Ticket apps on tourist place: ಉತ್ತರ ಕನ್ನಡ ಪ್ರವಾಸಿ ತಾಣಗಳ ಟಿಕೆಟ್‌ ಸಮಸ್ಯೆ ಬಗೆಹರಿಸಲು ಹೊಸ ಪ್ಲ್ಯಾನ್‌

ಉತ್ತರ ಕನ್ನಡ: (Ticket apps on tourist place) ದೇಶ ವಿದೇಶಗಳಲ್ಲಿ ಪ್ರವಾಸಿ ತಾಣಗಳಿಂದಲೇ ಹೆಸರುವಾಸಿಯಾಗಿರುವ ಜಿಲ್ಲೆ ಉತ್ತರಕನ್ನಡ. ಕಡಲತೀರ, ಬೆಟ್ಟಗುಡ್ಡಗಳು, ಹಲವು ಪುರಾತನ ಗುಡಿಗೋಪುರಗಳು, ಹೀಗೆ ಹಲವು ಹಚ್ಚಹಸಿರಿನ ಪ್ರದೇಶಗಳಿಂದ ಉತ್ತರ ಕನ್ನಡ ಆವೃತವಾಗಿವೆ. ಈ ಪರಿಸರದಲ್ಲಿ ವಿಶ್ರಾಂತಿಗಾಗಿಯೋ ಅಥವಾ ಮನರಂಜನೆಗಾಗಿಯೋ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಜಿಲ್ಲೆಯು ಪ್ರವಾಸೋಧ್ಯಮಕ್ಕೆ ಸಾಕಷ್ಟು ಹೆಸರುವಾಸಿಯಾಗಿದ್ದು, ಪ್ರವಾಸಿಗರು ಯಾವೆಲ್ಲ ಸ್ಥಳಗಳಿಗೆ ಭೇಟಿ ನೀಡುತ್ತಾರೆ, ಎಷ್ಟು ಸಂಖ್ಯೆಯಲ್ಲಿ ಬರುತ್ತಾರೆ, ಎಷ್ಟು ಆದಾಯ ಬಂದಿದೆ ಎಂಬ ನಿಖರ ಮಾಹಿತಿಗಳು ಇಲಾಖೆಗೆ ಸಿಗುತ್ತಿಲ್ಲ. ಈ ಹಿನ್ನಲೆಯಲ್ಲಿ ಪ್ರವಾಸಿ ಸ್ಥಳಗಳ ಟಿಕೆಟ್‌ ಸಮಸ್ಯೆಯನ್ನು ಬಗೆಹರಿಸಲು ಪ್ರವಾಸೋದ್ಯಮ ಇಲಾಖೆ ಹೊಸ ಪ್ಲ್ಯಾನ್‌ ಮಾಡಿದ್ದು, ಪ್ರವಾಸಿತಾಣಗಳ ಟಿಕೆಟ್‌ ವ್ಯವಸ್ಥೆಯನ್ನು ಆಪ್‌ ಮೂಲಕ ಒಂದೇ ಕಡೆ ಸಂಯೋಜಿಸಲು ಇಲಾಖೆ ಯೋಜನೆಯನ್ನು ರೂಪಿಸಿದೆ.

ಹೌದು ಉತ್ತರ ಕನ್ನಡ ಜಿಲ್ಲೆಯು ಪ್ರವಾಸೋದ್ಯಮಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ. ಇಂತಹ ಜಿಲ್ಲೆಗೆ ಪ್ರತಿವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರಾದರೂ ಯಾವೆಲ್ಲ ಸ್ಥಳಗಳಿಗೆ ಎಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅದರಿಂದ ಎಷ್ಟೆಲ್ಲ ಆದಾಯ ಬಂದಿದೆ ಎನ್ನುವ ನಿಖರ ಮಾಹಿತಿ ಪ್ರವಾಸೋದ್ಯಮ ಇಲಾಖೆಗೆ ಸಿಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಟಿಕೆಟ್‌ ಸೌಲಭ್ಯವಿರುವ ಎಲ್ಲ ಪ್ರವಾಸಿತಾಣಗಳ ಟಿಕೆಟ್ ವ್ಯವಸ್ಥೆಯನ್ನ ಆ್ಯಪ್ ಮೂಲಕ ಒಂದೇ ಕಡೆ ಸಂಯೋಜಿಸಲು ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಿದೆ. ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗುತ್ತಿದೆ. ಎಲ್ಲೆಲ್ಲಿ ಟಿಕೆಟ್ ಪಡೆದು ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತಿದೆ ಅಂತಹ ಎಲ್ಲ ಪ್ರವಾಸಿ ತಾಣಗಳನ್ನ ಟಿಕೆಟ್ ಅನ್ನು ಇಂಟಿಗ್ರೇಷನ್ ಸಿಸ್ಟಮ್ ಅಡಿಯಲ್ಲಿ ತರಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನೂತನ ಯೋಜನೆಯಲ್ಲಿ ಪ್ರತಿಯೊಂದು ಪ್ರವಾಸಿ ತಾಣದಲ್ಲಿ ಲಾಗಿನ್‌ ಮೂಲಕವೇ ಟಿಕೆಟ್‌ ನೀಡಬೇಕು. ಹಾಗಾಗಿ ಎಷ್ಟು ಮಂದಿ ಬರುತ್ತಿದ್ದಾರೆ, ಎಲ್ಲಿಂದ ಬರುತ್ತಿದ್ದಾರೆ, ಎಷ್ಟು ಆದಾಯ ಬರುತ್ತಿದೆ ಎನ್ನುವುದರ ಎಲ್ಲಾ ಮಾಹಿತಿಗಳು ಸಂಪೂರ್ಣವಾಗಿ ಕಲೆ ಹಾಕಲು ಸಾಧ್ಯವಾಗುತ್ತದೆ. ಅಲ್ಲದೇ ಈ ಯೋಜನೆ ಮೂಲಕ ಆನ್‌ ಲೈನ್‌ ನಲ್ಲಿ ಎಲ್ಲಿಂದ ಬೇಕಾದರೂ ಟಿಕೆಟ್‌ ಬುಕ್‌ ಮಾಡಿಕೊಳ್ಳಬಹುದು. ಹೀಗಾಗಿ ಇದು ಪ್ರವಾಸಿಗರಿಗೆ ಅನುಕೂಲವಾಗಲಿದೆ. ಅಲ್ಲದೇ ಈ ಯೋಜನೆಗೆ ಸಾರ್ವಜನಿಕರಿಂದಲೂ ಕೂಡ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಯನನು ಕೈಗೆತ್ತಿಕೊಳ್ಳಲಿ. ಇದರಿಂದಾಗಿ ಪ್ರವಾಸಿ ತಾಣ ಬೇರೆ ಜಿಲ್ಲೆಗಳಿಗೂ ಮಾದರಿಯಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : World women’s day 2023: ಮಹಿಳಾ ದಿನದಂದು ಮಹಿಳೆಯರಿಗೆ ಬಂಪರ್ ಆಫರ್ ನೀಡಿದ ರಾಜ್ಯ ಪ್ರವಾಸೋದ್ಯಮ ಇಲಾಖೆ

Ticket apps on tourist place: A new plan to solve the ticket problem of Uttara Kannada tourist places

Comments are closed.