ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಬಿಗ್ ಶಾಕ್ : ಭಾನುವಾರ ರಜೆ ಕಡಿತಕ್ಕೆ ಸರ್ಕಾರದ ಚಿಂತನೆ

ತುಮಕೂರು : ಕೊರೋನಾ ಸೋಂಕಿನ ನಿಯಂತ್ರಣದ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಹಗಲು ರಾತ್ರಿ ದುಡಿಯುತ್ತಿದ್ದಾರೆ. ಇಂತಹ ಸಿಬ್ಬಂದಿಗಳಿಗೆ ಭಾನುವಾರವೂ ಕೆಲಸ ನಿರ್ವಹಿಸುವಂತೆ ಮಾಡಿ, ಬೇರೆ ದಿನಗಳಲ್ಲಿ ರಜೆ ನೀಡೋ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಬಿಗ್ ಶಾಕ್ ನೀಡೋದಕ್ಕೆ ಮುಂದಾಗಿದೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಭಾನುವಾರ ರಜೆ ಇದ್ದರೂ ಜನರು ಚಿಕಿತ್ಸೆ ಪಡೆದುಕೊಳ್ಳೋದಕ್ಕೆ ಆಸ್ಪತ್ರೆಗಳಿಗೆ ಬರುತ್ತಾರೆ. ಈ ಸಮಯದಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಗಳು ರಜೆಯಲ್ಲಿ ಇರೋ ಕಾರಣ, ಸೂಕ್ತ ಚಿಕಿತ್ಸೆ ಸಿಗೋದು ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ರಜೆ ಬದಲಿಸೋ ಚಿಂತನೆ ಮಾಡಲಾಗಿದೆ ಎಂದರು.

ಇದನ್ನೂ ಓದಿ: GOOD NEWS : ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ರಾಜ್ಯ ಸರಕಾರ

ಮತ್ತೊಂದೆಡೆ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕರು ಸೆಪ್ಟೆಂಬರ್ 22 ರಂದು ಹೊರಡಿಸಿದ ಸುತ್ತೋಲೆಯಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಲಸಿಕಾಕರಣದ ಕಾರ್ಯದ ವಿರಾಮಕ್ಕಾಗಿ ವಾರದಲ್ಲಿ ಒಂದು ದಿನ ಸಾಧ್ಯವಾದಷ್ಟು ಭಾನುವಾರ ವಿರಾಮಕ್ಕಾಗಿ ಉಪಯೋಗಿಸಿಕೊಳ್ಳುವಂತೆ ಆದೇಶಿಸಿದ್ದರು. ಇದರ ಬೆನ್ನಲ್ಲೇ ಸಿಎಂ ನಿರ್ಧಾರ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಬಿಗ್ ಶಾಕ್ ನೀಡಿದಂತೆ ಆಗಿದೆ.

ಇದನ್ನೂ ಓದಿ: ಬೆಂಗಳೂರು ರಸ್ತೆ ಕಾಮಗಾರಿಗೆ 5 ವರ್ಷದಲ್ಲಿ 20 ಸಾವಿರ ಕೋಟಿ ಖರ್ಚು : ಸಿಎಂ ಬೊಮ್ಮಾಯಿ

(Big Shock for Health Department staff: Government thinking for Sunday holiday cuts)

Comments are closed.