Mekedatu padayatra countdown : ಮೇಕೆದಾಟು ಪಾದಯಾತ್ರೆಗೆ ಕ್ಷಣಗಣನೆ: ಪಾದಯಾತ್ರೆಗೆ ಚಾಲನೆ ಕೊಡ್ತಾರಂತೆ ಶಿವಣ್ಣ

ಬೆಂಗಳೂರು : ಕರ್ನಾಟಕ ರಾಜಕೀಯದಲ್ಲಿ ಜಿದ್ದಾಜಿದ್ದಿ ಹೋರಾಟಕ್ಕೆ ಕಾರಣವಾಗಿರುವ ಮೇಕದಾಟು ಪಾದಯಾತ್ರೆ ಆರಂಭವಾಗಲಿದ್ದು, ಈ ಐತಿಹಾಸಿಕ ಪಾದಯಾತ್ರೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ. ಇಂದಿನಿಂದ ಮೇಕದಾಟು ಸಂಗಮದಿಂದ ಆರಂಭ ಆಗಲಿರುವ ಪಾದಯಾತ್ರೆಗೆ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿದ್ದು ( Mekedatu padayatra countdown ) ಕಾಂಗ್ರೆಸ್ ಶಾಸಕರು, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸೇರಿದಂತೆ ಹಲವರು ಈ ಪಾದಯಾತ್ರೆ ಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕದಲ್ಲಿ ವೀಕೆಂಡ್‌ಕರ್ಪ್ಯೂ ಸೇರಿದಂತೆ ಹಲವು ಕಠಿಣ ನಿಯಮಗಳು ಜಾರಿಯಲ್ಲಿದ್ದು, ಅವುಗಳನ್ನೆಲ್ಲ ಲೆಕ್ಕಿಸದೇ ಕಾಂಗ್ರೆಸ್ ಪಾದಯಾತ್ರೆ ಮಾಡಿಯೇ ಸಿದ್ಧ ಎಂದು ಹೊರಟಿದ್ದು ಇದು ಕುಡಿಯುವ ನೀರಿಗಾಗಿ ನಡೆಯುವ ಪಾದಯಾತ್ರೆ ಹೀಗಾಗಿ ಎಲ್ಲರೂ ಪಕ್ಷಾತೀತ ವಾಗಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆಕೊಟ್ಟಿದ್ದಾರೆ. ಈ‌ ಮಧ್ಯೆ ಡಿಕೆಶಿ ತಮ್ಮ ಪಾದಯಾತ್ರೆಗೆ ಸ್ಯಾಂಡಲ್ ವುಡ್ ನಟರ ಬೆಂಬಲವನ್ನು ಕೋರಿದ್ದರು. ಈಗಾಗಲೇ‌ ಚಲನಚಿತ್ರ ವಾಣಿಜ್ಯ ಮಂಡಳಿ ಈ ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದು, ಪಾದಯಾತ್ರೆಗೆ ಡಾ.ಶಿವರಾಜ್ ಕುಮಾರ್ ಚಾಲನೆ ನೀಡಲಿದ್ದಾರಂತೆ.

ನಾಳೆ ಕಾಂಗ್ರೆಸ್ ಹಮ್ಮಿಕೊಂಡಿರುವ ಈ ಪಾದಯಾತ್ರೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ, ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್ ನ ಎಲ್ಲ ಹಿರಿ ಕಿರಿಯ ನಾಯಕರು ಪಾಲ್ಗೊಳ್ಳಲಿದ್ದಾರಂತೆ.
ಈ ಮಧ್ಯೆ ಶಿವರಾಜ್ ಕುಮಾರ್ ಅವರಿಂದ ಪಾದಯಾತ್ರೆಗೆ ಚಾಲನೆ ಕೊಡಿಸುವ ಮೂಲಕ ಇದು ಪಕ್ಷಾತೀತವಾದ ಹೋರಾಟ ಎಂಬ ಸಂದೇಶ ಕೊಡಿಸುವ ಪ್ರಯತ್ನದಲ್ಲಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಮೂಲಗಳ ಮಾಹಿತಿ ಪ್ರಕಾರ ಮುಂಜಾನೆ ಶಿವರಾಜ್ ಕುಮಾರ್ ಡಿಕೆಶಿಯವರ ನಿವಾಸಕ್ಕೆ ತೆರಳಲಿದ್ದು ಅಲ್ಲಿಂದ ಮೇಕದಾಟು ಸಂಗಮಕ್ಕೆ ತೆರಳಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರಂತೆ.

ಈ ಹಿಂದೆ ಡಾ. ರಾಜ್ ಕುಮಾರ್ ಗೋಕಾಕ್ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ವರನಟ ಪಾಲ್ಗೊಂಡ ಈ ಹೋರಾಟದಿಂದ ಜನರು ಹೆಚ್ಚು ಜಾಗೃತಗೊಂಡಿದ್ದಲ್ಲದೇ ಹೆಚ್ಚು ಜನರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಈಗಲೂ ಅದೇ ಟ್ರಿಕ್ಸ್ ಬಳಸಲು ಕಾಂಗ್ರೆಸ್ ನಾಯಕರು ಸಿದ್ಧವಾಗಿದ್ದು, ದೊಡ್ಮನೆಯವರಿಂದ ಪಾದಯಾತ್ರೆ ಗೆ ಚಾಲನೆ‌ ಕೊಡಿಸಿ ಜನರನ್ನು ಸೆಳೆಯುವ ತಂತ್ರ ಅನುಸರಿಸಲು ಮುಂದಾಗಿದೆ.

ಆದರೆ ರಾಮನಗರ ಸೇರಿದಂತೆ ಎಲ್ಲೆಡೆ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿದ್ದು ಪಾದಯಾತ್ರೆ ನಡೆಯೋದೇ ಅನುಮಾನ ಎಂಬ ಮಾತು ಪೊಲೀಸ್ ವಲಯದಿಂದಲೇ ಕೇಳಿ ಬಂದಿದೆ. ಅಲ್ಲದೇ ಸರ್ಕಾರವೂ ಪಾದಯಾತ್ರೆ ತಡೆಯಲು ಅಧಿಕಾರ ಬಳಸಿಕೊಳ್ಳಲು ಸಿದ್ಧತೆ ನಡೆಸಿದೆ. ಹೀಗಾಗಿ ಇಷ್ಟೆಲ್ಲ ವಿವಾದಗಳಿರೋ ಪಾದಯಾತ್ರೆಯಲ್ಲಿ ಶಿವಣ್ಣ ನೇರವಾಗಿ ಪಾಲ್ಗೊಳ್ತಾರಾ ಅಥವಾ ನೈತಿಕ ಬೆಂಬಲ ಘೋಷಿಸಿ ಸುಮ್ಮನಾಗ್ತಾರಾ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ : ಮಹಿಳೆಯರೇ, ನಿಮ್ಮ ಸುರಕ್ಷತೆಗಾಗಿ ಈ ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್‌ನಲ್ಲಿರಲಿ

ಇದನ್ನೂ ಓದಿ : ಸರಕಾರದ ಎಡವಟ್ಟು, ಹಳ್ಳಿಯತ್ತ ಹೊರಟ ಜನರು : ಹಳ್ಳಿಯಲ್ಲೂ ಕೊರೊನಾ, ಓಮಿಕ್ರಾನ್‌ ಭೀತಿ

(Mekedatu padayatra countdown , congress walk will inauguration by Shiva raj Kumar)

Comments are closed.