Marriage Registration :ಇನ್ನು ಮುಂದೆ ಗ್ರಾಮ ಪಂಚಾಯಿತಿ ಯಲ್ಲೇ ಕಡ್ಡಾಯ ವಿವಾಹ ನೋಂದಣಿ ಮಾಡಿ

ಬೆಂಗಳೂರು:(Marriage Registration)ಮದುವೆ ಆದವರು ಉಪ-ರಿಜಿಸ್ಟ್ರಾರ್ ಕಚೇರಿಗೆ ತೆರಳಿ ವಿವಾಹ ನೋಂದಣಿ ಮಾಡಿಸಬೇಕಿತ್ತು, ಇದೀಗ ಸ್ಥಳೀಯ ಗ್ರಾಮ ಪಂಚಾಯಿತಿಗಳಲ್ಲಿ ವಿವಾಹ ಪ್ರಮಾಣ ಪತ್ರಗಳನ್ನು ಪಡೆಯಬಹುದು.ಈ ಕುರಿತು ರಾಜ್ಯ ಸರಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಇನ್ನು ಮುಂದೆ ಗ್ರಾಮ ಪಂಚಾಯಿತಿಯಲ್ಲಿ ಕಡ್ಡಾಯವಾಗಿ ವಿವಾಹ ನೋಂದಣಿ ಮಾಡಿಸಬೇಕು.

(Marriage Registration)ರಾಜ್ಯದಲ್ಲಿ “ಬಾಲ್ಯವಿವಾಹ” ತಡೆಯುವುದಕ್ಕಾಗಿ ಸರಕಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದು,ಇನ್ನು ಮುಂದೆ ಗ್ರಾಮ ಪಂಚಾಯತ್‌ಗೆ ಕಡ್ಡಾಯ ವಿವಾಹ ನೋಂದಣಿಗೆ ಅಧಿಕಾರ ನೀಡಲಾಗುವುದು ಎಂದು ತಿಳಿಸಿದೆ. ರಾಜ್ಯದಲ್ಲಿ ಬಾಲ್ಯವಿವಾಹಗಳು ಹೆಚ್ಚುತ್ತಿದ್ದು, ಬಾಲ್ಯವಿವಾಹಗಳನ್ನು ತಡೆಗಟ್ಟಲು ವಿವಾಹ ನೋಂದಣಿಯನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ತರಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ.

ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ವಿವಾಹ ನೋಂದಣಿ ಮಾಡಲು ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ನೀಡಬೇಕು.ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಕಡ್ಡಾಯವಾಗಿ ನೋಂದಣಿ ಮಾಡಿಸಿ ಮತ್ತು ನೋಂದಣಿಯ ಶುಲ್ಕ 250 ರೂ ಇರಬೇಕು ಎಂದು ತಿಳಿಸಿದೆ . ಇದುವರೆಗೆ ಉಪ-ರಿಜಿಸ್ಟ್ರಾರ್ ಕಚೇರಿಗಳಲ್ಲಿ ವಿವಾಹ ನೋಂದಣಿ ನಡೆಯುತ್ತಿತ್ತು. ದಂಪತಿಗಳು ತಮ್ಮ ನಿವಾಸದ ಮಿತಿಯಲ್ಲಿ ಅಥವಾ ಮದುವೆಯಾದ ಸ್ಥಳದಲ್ಲಿ ಇರುವ ಉಪ-ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ಸಂಬಂಧಿತ ಅರ್ಜಿಗಳನ್ನು ಪಡೆದುಕೊಳ್ಳುವ ಮೂಲಕ ಅಥವಾ ಆಯಾ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡುವ ಮೂಲಕ ನೋಂದಾಯಿಸುತ್ತಿದ್ದರು.

ಇದನ್ನೂ ಓದಿ:Supreme Court Demonetisation Judgment : ನೋಟ್ ಬ್ಯಾನ್ ಗೆ ಅಸ್ತು ಎಂದ ಸುಪ್ರೀಂಕೋರ್ಟ್ : ಅರ್ಜಿ ವಜಾ

ಇದನ್ನೂ ಓದಿ:ಮಂಗಳೂರು ಏರ್‌ಪೋರ್ಟ್‌ನಲ್ಲಿ 4 ತಿಂಗಳು ಹಗಲು ವಿಮಾನ ಹಾರಾಟ ರದ್ದು

ಇದನ್ನೂ ಓದಿ:Presidency Engineering College : ಪ್ರೆಸಿಡೆನ್ಸಿ ಇಂಜಿಯರಿಂಗ್ ಕಾಲೇಜು ಕ್ಯಾಂಪಸ್ ನಲ್ಲೇ ವಿದ್ಯಾರ್ಥಿನಿ ಕೊಲೆ : ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಿಯಕರನಿಂದ ಚಾಕು ಇರಿತ

ಫಾರ್ಮ್ ಭರ್ತಿ ಮಾಡಿದ ನಂತರ ಮೂವರು ಸ್ನೇಹಿತರು ಅಥವಾ ಸಂಬಂಧಿಕರು ವಿವಾಹಿತ ದಂಪತಿಗಳ ಸಹಿಯೊಂದಿಗೆ ಸಾಕ್ಷಿಗಳಾಗಿ ಸಹಿ ಮಾಡಬೇಕಾಗಿತ್ತು. ನಂತರ ಮದುವೆಯಾದ ದಂಪತಿಗಳು ಉಪ-ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿ ನಮೂನೆಗೆ ಸಹಿ ಮಾಡುವ ಮೂಲಕ ತಮ್ಮ ವಿವಾಹ ನೋಂದಣಿ ಮಾಡಿಕೊಳ್ಳುತ್ತಿದ್ದರು. ಈಗ ಅದೇ ಅಧಿಕಾರವನ್ನು ಆಯಾ ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ನೀಡಿದೆ.

Marriage Registration Compulsory marriage registration in Grama Panchayat from now

Comments are closed.