ಬಿಡುಗಡೆಗೆ ಸಜ್ಜಾದ ಐಫೋನ್‌ 17e: 48MP ಕ್ಯಾಮೆರಾ ವೈಶಿಷ್ಟ್ಯವಿರುವ ಫೋನ್‌ ಬೆಲೆ ಎಷ್ಟು?

iPhone 17e Launch: ಆಪಲ್‌ ಹೊಸ ಫೋನ್‌ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ ಅಂದ್ರೆ ಟೆಕ್‌ ಜಗತ್ತಿನಲ್ಲಿ ಕುತೂಹಲವುಂಟಾಗುವುದು ಸಾಮಾನ್ಯ. ಅದಕ್ಕೆ ಸರಿಯಾಗಿ ಆಪಲ್‌ ಐಫೋನ್‌ 17e ಸರಣಿಯ ಕೊನೆಯ ಮಾಡೆಲ್‌ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ಹೌದು, 2026 ನೇ ಸಾಲಿನ ಮೊದಲ ಐಫೋನ್‌ ಬಿಡುಗಡೆ ಇನ್ನು ಕೆಲವೇ ದಿನಗಳು ಉಳಿದಿವೆ. ಈಗಾಗಲೆ ಐಫೋನ್‌ ಪ್ರಿಯರಲ್ಲಿ ಈ ಫೋನ್‌ ಬಗ್ಗೆ ಸಾಕಷ್ಟು ಕುತೂಹಲವುಂಟಾಗಿದೆ.

ಬಿಡುಗಡೆಗೆ ಸಜ್ಜಾಗಿರುವ ಐಫೋನ್‌ 17e ಸ್ವಲ್ಪ ಕಡಿಮೆ ವೈಶಿಷ್ಟ್ಯಗಳನ್ನು ಹೊಂದಿದ್ದರೂ ವಿನ್ಯಾಸ, ಬಣ್ಣ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದು ಸೋರಿಕೆಯಾದ ಮಾಹಿತಿಗಳು ಬಹಿರಂಗಪಡಿಸಿವೆ. ಐಫೋನ್‌ 17e ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ? ಬೆಲೆ ಎಷ್ಟು ಎಂದು ನೋಡೋಣ.

ಐಫೋನ್‌ 17e ವಿನ್ಯಾಸ, ಕ್ಯಾಮೆರಾ ಮತ್ತು ವೈಶಿಷ್ಟ್ಯ

ವಿನ್ಯಾಸದ ವಿಷಯದಲ್ಲಿ ಆಪಲ್ ಫೋನ್‌ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡುವುದಿಲ್ಲ. ಆದರೆ ಈ 17e ಸರಣಿಯ ಫೋನ್‌ನಲ್ಲಿ ಹೊಸ ಬಣ್ಣಗಳನ್ನು ನೋಡಬಹುದು.
ಜೊತೆಗೆ ಇನ್ನಷ್ಟು ಸ್ಲಿಮ್‌ ಆಗಿರುವ ಸಾಧ್ಯತೆಯಿದೆ. ಇದು 60Hz ರಿಫ್ರೆಶ್ ದರದೊಂದಿಗೆ 6.1-ಇಂಚಿನ OLED ಡಿಸ್ಪ್ಲೇಯನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಆಪಲ್ A19 ಪ್ರೊಸೆಸರ್, 8GB RAM ಮತ್ತು ಕನಿಷ್ಠ 128GB ಆಂತರಿಕ ಸಂಗ್ರಹಣೆಯಿಂದ ಚಾಲಿತವಾಗುವ ನಿರೀಕ್ಷೆಯಿದೆ.

ಇನ್ನು ಈ ಫೋನ್ 4005mAh ಬ್ಯಾಟರಿಯಿಂದ ಚಾಲಿತವಾಗಬಹುದು. ಕ್ಯಾಮೆರಾದ ವಿಷಯದಲ್ಲಿ 48MP ಯ ಸಿಂಗಲ್‌ ಲೆನ್ಸ್‌ ಹಿಂಬದಿಯ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ. ಇದರಿಂದ ಅತ್ಯುತ್ತಮ ಫೋಟೋಗಳನ್ನು ನಿರೀಕ್ಷಿಸಬಹುದು. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 12 MP ಯ ಕ್ಯಾಮೆರಾ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ದುಬಾರಿಯಾಯ್ತು ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ S26 ಸರಣಿ ಮೊಬೈಲ್‌ಗಳು: ಆಪಲ್‌ ಫೋನ್‌ ಖರೀದಿಯೂ ಕೈಸುಡಲಿದೆಯಾ?

ಐಫೋನ್‌ 17e ಬೆಲೆ ಎಷ್ಟು?

ಮಾರ್ಚ್ 4 ರಂದು ನಡೆಯಲಿರುವ ಜಾಗತಿಕ ಆಪಲ್ ಈವೆಂಟ್‌ನಲ್ಲಿ ಐಫೋನ್ 17e ಅನ್ನು ಅನಾವರಣಗೊಳಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.

ಕಡಿಮೆ ಬೆಲೆಯ ಮ್ಯಾಕ್‌ಬುಕ್‌ನಂತಹ ಇತರ ಸಾಧನಗಳನ್ನು ಸಹ ಈ ಈವೆಂಟ್‌ನಲ್ಲಿ ಅನಾವರಣಗೊಳಿಸಲಾಗುವುದು ಎಂಬ ವದಂತಿಗಳಿವೆ. ಸೋರಿಕೆಗಳ ಮಾಹಿತಿಯ ಪ್ರಕಾರ ಐಫೋನ್ 17e ಭಾರತೀಯ ಮಾರುಕಟ್ಟೆಯಲ್ಲಿ ₹60,000 ರಿಂದ ₹65,000 ರವರೆಗೆ ಲಭ್ಯವಿರುತ್ತದೆ.

ಇದರ ಬೆಲೆ US ನಲ್ಲಿ $599 ಮತ್ತು ದುಬೈನಲ್ಲಿ AED 2,199 ಆಗಿರಬಹುದು ಎಂದು ಅಂದಾಜಿಸಲಾಗಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories