Letter to HDK: ‘ನಮಗೆ ನೀವೇ ವಧು ಹುಡುಕಿಕೊಡಬೇಕು’; ಮಾಜಿ ಸಿಎಂ ಕುಮಾರಸ್ವಾಮಿ ಬಳಿ ನೋವು ತೋಡಿಕೊಂಡ ಯುವಕ

ಕೋಲಾರ: Letter to HDK: ರಾಜಕೀಯ ನಾಯಕರ ಬಳಿ ಜನರು ಹಲವಾರು ವಿಚಾರಗಳ ಬಗ್ಗೆ ಅಹವಾಲನ್ನು ತೆಗೆದುಕೊಂಡು ಹೋಗುತ್ತಾರೆ. ಉದ್ಯೋಗ, ನಿವೇಶನ, ವಿದ್ಯಾಭ್ಯಾಸ, ಚಿಕಿತ್ಸೆ ಸೇರಿದಂತೆ ಹಲವಾರು ದೂರುಗಳು ರಾಜಕಾರಣಿಗಳ ಮನೆ ಕದ ತಟ್ಟುತ್ತವೆ. ಆದರೆ ಇಲ್ಲೊಬ್ಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಳಿ ವಿಚಿತ್ರವಾದ ಮನವಿ ಪತ್ರ ತೆಗೆದುಕೊಂಡು ಹೋಗಿದ್ದಾನೆ. ಅದೇನೆಂದರೆ ಮದುವೆ ವಿಚಾರದಲ್ಲಿ ತಾನು ಅನುಭವಿಸುತ್ತಿರುವ ನೋವನ್ನು ಆತ ಪತ್ರದ ಮೂಲಕ ತೋಡಿಕೊಂಡು ಕುಮಾರಸ್ವಾಮಿ ಅವರಿಗೆ ನೀಡಿದ್ದಾನೆ.

ಇದನ್ನೂ ಓದಿ: Nada Devi image: ನಾಡದೇವಿಯ ಭಾವಚಿತ್ರ ಅಧಿಕೃತ; ಸಮಿತಿ ಶಿಫಾರಸ್ಸಿಗೆ ಸರ್ಕಾರದ ಮುದ್ರೆಯಷ್ಟೆ ಬಾಕಿ…

ಕೋಲಾರದಲ್ಲಿಂದು ಪಂಚರತ್ನ ಯಾತ್ರೆ ವೇಳೆ ಹೆಚ್.ಡಿ. ಕುಮಾರಸ್ವಾಮಿ ಅವರು ಗ್ರಾಮಸ್ಥರು ಹಾಗೂ ರೈತರ ಕಷ್ಟಗಳನ್ನು ಆಲಿಸುತ್ತಿದ್ದರು. ಈ ವೇಳೆ ಮುದುವತ್ತಿ ಗ್ರಾಮದ ಧನಂಜಯ್ ಎಂಬ ಯುವಕ, ಒಕ್ಕಲಿಗ ರೈತ ಯುವಕರ ಮದುವೆಗೆ ವಧುಗಳ ಕೊರತೆ ಇರುವುದನ್ನು ಪ್ರಸ್ತಾಪಿಸಿದ್ದಾನೆ. ಒಕ್ಕಲಿಗ ರೈತ ಯುವಕರಿಗೆ ವಯಸ್ಸು ಮೀರುತ್ತಿದ್ದರೂ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಹೀಗಾಗಿ ಒಕ್ಕಲಿಗ ಯುವಕರಿಗೆ ವಧುಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾನೆ.

ಕೋಲಾರದಲ್ಲಿ ಒಕ್ಕಲಿಗ ರೈತ ಯುವಕರಿಗೆ ವಧುಗಳ ಕೊರತೆ ಎದುರಾಗಿದೆ. ನೀವು ಮುಖ್ಯಮಂತ್ರಿ ಆದ ತಕ್ಷಣ ನಮ್ಮ ಜಿಲ್ಲೆಯ ವಧುಗಳು ಬೇರೆ ಜಿಲ್ಲೆಯ ವರಗಳ ಜೊತೆ ವಿವಾಹ ಆಗುವುದನ್ನು ನಿಷೇಧಿಸಿ ನಿಯಮ ಜಾರಿಗೆ ತರಬೇಕು. ನಮಗೆ ನೀವೇ ವಧುಗಳನ್ನು ಹುಡುಕಿಕೊಡಬೇಕು ಎಂದು ಧನಂಜಯ್ ಕುಮಾರಸ್ವಾಮಿ ಅವರ ಬಳಿ ಅವಲತ್ತುಕೊಂಡಿದ್ದಾನೆ. ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದು ಖಚಿತವಾಗಿದ್ದು, ಜೆಡಿಎಸ್ ಸರ್ಕಾರದ ಅವಧಿಯಲ್ಲಿ ನಿಯಮ ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾನೆ. ಸಮಾಜದಲ್ಲಿ ಮದುವೆ ವಯಸ್ಸು ಮೀರುತ್ತಿದ್ದರೂ ರೈತ ಯುವಕರಿಗೆ ವಧು ದೊರೆಯದೇ ಇರುವುದು ಸಾಮಾಜಿಕ ಹಾಗೂ ಜಟಿಲ ಸಮಸ್ಯೆಯಾಗಿದೆ.

ಇದನ್ನೂ ಓದಿ: Bangalore weather: ವಿಪರೀತ ಚಳಿಗೆ ಸಿಲಿಕಾನ್ ಸಿಟಿ ತತ್ತರ: ದಶಕದ ಬಳಿಕ ಇಂದು ಅತಿ ಕಡಿಮೆ ತಾಪಮಾನ ದಾಖಲು

ಇತ್ತೀಚೆಗೆ ನಾಗಮಂಗಲದ ಆದಿಚುಂಚನಗಿರಿ ಮಠದ ಆವರಣದಲ್ಲಿ ರಾಜ್ಯಮಟ್ಟದ ಒಕ್ಕಲಿಗರ ವಧು-ವರರ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಒಕ್ಕಲಿಗ ಯುವಕರು ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದರು. ವಿಶೇಷ ಅಂದ್ರೆ ಸಮಾವೇಶದಲ್ಲಿ 11,750 ಒಕ್ಕಲಿಗ ಯುವಕರು ಉತ್ಸಾಹದಿಂದ ಭಾಗಿಯಾಗಿದ್ದರೆ, ಯುವತಿಯರ ಸಂಖ್ಯೆ ಕೇವಲ 200ರಷ್ಟೆ ಇತ್ತು.

Letter to HDK: Kolar youth requests to kumaraswamy to find the solution for bride problem in vokkaliga community

Comments are closed.