Lal Bagh Flower Show : ಅಗಸ್ಟ್ 4 ರಿಂದ ಲಾಲ್ ಭಾಗ್ ಪ್ಲವರ್ ಶೋ : ವಿಧಾನಸೌಧ,ಕೆಂಗಲ್ ಹನುಮಂತಯ್ಯ ಈ ಭಾರಿಯ ಆಕರ್ಷಣೆ

ಬೆಂಗಳೂರು : ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದ್ದಂತೆ ಬೆಂಗಳೂರಿನ ಹೂಗಳ ಹಬ್ಬ ಲಾಲ್ ಭಾಗ್ ಪ್ಲವರ್ ಶೋಗೆ (Lal Bagh Flower Show) ಸಿದ್ಧತೆ ಜೋರಾಗಿದೆ. ಶುಕ್ರವಾರದಿಂದ ಲಾಲ್ ಭಾಗ್ ನಲ್ಲಿ ಪ್ಲವರ್ ಶೋ ಆರಂಭವಾಗಲಿದ್ದು, ಈ ಭಾರಿ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಹಾಗೂ ವಿಧಾನಸೌಧ ಹೂಗಳಲ್ಲಿ ನಿರ್ಮಾಣಗೊಳ್ಳಲಿದೆ.

ಬೆಂಗಳೂರಿನ ಹೂಗಳ ಹಬ್ಬ ಲಾಲ್ ಬಾಗ್ ಪ್ಲವರ್ ಶೋಗೆ ದಿನಗಣನೆ ಆರಂಭವಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆಯುವ ಪ್ಲವರ್ ಶೋ ಆಗಸ್ಟ್ 4 ರಿಂದ ಫ್ಲವರ್ ಶೋ ಆರಂಭವಾಗಲಿದ್ದು 11 ದಿನಗಳ ಕಾಲ ನಡೆಯಲಿದೆ. ಇದು ತೋಟಗಾರಿಕೆ ಇಲಾಖೆ ನಡೆಸುತ್ತಿರುವ 214ನೇ ಫಲಪುಷ್ಪ ಪ್ರದರ್ಶನವಾಗಿದ್ದು ಈ ಭಾರಿ ವಿಧಾನಸೌಧ ಹಾಗೂ ಕೆಂಗಲ್ ಹನುಮಂತಯ್ಯ ರವರ ಕಾನ್ಸೆಪ್ಟ್ ಅಯ್ಕೆ ಮಾಡಿಕೊಂಡಿದೆ.

ಆಗಸ್ಟ್ 04 ರಂದು ಸಿಎಂ ಸಿದ್ದರಾಮಯ್ಯ ಫ್ಲವರ್ ಶೋ ಗೆ ಚಾಲನೆ ನೀಡಲಿದ್ದು ಅಗಸ್ಟ್ 15 ರಂದು ಶೋ ಅಂತ್ಯಗೊಳ್ಳಲಿದೆ. ಈ ಬಾರಿ ಫ್ಲವರ್ ಶೋಗೆ 2 ಕೋಟಿ ಅಧಿಕ ವೆಚ್ಚ‌ವಾಗುವ ಸಾಧ್ಯತೆ ಇದ್ದು, 10 ರಿಂದ 12 ಲಕ್ಷದಷ್ಟು ಜನರು ಪ್ಲವರ್ ಶೋ ವೀಕ್ಷಣೆಗೆ ಬರೋ ನೀರಿಕ್ಷೆ ಇದೆ. ಫಲಪುಷ್ಪ ಪ್ರದರ್ಶನದಲ್ಲಿ ಈ ಭಾರಿ ಪವ್ಲರ್ ಶೋದಲ್ಲಿ ಕಲಾಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಮಕ್ಕಳಿಗೆ, ಮಹಿಳೆಯರಿಗೂ ಸಹ ಕೆಲ‌ ಕಾರ್ಯಕ್ರಮಗಳು ಆಯೋಜನೆ ಮಾಡಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.

ಲಾಲ್ ಭಾಗ್ ನ ಒಟ್ಟು ನಾಲ್ಕೂ ಗೇಟ್ ಳಲ್ಲಿ ಜನರಿಗೆ ಎಂಟ್ರಿ ನೀಡಲಾಗ್ತಿದ್ದು, ವೀಕ್ ಡೇಸ್ ನಲ್ಲಿ ಹಿರಿಯರಿಗೆ 70 ರುಪಾಯಿ ಹಾಗೂ ಮಕ್ಕಳಿಗೆ 30 ರುಪಾಯಿ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಭದ್ರತೆ ದೃಷ್ಟಿಯಿಂದ 200 ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಕೆ‌ಮಾಡಲಾಗಿದೆ. 300-400 ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದ್ದು, 11 ದಿನ ಕಾಲ‌ ಹೆಲ್ತ್ ಕ್ಯಾಂಪ್ ವ್ಯವಸ್ಥೆ ಕೂಡ ಇದೆ. ಇನ್ನು ಲಾಲ್ ಬಾಗ್ ನಲ್ಲಿರುವ ನಾಯಿಗಳಿಂದ ಜನರಿಗೆ ಸಮಸ್ಯೆಯಾಗಬಾರದದೆಂಬ ಕಾರಣಕ್ಕೆ ನಾಯಿಗಳಿಗೆ ವ್ಯಾಕ್ಸಿನೇಷನ್ ನೀಡಲಾಗ್ತಿದ್ದು ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ : Shivarajkumar : ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿ ಆಯ್ಕೆಗೊಂಡ ನಟ ಶಿವ ರಾಜ್‌ಕುಮಾರ್‌

ಫ್ಲವರ್ ಶೋ ಗೆ ಕೊಲ್ಕತ್ತ, ಕೇರಳ, ತಮಿಳುನಾಡು, ಆಂಧ್ರ ಇತರ ರಾಜ್ಯಗಳಿಂದ ಹೂಗಳನ್ನು ತರಿಸಿಕೊಳ್ಳಲಾಗ್ತಿದ್ದು, ಒಟ್ಟು 15 ರಿಂದ 17 ಲಕ್ಷ ಹೂಗಳನ್ನ ಬಳಸಿಕೊಳ್ಳಲು ತಯಾರಿ ನಡೆದಿದೆ.ಟ್ರಾಫಿಕ್ ದೃಷ್ಟಿಯಿಂದ ಮೆಟ್ರೋ ಹಾಗೂ BMTC ಬಸ್ ಬರಲು ತೋಟಗಾರಿಕೆ ಇಲಾಖೆ ಮನವಿ ಮಾಡಿದೆ. ಈ ಭಾರಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿರೋದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನೀರಿಕ್ಷೆ ಇದೆ.

Lal Bagh Flower Show: Lal Bagh Flower Show from 4th August: Vidhana Soudha, Kengal Hanumantayya is the main attraction of this festival.

Comments are closed.