನಲ್‌ ಪ್ರವೇಶಿಸಿದೆ. ಇಂದು 2ನೇ ಸೆಮಿಫೈನಲ್‌ ಪಂದ್ಯ ನಡೆಯಲಿದ್ದು, ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಟೀಂ ಇಂಡಿಯಾದ ನಾಯಕ ಯಶ್ ಧುಲ್ ಸೇರಿದಂತೆ ಕೋವಿಡ್‌ ಸೋಂಕಿಗೆ ಒಳಗಾಗಿದ್ದವರು ಚೇತರಿಸಿಕೊಂಡಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಭಾರತ ಹಲವು ಬದಲಾವಣೆ ಗಳೊಂದಿಗೆ ಕಣಕ್ಕೆ ಇಳಿಯಲಿದೆ. ಸೆಮಿಫೈನಲ್‌ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಮೊದಲ ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿ 24 ವರ್ಷಗಳ ನಂತರ ಅಂಡರ್ 19 ವಿಶ್ವಕಪ್‌ನ ಫೈನಲ್‌ಗೆ ತಲುಪುವ ಸಾಧನೆಯನ್ನು ಮಾಡಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಕೂಡ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ.

ಆಸ್ಟ್ರೇಲಿಯಾ ತಂಡ ಒಟ್ಟು 4 ಪಂದ್ಯಗಳಲ್ಲಿ ಶ್ರೀಲಂಕಾ ವಿರುದ್ದದ ಪಂದ್ಯವನ್ನು ಹೊರತು ಪಡಿಸಿ, ಉಳಿದ ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಆಂಟಿಗುವಾ ಮೈದಾನ ಚೇಸಿಂಗ್ ಗೆ ಹೆಚ್ಚು ಅನುಕೂಲಕರವಾಗಿದ್ದು, ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಮಾಡುವುದು ತಂಡಗಳಿಗೆ ಹೆಚ್ಚು ಅನುಕೂಲಕರವಾಗಲಿದೆ.

ಭಾರತ U19 ತಂಡ : ಆಂಗ್ಕ್ರಿಶ್ ರಘುವಂಶಿ, ಹರ್ನೂರ್ ಸಿಂಗ್, ಶೇಕ್ ರಶೀದ್, ಯಶ್ ಧುಲ್(ಸಿ), ಸಿದ್ದಾರ್ಥ್ ಯಾದವ್, ರಾಜ್ ಬಾವಾ, ಕೌಶಲ್ ತಾಂಬೆ, ದಿನೇಶ್ ಬನಾ(ಡಬ್ಲ್ಯೂ), ರಾಜವರ್ಧನ್ ಹಂಗರ್ಗೇಕರ್, ವಿಕ್ಕಿ ಓಸ್ತ್ವಾಲ್, ರವಿಕುಮಾರ್, ಮಾನವ್ ಪರಾಖ್, ನಿಶಾಂತ್ ಸಿಂಧು, ಆನೆ ಗೌತಮ್, ಆರಾಧ್ಯ ಯಾದವ್, ಗರ್ವ್ ಸಾಂಗ್ವಾನ್.

ಆಸ್ಟ್ರೇಲಿಯಾ U19 ತಂಡ : ಕ್ಯಾಂಪ್‌ಬೆಲ್ ಕೆಲ್ಲವೇ, ಟೀಗ್ ವೈಲ್ಲಿ, ಕೋರೆ ಮಿಲ್ಲರ್, ಕೂಪರ್ ಕೊನೊಲಿ (ಸಿ), ಲಾಚ್ಲಾನ್ ಶಾ, ಏಡನ್ ಕಾಹಿಲ್, ವಿಲಿಯಂ ಸಾಲ್ಜ್‌ಮನ್, ಟೋಬಿಯಾಸ್ ಸ್ನೆಲ್ (ಡಬ್ಲ್ಯೂ), ಟಾಮ್ ವಿಟ್ನಿ, ಜ್ಯಾಕ್ ಸಿನ್‌ಫೀಲ್ಡ್, ಜ್ಯಾಕ್ ನಿಸ್ಬೆಟ್, ಹರ್ಕಿರತ್ ಬಜ್ವಾ, ಜೋಶುವಾ ಗಾರ್ನರ್, ಜೋಶುವಾ ಗಾರ್ನರ್ ಹಿಗ್ಗಿನ್ಸ್, ನಿವೇತನ್ ರಾಧಾಕೃಷ್ಣನ್.

ಇದನ್ನೂ ಓದಿ : Ishan Kishan : IPL 2022 ರಲ್ಲಿ RCB ಪರ ಆಡುತ್ತಾರೆ ಇಶಾನ್ ಕಿಶನ್

ಇದನ್ನೂ ಓದಿ : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡ್ತಾರೆ RCB ಮಾಜಿ ಆಟಗಾರ ಹರ್ಷಲ್ ಪಟೇಲ್

(U19 World Cup 2022: India face Australia in 2nd Semi Final today)

Comments are closed.