Mangaluru Autorickshaw Blast: “ಐಸಿಸ್ ಸಂಪರ್ಕದಲ್ಲಿದ್ದ ಶಾರೀಖ್, ಇನ್ನಷ್ಟು ಬಾಂಬ್ ಸ್ಫೋಟಕ್ಕೆ ಯೋಜನೆಯನ್ನು ರೂಪಿಸಿದ್ದ”‌: ಸಚಿವ ಕೆ.ಸುಧಾಕರ್

ಮಂಗಳೂರು: (Mangaluru Autorickshaw Blast) ಮಂಗಳೂರು ನಗರದ ಆಟೋರಿಕ್ಷಾ ಸ್ಫೋಟದ ನಂತರ ಶಾರೀಖ್‌ ಹಾಗೂ ಆತನಿಗೆ ಸಹಾಯ ಮಾಡಿದ ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ನಂತರದಲ್ಲಿ ಕೆಲವು ಭಯಾನಕ ಮಾಹಿತಿಗಳು ಹೊರಬಿದ್ದಿದ್ದು, ಈತ ಐಸಿಸ್‌ ಸಂಪರ್ಕದಲ್ಲಿದ್ದ, ಇನ್ನಷ್ಟು ಬಾಂಬ್‌ ಸ್ಪೋಟಕ್ಕೆ ಯೋಜನೆಯನ್ನು ರೂಪಿಸಿದ್ದರು ಎಂಬ ಮಾಹಿತಿಗಳು ಹೊರಬಿದ್ದಿವೆ.

ಶಂಕಿತ ಆರೋಪಿ ಮೊಹಮ್ಮದ್ ಶಾರೀಖ್(Mangaluru Autorickshaw Blast) ಐಸಿಸ್ ಹ್ಯಾಂಡ್ಲರ್‌ಗಳನ್ನು ಸಂಪರ್ಕಿಸಲು ಡಾರ್ಕ್ ವೆಬ್ ಅನ್ನು ಬಳಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದಕ ಗುಂಪಿನಿಂದ ಪ್ರೇರಿತರಾಗಿದ್ದ ಶಾರೀಖ್‌ ಹಲವಾರು ನಕಲಿ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶಾರೀಖ್ ಮತ್ತು ಕೊಯಮತ್ತೂರು ಸ್ಫೋಟದ ಆರೋಪಿ ಜಮೀಶಾ ಮುಬಿನ್ ಪರಸ್ಪರ ಪರಿಚಿತರಾಗಿದ್ದರು. ಬೆಂಗಳೂರಿನಲ್ಲಿ ಭೇಟಿಯಾದ ಶಾರೀಖ್‌ ಮತ್ತು ಜಮೀಶಾ ಇನ್ನೂ ಹೆಚ್ಚಿನ ಸ್ಫೋಟಗಳನ್ನು ನಡೆಸಲು ಯೋಜನೆ ನಡೆಸಿದ್ದರು ಎನ್ನಲಾಗಿದೆ. ನವೆಂಬರ್ 19 ರಂದು ಮಂಗಳೂರು ನಗರದ ಜನನಿಬೀಡು ರಸ್ತೆಯಲ್ಲಿ ಸ್ಫೋಟ ಸಂಭವಿಸಿತ್ತು. ಇದು ನಗರದಲ್ಲಿ ವಿಧ್ವಂಸಕ ಚಟುವಟಿಕೆಯನ್ನು ಸೃಷ್ಟಿಸುವ ಉದ್ದೇಶದಿಂದ ನಡೆಸಿದ ಭಯೋತ್ಪಾದಕ ಕೃತ್ಯ ಇದಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಮಂಗಳೂರಿನ ನಾಗುರಿಯಲ್ಲಿ ಶನಿವಾರ ಸಂಜೆ 5.30ರ ಸುಮಾರಿಗೆ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಪೋಟ ಸಂಭವಿಸಿತ್ತು. ಘಟನೆಯಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಗಂಭೀರ ಗಾಯವಾಗಿತ್ತು. ಆತನ ಬಳಿಯಲ್ಲಿದ್ದ ಕುಕ್ಕರ್ ಸ್ಪೋಟಗೊಂಡಿತ್ತು. ಆಟೋ ಪಂಪ್ ವೆಲ್ ನಾಗುರಿ ಕಡೆಗೆ ಚಲಿಸುತ್ತಿತ್ತು. ಈ ವೇಳೆಯಲ್ಲಿ ದಾರಿ ಮಧ್ಯದಲ್ಲಿ ಕುಕ್ಕರ್ ಹಿಡಿದು ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ಆಟೋ ಏರಿದ್ದಾರೆ. ಆಟೋ ಸುಮಾರು ಒಂದು ಕಿ.ಮೀ. ದೂರವನ್ನು ಕ್ರಮಿಸುತ್ತಿದ್ದಂತೆಯೇ ಏಕಾಏಕಿಯಾಗಿ ಸ್ಪೋಟಗೊಂಡಿದೆ. ಕೂಡಲೇ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದರು.

ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅಲೋಕ್‌ ಕುಮಾರ್, ಶಾರೀಖ್ ಬಹು ಹ್ಯಾಂಡ್ಲರ್‌ಗಳ ಅಡಿಯಲ್ಲಿ ಕೆಲಸ ಮಾಡಿದ್ದಾನೆ, ಅವರಲ್ಲಿ ಒಬ್ಬರು ಐಸಿಸ್‌ನಿಂದ ಪ್ರಭಾವಿತವಾಗಿರುವ ಭಯೋತ್ಪಾದಕ ಸಂಘಟನೆಯಾದ ಅಲ್ ಹಿಂದ್‌ನವರಲ್ಲಿ ಒಬ್ಬರಾಗಿದ್ದಾರೆ. ಆರೋಪಿ ಶಾರೀಖ್‌ ಸುರೇಂದ್ರನ್ ಅವರ ಹೆಸರಿನಲ್ಲಿ ಸಿಮ್ ಕಾರ್ಡ್ ತೆಗೆದುಕೊಂಡಿದ್ದು, ಸಂಡೂರಿನ ಅರುಣಕುಮಾರ ಗವಳಿ ಎಂಬುವವರಿಂದ ಒಂದು ಆಧಾರ್ ಕಾರ್ಡ್, ಗದಗದ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಇನ್ನೂ ಒಂದು ಸಿಮ್ ಕಾರ್ಡ್ ತೆಗೆದುಕೊಂಡಿದ್ದಾನೆ. ಈ ಎಲ್ಲ ಜನರನ್ನು ನಾವು ವಿಚಾರಣೆ ನಡೆಸಲಿದ್ದೇವೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದರು.

ಇದನ್ನೂ ಓದಿ : Pune Bengaluru ಹೆದ್ದಾರಿಯಲ್ಲಿ ಭೀಕರ ಅಪಘಾತ : 48 ವಾಹನಗಳು ಜಖಂ

ಇದನ್ನೂ ಓದಿ : Mangaluru blast Shariq arrested: ಅವನೇ ಇವನು: ಶಾರೀಖ್ ಬಗ್ಗೆ ಮಂಗಳೂರು ಪೊಲೀಸರ ಸ್ಪಷ್ಟನೆ

ಶಾರಿಕ್ ಅವರ ಹುಟ್ಟೂರಾದ ಶಿವಮೊಗ್ಗದ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿರುವ ಅವರ ನಿವಾಸದ ಮೇಲೆ ಕರ್ನಾಟಕ ಪೊಲೀಸ್ ತಂಡಗಳು ದಾಳಿ ನಡೆಸುತ್ತಿದ್ದು, ಅವರ ಸಂಬಂಧಿಕರ ಮನೆ ಮೇಲೂ ದಾಳಿ ನಡೆಸಲಾಗುತ್ತಿದೆ.
ಈ ಹಿಂದೆ ಮಂಗಳೂರು ನಗರದಲ್ಲಿ ಉಗ್ರರ ಪರ ಗೋಡೆ ಬರಹ ಬರೆದಿದ್ದಕ್ಕಾಗಿ ಶಾರಿಕ್ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಅವರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು ಮತ್ತು ಬಾಂಬ್ ತಯಾರಿಕೆಯಲ್ಲಿ ತೊಡಗಿಕೊಂಡಿದ್ದರು. ಈತ ಆತ್ಮಹತ್ಯಾ ಬಾಂಬರ್ ಕೂಡ ಆಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ : Mangalore Blast: ಮಂಗಳೂರು ಬ್ಲಾಸ್ಟ್ : ಆರೋಪಿ ಶಾರೀಖ್ ಸೇರಿ ನಾಲ್ವರು ಅರೆಸ್ಟ್

ಕೆಲವು ತಿಂಗಳ ಹಿಂದೆ ಕೊಯಮತ್ತೂರಿನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಅಲ್ಲಿಯೂ ದೇವಸ್ಥಾನದ ಬಳಿ ಸ್ಫೋಟ ನಡೆಸಲು ಯೋಜನೆಯನ್ನು ರೂಪಿಸಿದ್ದರು. ಕಳೆದ 2 ತಿಂಗಳಿಂದ ಆತನ ಚಲನವಲನಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಕರ್ನಾಟಕ ಆರೋಗ್ಯ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ. ಈ ಪ್ರಕರಣದ ಕುರಿತು ಎಲ್ಲಾ ಆಯಾಮಗಳಲ್ಲಿಯೂ ತನಿಖೆಯನ್ನು ನಡೆಸಲಾಗುತ್ತಿದೆ. ಆರೋಪಿಗಳು ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳು, ನಿಷೇಧಿತ ಸಂಘಟನೆಗಳು ಅಥವಾ ಸ್ಲೀಪರ್‌ ಸೆಲ್‌ ಗಳೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂಬ ಬಗ್ಗೆ ಮಾಹಿತಿಯನ್ನು ನಾವು ಕಲೆ ಹಾಕುತ್ತಿದ್ದೇವೆ ಎಂದು ಕೆ ಸುಧಾಕರ್‌ ತಿಳಿಸಿದ್ದಾರೆ.

(Mangaluru Autorickshaw Blast) After the autorickshaw blast in Mangaluru city, after Sharikh and the three accused who helped him were interrogated, some terrible information came out that he was in contact with ISIS and had planned more bomb blasts.

Comments are closed.