Tecno Pop 7 Pro : ಬಜೆಟ್‌ ಫ್ರೆಂಡ್ಲೀ ಸ್ಮಾರ್ಟ್‌ಫೋನ್‌ ಟೆಕ್ನೊ ಪಾಪ್‌ 7 ಪ್ರೋ ಬಿಡುಗಡೆ; ಇದರ ಬೆಲೆ, ವೈಶಿಷ್ಟ್ಯ, ಲಭ್ಯತೆ ಹೀಗಿದೆ…

ಟೆಕ್ನೊ (Tecno), ಆಫ್ರಿಕಾದಲ್ಲಿ ಈ ಮೊದಲೇ ಬಿಡುಗಡೆ ಮಾಡಿದ್ದ ಪಾಪ್‌ 7 ಪ್ರೋ (Pop 7 Pro) ಸ್ಮಾರ್ಟ್‌ಫೋನ್‌ (Smartphone) ಅನ್ನು ಭಾರತದಲ್ಲೂ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ (Tecno Pop 7 Pro) ಬಜೆಟ್‌ ಬೆಲೆಯ ಫೋನ್‌ ಆಗಿದೆ. ಇದು 6.6 ಇಂಚಿನ HD+IPS ಡಿಸ್ಪ್ಲೇ ಹಾಗೂ ಶಕ್ತಿಶಾಲಿ 5000mAh ಬ್ಯಾಟರಿ ಹೊಂದಿದೆ. ಈ ಫೋನ್‌ ಕ್ವಾಡ್‌ ಕೋರ್‌ ಪ್ರೊಸೆಸ್ಸರ್‌ನಿಂದ ವೇಗ ಪಡೆಯಲಿದ್ದು 6ಜಿಬಿ ಯವರೆಗೆ RAM ಅನ್ನು ಹೊಂದಿದೆ. ಫೋಟೋ ಮತ್ತು ವಿಡಿಯೋ ಕಾಲ್‌ಗಳಿಗಾಗಿ ಇದು 12 MP ಯ ಎರಡು AI ಕ್ಯಾಮೆರಾ ಜೊತೆಗೆ ಹಿಂಬದಿಯಲ್ಲಿ ಡ್ಯುಯಲ್‌ ಫ್ಲಾಶ್‌ಲೈಟ್‌ ಅನ್ನು ಹೊಂದಿದೆ. ಸೆಲ್ಫೀಗಾಗಿ 5MP ಯ ಮುಂಭಾಗದ ಕ್ಯಾಮೆರಾ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ :
ಟೆಕ್ನೊ ಪಾಪ್‌ 7 ಪ್ರೋ ಎರಡು ಆವೃತ್ತಿಗಳಲ್ಲಿ ಬಿಡುಗಡೆಯಾಗಿದೆ. ಮೊದಲನೆಯದು 4 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್‌ ಆವೃತ್ತಿಯ ಫೋನ್‌ನ ಬೆಲೆ 6,799 ರೂ. ಗಳು. ಎರಡನೆಯದು 6 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್‌ ಆವೃತ್ತಿಯ ಫೋನ್‌ನ ಬೆಲೆ 7,299 ರೂ.ಗಳು. ಬಜೆಟ್‌ ಬೆಲೆಯ ಈ ಸ್ಮಾರ್ಟ್‌ ಎರಡು ಬಣ್ಣಗಳ ಆಯ್ಕೆಯಲ್ಲಿ ಯುಯುನು ಬ್ಲೂ ಮತ್ತು ಎಂಡ್‌ಲೆಸ್‌ ಬ್ಲಾಕ್‌ ಲಭ್ಯವಿರುತ್ತದೆ. ಈ ಫೋನ್‌ ಅನ್ನು ಫೆಬ್ರವರಿ 22, 2023 ಯಿಂದ ಅಮೆಜಾನ್‌ನಲ್ಲಿ ಖರೀದಿಸಬಹುದಾಗಿದೆ.

ಟೆಕ್ನೊ ಪಾಪ್‌ 7 ಪ್ರೋ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು:
ಟೆಕ್ನೊ ಬಿಡುಗಡೆ ಮಾಡಿರುವ ಪಾಪ್‌ 7 ಪ್ರೋ ಸ್ಮಾರ್ಟ್‌ಫೋನ್‌ ನ್ಯಾನೋ 4G SIM ಅನ್ನು ಬೆಂಬಲಿಸುತ್ತದೆ. ಇದರಲ್ಲಿ ಡ್ಯೂಯಲ್‌ SIM ಅಳವಡಿಸಬಹುದಾಗಿದೆ. ಇದು HiOS 11.0 ಆಧಾರಿತ ಆಂಡ್ರಾಯ್ಡ್‌ 12 ನಲ್ಲಿ ಕಾರ್ಯನಿರ್ವಹಿಸಲಿದೆ. 6.56 ಇಂಚಿನ HD+IPS ಡಿಸ್ಪ್ಲೇ ಹೊಂದಿದೆ. ಇದರ ರಿಫ್ರೆಶ್‌ ದರವು 120 HZ ಆಗಿದ್ದು 20:9 ಅನುಪಾತದಲ್ಲಿ ಬರಲಿದೆ.

ಬಜೆಟ್‌ ಫ್ರೆಂಡ್ಲೀ ಸ್ಮಾರ್ಟ್‌ಫೋನ್‌ ಕ್ವಾಡ್ ಕೋರ್‌ ಮೀಡಿಯಾಟೆಕ್ ಹೀಲಿಯೊ A22 ಪ್ರೊಸೆಸ್ಸರ್‌ನಿಂದ ವೇಗ ಪಡೆದುಕೋಳ್ಳಲಿದೆ. ಇದು ಎರಡು ರೀತಿಯ ಕಾನ್ಫಿಗರೇಷನ್‌ನಲ್ಲಿ ದೊರೆಯಲಿದೆ. 4 ಜಿಬಿ RAM ಮತ್ತು 64 ಜಿಬಿ ಆಂತರಿಕ ಸಂಗ್ರಹಣೆ ಮತ್ತು 6 ಜಿಬಿ RAM ಮತ್ತು 64 ಜಿಬಿ ಆಂತರಿಕ ಸಂಗ್ರಹಣೆ ಹೊಂದಿದೆ. ಈ ಹ್ಯಾಂಡ್‌ಸೆಟ್‌ ಅನ್ನು 256 ಜಿಬಿಗಳ ವರೆಗೆ ಶೇಖರಣೆಯನ್ನು ವಿಸ್ತರಿಸಬಹುದಾಗಿದೆ.

ಇನ್ನು ಕ್ಯಾಮೆರಾದ ವಿಷಯದಲ್ಲಿ ಇದು ಹಿಂಬದಿಯಲ್ಲಿ 12 MP ಡ್ಯುಯಲ್‌ AI ಕ್ಯಾಮೆರಾ ಸೆಟ್ಅಪ್‌ ಪಡೆದುಕೊಂಡಿದೆ. ಜೊತೆಗೆ ಡ್ಯುಯಲ್‌ ಫ್ಲಾಷ್‌ ಲೈಟ್‌ ಹೊಂದಿದೆ. ಮುಂಭಾಗದಲ್ಲಿ ಸೆಲ್ಫೀ ಮತ್ತು ವೀಡಿಯೋ ಕರೆಗಳಿಗಾಗಿ ಡ್ಯುಯಲ್‌ ಮೈಕ್ರೋ ಸ್ಲಿಟ್‌ ಫ್ಲಾಷ್‌ ಲೈಟ್‌ ಇರುವ 5 MP AI ಕ್ಯಾಮೆರಾ ಪಡೆದುಕೊಂಡಿದೆ. ಈ ಹ್ಯಾಂಡ್‌ಸೆಟ್‌ 5000 mAh ಕ್ಷಮತೆಯ ಲಿ–ಪಾಲಿಮರ್‌ ಆಯಾನ್‌ ಬ್ಯಾಟರಿ ಸೆಟೆಪ್‌ನಿಂದ ಪ್ಯಾಕ್‌ ಆಗಿದೆ. ಇದರ ಚಾರ್ಜಿಂಗ್‌ ಕ್ಷಮತೆಯು 10 W ಆಗಿದೆ. ಇದು ಚಾರ್ಜಿಂಗ್‌ಗಾಗಿ ಟೈಪ್‌ –ಸಿ ಚಾರ್ಜರ್‌ ಅವಲಂಬಿಸಿದೆ.

ಸಂಪರ್ಕದ ವಿಷಯದಲ್ಲಿ, ಈ ಹ್ಯಾಂಡ್‌ಸೆಟ್‌ ವೈಫೈ ಮತ್ತು ಬ್ಲೂಟೂತ್ 5.0 ಬೆಂಬಲಿಸಲಿದೆ. ಇದು ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್, ಪ್ರಾಕ್ಸಿಮಿಟಿ ಮತ್ತು ಇ-ಕಂಪಾಸ್‌ ಸೆನ್ಸಾರ್‌ಗಳನ್ನು ಹೊಂದಿದೆ.

ಇದನ್ನೂ ಓದಿ : Lost Pan Card : ನಿಮ್ಮ ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದೀರಾ? ಮರು ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ ?

ಇದನ್ನೂ ಓದಿ : ನಿಮಗೆ ಗೊತ್ತೇ: ಮಾನವ ಮೂತ್ರದಿಂದಲೂ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡಬಹುದು

(Budget Friendly Smartphone Tecno Pop 7 Pro launched in India. Know the price, availability, and specifications)

Comments are closed.