Work from Home : ಓಮಿಕ್ರಾನ್‌ ಆರ್ಭಟ : ಐಟಿ ಕಂಪೆನಿ ಉದ್ಯೋಗಿಗಳಿಗೆ ಮತ್ತೆ ವರ್ಕ್‌ ಫ್ರಂ ಹೋಮ್‌

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ಸೋಂಕು ಏರಿಕೆಯ ಜೊತೆಗೆ ಓಮಿಕ್ರಾನ್‌ ( Omicron ) ಪತ್ತೆಯಾಗಿದೆ. ಈಗಾಗಲೇ ಇಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಮುಂದಿನ ಎರಡು ವಾರಗಳ ಅವಧಿಯಲ್ಲಿ ಸೋಂಕು ಉಲ್ಬಣವಾಗುವ ಆತಂಕ ಎದುರಾಗಿದೆ. ಓಮಿಕ್ರಾನ್‌ ಸೋಂಕಿತರ ಜೊತೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಟೆಸ್ಟ್‌ಗೆ ಒಳಪಡಿಸಲಾಗಿದ್ದು, ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದೆ. ಈ ನಡುವಲ್ಲೇ ರಾಜ್ಯ ಸರಕಾರ ತುರ್ತು ಸಭೆ ನಡೆದು ಕೆಲವೊಂದು ನಿಯಮವನ್ನು ಜಾರಿಗೆ ತಂದಿದೆ. ಅಲ್ಲದೇ ಕಠಿಣ ನಿರ್ಬಂಧ ವಿಧಿಸುವ ಮುನ್ಸೂಚನೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಐಟಿ ಕಂಪೆನಿಗಳು ( IT Companies ) ಮತ್ತೆ ವರ್ಕ್‌ಫ್ರಂ ಹೋಮ್‌ (Work from Home) ವ್ಯವಸ್ಥೆಯನ್ನು ಮುಂದುವರಿಸುವ ಸಾಧ್ಯತೆಯಿದೆ.

ಕೊರೊನಾ ಮೊದಲ ಅಲೆ ಆರಂಭವಾಗುತ್ತಲೇ ಐಟಿ ಕಂಪೆನಿಗಳು ವರ್ಕ್‌ ಫ್ರಂ ಹೋಮ್‌ ವ್ಯವಸ್ಥೆಯನ್ನು ಜಾರಿಗೆ ತಂದಿದ್ದವು. ಕಳೆದ ಎರಡು ವರ್ಷಗಳಿಂದಲೂ ಶೇ.೯೦ರಷ್ಟು ಐಟಿ ಕಂಪೆನಿಗಳ ಸಿಬ್ಬಂದಿಗಳು ಮನೆಯಿಂದಲೇ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಕೊಂಚ ಕಡಿಮೆಯಾಗುತ್ತಲೇ ಐಟಿ ಕಂಪೆನಿಗಳು ಮತ್ತೆ ಕೆಲಸಕ್ಕೆ ಮರಳುವಂತೆ ಸೂಚನೆಯನ್ನು ನೀಡಿದ್ದವು. ಆದ್ರೀಗ ರಾಜ್ಯದಲ್ಲಿ ಕೊರೊನಾ ಸೋಂಕು ನಿಧಾನವಾಗಿ ಏರಿಕೆ ಕಾಣುವುದರ ಜೊತೆಗೆ ಓಮಿಕ್ರಾನ್‌ ಪತ್ತೆಯಾಗಿರುವುದು ಐಟಿ ವಲಯವನ್ನು ತಲ್ಲಣಗೊಳಿಸಿದೆ. ಅಲ್ಲದೇ ವರ್ಕ್‌ ಫ್ರಂ ಹೋಮ್‌ ವ್ಯವಸ್ಥೆಯನ್ನೇ ಮುಂದುವರಿಸಲು ಐಟಿ ಕಂಪೆನಿಗಳು ಚಿಂತನೆ ನಡೆಸಿವೆ.

ಹೈದರಾಬಾದ್‌ನ ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ನೀತಿಯನ್ನು ಜಾರಿಗೆ ತಂದಿವೆ. ಹೈದರಾಬಾದ್‌ನ ಐಟಿ/ಐಟಿಇಎಸ್ ಕಂಪನಿಗಳ ಉನ್ನತ ಸಂಸ್ಥೆಯಾದ ಹೈದರಾಬಾದ್ ಸಾಫ್ಟ್‌ವೇರ್ ಎಂಟರ್‌ಪ್ರೈಸ್ ಅಸೋಸಿಯೇಷನ್ ​​(ಹೈಎಸ್‌ಇಎ) ಅಧ್ಯಕ್ಷ ಕೆ ಅರೋಲ್ ಅವರು ಪ್ರಸ್ತುತ, ದೊಡ್ಡ ಕಂಪನಿಗಳ ಶೇಕಡಾ ಐದು ರಷ್ಟು ಉದ್ಯೋಗಿಗಳು ಕಚೇರಿಯಿಂದಲೇ ಕೆಲಸ ಮಾಡುತ್ತಿದ್ದಾರೆ, ಆದರೆ ಮಧ್ಯಮ ಮತ್ತು ಸಣ್ಣ ಗಾತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಕಂಪನಿಗಳು, ಸುಮಾರು 30 ಮತ್ತು 70 ಪ್ರತಿಶತ ಕ್ರಮವಾಗಿ ಕಚೇರಿಯಿಂದ ಕೆಲಸ ಮಾಡುತ್ತಿವೆ. ಮೊದಲು, ಈ ಕಂಪನಿಗಳು ಕಚೇರಿಯಿಂದ ಕೆಲಸ ಮಾಡುವ ಉದ್ಯೋಗಿಗಳ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಯೋಚಿಸುತ್ತಿದ್ದವು, ಆದಾಗ್ಯೂ, ಓಮಿಕ್ರಾನ್ ಬೆದರಿಕೆಯಿಂದಾಗಿ, ಹೈದರಾಬಾದ್‌ನಲ್ಲಿರುವ ಕಂಪನಿಗಳು ತಮ್ಮ ಯೋಜನೆಗಳನ್ನು ವಿಳಂಭಗೊಳಿಸ ಬಹುದು ಎನ್ನಲಾಗುತ್ತಿದೆ.

COVID-19 ಕಳೆದೆರಡು ವರ್ಷಗಳ ಹಿಂದೆ ವಿಶ್ವಕ್ಕೆ ಅಪ್ಪಳಿಸಿದ ಬೆನ್ನಲ್ಲೇ ಅನೇಕ ಕಂಪೆನಿಗಳು ಬಾಗಿಲು ಮುಚ್ಚಿವೆ. ಇನ್ನು ಐಟಿ ದೈತ್ಯ ಕಂಪೆನಿಗಳು ತನ್ನ ಸಿಬ್ಬಂದಿಗಳಿಗೆ ಮನೆ ಯಿಂದಲೇ ಕರ್ತವ್ಯ ನಿರ್ವಹಣೆ ಮಾಡುವಂತೆ ಸೂಚಿಸಿವೆ. ರಾಜ್ಯ ಸರಕಾರ ಕೂಡ ಐಟಿ ಕಂಪೆನಿ ಸಿಬ್ಬಂದಿಗಳು ಕಚೇರಿಯಿಂದಲೇ ಕಾರ್ಯನಿರ್ವಹಣೆ ಮಾಡುವಂತೆ ಹೇಳಿತ್ತು. ಆದ್ರೀಗ ಮತ್ತೆ ಖಾಸಗಿ ಕಚೇರಿಗಳು, ಐಟಿ ಕಂಪೆನಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಸೂಚನೆಯನ್ನು ನೀಡುವ ಸಾಧ್ಯತೆಯಿದೆ.

ಓಮಿಕ್ರಾನ್‌ ಪತ್ತೆಯಾದ ಬೆನ್ನಲ್ಲೇ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಅಧಿಕಾರಿಗಳು ಹಾಗೂ ಹಿರಿಯ ಸಚಿವರ ಜೊತೆಗೆ ತುರ್ತು ಸಭೆಯನ್ನು ನಡೆಸಿದ್ದಾರೆ. ಸಭೆಯಲ್ಲಿ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಅಲ್ಲದೇ ಕೋವಿಡ್‌ ತಾಂತ್ರಿಕ ಸಮಿತಿಯ ತಜ್ಞರ ಜೊತೆಗ ಸಭೆ ನಡೆಸಿದ ನಂತರದಲ್ಲಿ ಕಟ್ಟುನಿಟ್ಟಾದ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದಿದ್ದಾರೆ. ಅಲ್ಲದೇ ಇಬ್ಬರು ವ್ಯಕ್ತಿಗಳು ದಕ್ಷಿಣ ಆಫ್ರಿಕಾದಿಂದ ಪ್ರಯಾಣಿಸಿದ್ದಾರೆ ಮತ್ತು ಒಮಿಕ್ರಾನ್ ಅನ್ನು ಎದುರಿಸಲು ರಾಜ್ಯವು ಸಿದ್ಧವಾಗಿದೆ ಎಂದು ಹೇಳಿದರು. ಯಾರಾದರೂ ವಿದೇಶದಿಂದ ಬರುತ್ತಿದ್ದರೆ, ಇತರ ಜನರ ಸುರಕ್ಷತೆಗಾಗಿ ಅವರು ಕೊರೊನಾ ನೆಗೆಟಿವ್‌ ವರದಿ ಕಡ್ಡಾಯಗೊಳಿಸಲಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಯುರೋಪಿಯನ್ ದೇಶಗಳಿಂದ ಬರುವ ಜನರ ಮೇಲೆ ನಾವು ತೀಕ್ಷ್ಣವಾದ ಕಣ್ಣು ಇಡಬೇಕು. ನಾವು ದಕ್ಷಿಣ ಆಫ್ರಿಕಾದಿಂದ ಬರುವ ಜನರನ್ನು ಪರೀಕ್ಷಿಸುತ್ತಿದ್ದೇವೆ. ನಾವು ಬೇರೆ ಪ್ರೋಟೋಕಾಲ್ ಅನ್ನು ಹೊಂದಿರಬೇಕು. ನಾವು ಅದಕ್ಕೆ ಸಿದ್ಧರಿದ್ದೇವೆ, ಟ್ರ್ಯಾಕಿಂಗ್ ಮತ್ತು ಪರೀಕ್ಷೆಯಲ್ಲಿ ನಾವು ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ : Omicron Meeting : ಓಮಿಕ್ರಾನ್‌ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟ

ಇದನ್ನೂ ಓದಿ : Omicron New Guidelines : ಮದುವೆಗೆ ನಿರ್ಬಂಧ, ಪೋಷಕರು 2 ವ್ಯಾಕ್ಸಿನ್‌ ಪಡೆದಿದ್ರೆ ಮಕ್ಕಳಿಗೆ ಶಾಲೆಗೆ ಪ್ರವೇಶ

( Omicron found: Work from home for IT Companies in Karnataka)

Comments are closed.