ಯಕ್ಷಗಾನ ಕಲಾವಿದರ ಬಗ್ಗೆ ನಾಲಗೆ ಹರಿಬಿಟ್ಟಿದ್ದ ಪುರುಷೋತ್ತಮ ಬಿಳಿಮನೆಯಿಂದ ಕ್ಷಮೆಯಾಚನೆ

Purushottama Bilimale: ಯಕ್ಷಗಾನ ಕಲಾವಿದರ ಪೈಕಿ ಬಹುತೇಕರು ಸಲಿಂಗಕಾಮಿಗಳು ಎಂದು ಹೇಳುವ ಮೂಲಕ ಕರಾವಳಿಯ ವೈಭವದ ಕಲೆಗೆ ಅಪಮಾನಗೈದಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೋ ಪುರುಷೋತ್ತಮ ಬಿಳಿಮಲೆ, ಇದೀಗ ತಮ್ಮ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಕ್ಷಮೆಯಾಚಿಸಿದ್ದಾರೆ.

ಬೆಂಗಳೂರಿನ ಈ ವಿಚಾರವಾಗಿ ಮಾತನಾಡಿದ ಅವರು ಕ್ಷಮೆಯಾಚನೆಯ ಜೊತೆಯಲ್ಲಿ ತಮ್ಮ ಹೇಳಿಕೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. ಕೆಲ ಯಕ್ಷಗಾನ ಕಲಾವಿದರು ಸಲಿಂಗಿಗಳು ಹೌದು, ಇದೇನು ನಾನು ಹೊಸದಾಗಿ ಹೇಳುತ್ತಿರುವ ವಿಷಯವಲ್ಲ. ಆದರೆ ನನ್ನ ಹೇಳಿಕೆಯಿಂದ ಕಲಾವಿದರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುವೆ. ಯಕ್ಷಗಾನ ಕಲಾವಿದರು ಹಾಗೂ ಅಭಿಮಾನಿಗಳಿಗೆ ನನ್ನ ಕ್ಷಮೆ ಸಲ್ಲಿಸುವೆ ಎಂದು ಹೇಳಿಕೆ ನೀಡಿದ್ದಾರೆ. ಯಕ್ಷಗಾನ ಕಲೆಗೆ ಅವಮಾನ ಮಾಡುವುದು ನನ್ನ ಉದ್ದೇಶ ಖಂಡಿತ ಆಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಯಕ್ಷಗಾನ ಕಲಾವಿದರು ಸಲಿಂಗ ಕಾಮಿಗಳು: ಸ್ತ್ರೀವೇಷಧಾರಿಗಳ ಮೇಲೆ ಭಾಗವತರ ಸೇಡು – ನಾಲಿಗೆ ಹೆರಿಬಿಟ್ಟ ಬಿಳಿಮಲೆ

ಯಕ್ಷಗಾನ ಕಲೆಯಲ್ಲಿ ಸ್ತ್ರೀವೇಷಧಾರಿಗಳಿಗೆ ಸಂಕಷ್ಟವಿದೆ. ಸಲಿಂಗಕಾಮಕ್ಕೆ ಒಪ್ಪದಿದ್ದರೆ ಭಾಗವತರು ಅವರಿಗೆ ಪದ್ಯಗಳಲ್ಲಿ ಅವಕಾಶವನ್ನೇ ನೀಡುತ್ತಿರಲಿಲ್ಲ. ವರ್ಷದಲ್ಲಿ ಆರೇಳು ತಿಂಗಳು ಮೇಳಗಳಲ್ಲಿ ಕಾಲ ಕಳೆಯುತ್ತಿದ್ದ ಕಲಾವಿದರಿಗೆ ಹೆಣ್ಣುಕೊಡುವವರು ಯಾರೂ ಇರಲಿಲ್ಲ. ಹೀಗಾಗಿ ಯಕ್ಷಗಾನದಲ್ಲಿ ಸಲಿಂಗಕಾಮ ಹೆಚ್ಚಿತ್ತು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕೂಡ ರಾಜ್ಯ ಸರ್ಕಾರ ಬಿಳಿಮನೆಯವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ಕಿತ್ತೆಸುವಂತೆ ಆಗ್ರಹಿಸಿದ್ದರು. ಇಲ್ಲವಾದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದರು.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories