ವ್ಯಾಲಂಟೈನ್ಸ್‌ ಡೇಗೆ ಫೋನ್ ಗಿಫ್ಟ್‌ ಮಾಡೋ ಪ್ಲಾನ್‌ ಇದ್ರೆ, ನಂಥಿಂಗ್‌ನ ಸಬ್‌ ಬ್ರಾಂಡ್‌ CMF ಫೋನ್ 2 ಪ್ರೊ ಖರೀದಿಸಿ

Flipkart Valentines Day Sale: ಜನಪ್ರಿಯ ಆನ್‌ಲೈನ್‌ ಶಾಪಿಂಗ್‌ ವೇದಿಕೆ ಫ್ಲಿಪ್‌ಕಾರ್ಟ್‌ನಲ್ಲೀಗ ವ್ಯಾಲೆಂಟೈನ್ಸ್‌ ಸೇಲ್‌ ಪ್ರಾರಂಭವಾಗಿದೆ. ಈ ಸೇಲ್‌ನಲ್ಲಿ ಅನೇಕ ಉತ್ಪನ್ನಗಳಿಗೆ ಭಾರಿ ರಿಯಾಯಿತಿಯನ್ನು ಫ್ಲಿಪ್‌ಕಾರ್ಟ್‌ ಘೋಷಿಸಿದೆ.

ಅವುಗಳಲ್ಲಿ ಸ್ಮಾರ್ಟ್‌ಪೋನ್‌ಗಳ ಮೇಲೂ ಉತ್ತಮ ರಿಯಾಯಿತಿ ನೀಡಲಾಗುತ್ತಿದೆ. ಹೊಸ ಫೋನ್‌ ಖರೀದಿಸುವ ಅಥವಾ ವ್ಯಾಲೆಂಟೈನ್ಸ್‌ ಡೇಗೆ ಗಿಫ್ಟ್‌ ಕೊಡುವ ಯೋಚನೆ ಇದ್ದರೆ CMF ಫೋನ್‌ 2 ಪ್ರೋ ಮೇಲೆ ಅತ್ಯುತ್ತಮ ಡೀಲ್‌ಗಳನ್ನು ಫ್ಲಿಪ್‌ಕಾರ್ಟ್‌ ನೀಡುತ್ತಿದೆ.

ಭಾರತದಲ್ಲಿ 18,999 ರೂ. ಆರಂಭಿಕ ಬೆಲೆಯಲ್ಲಿ ಈ ಫೋನ್‌ ಅನ್ನು ಬಿಡುಗಡೆ ಮಾಡಲಾಗಿತ್ತು. ನಂಥಿಂಗ್‌ನ ಸಬ್‌–ಬ್ರಾಂಡ್‌ ಫೋನ್‌ ಆದ CMF ಅನ್ನು ಕೇವಲ 16,624 ರೂ. ಗಳಲ್ಲಿ ಖರೀದಿಸಬಹುದಾಗಿದೆ.

ಇದರ ಜೊತೆಗೆ ಮತ್ತಷ್ಟು ರಿಯಾಯಿತಿಗಳನ್ನು ಸಹ ಘೋಷಿಸಲಾಗಿದೆ. ಅದೇನು ಎಂದು ತಿಳಿಯೋಣ.

CMF ಫೋನ್ 2 ಪ್ರೊ ಫೋನ್‌ನ ವ್ಯಾಲೆಂಟೈನ್ಸ್ ಡೀಲ್

CMF ಫೋನ್ 2 ಪ್ರೊ ಸ್ಮಾರ್ಟ್‌ಫೋನ್ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿತ್ತು. 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮೂಲ ರೂಪಾಂತರವನ್ನು 18,999 ರೂ. ಗೆ ಲಾಂಚ್‌ ಮಾಡಲಾಗಿತ್ತು.

ಈಗ ವ್ಯಾಲಂಟೈನ್ಸ್‌ ಡೇ ಮಾರಾಟದ ಸಮಯದಲ್ಲಿ, ಇದನ್ನು 17,999 ರೂ. ಗೆ ಪಟ್ಟಿ ಮಾಡಲಾಗಿದೆ. ಅಂದರೆ 1,000 ರೂ. ಗಳ ನೇರ ರಿಯಾಯಿತಿ ನೀಡಲಾಗಿದೆ.

ಜೊತೆಗೆ ಈ ಫೋನ್ ಖರೀದಿಯ ಮೇಲೆ ಬ್ಯಾಂಕ್ ರಿಯಾಯಿತಿಗಳನ್ನು ಸಹ ನೀಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಮತ್ತು ಎಸ್‌ಬಿಐ ಫ್ಲಿಪ್‌ಕಾರ್ಟ್ ಕ್ರೆಡಿಟ್ ಕಾರ್ಡ್‌ನಿಂದ ಖರೀದಿಸುವವರಿಗೆ 1,375 ರೂ. ರಿಯಾಯಿತಿಯನ್ನು ನೀಡುತ್ತಿದೆ.

ಹೆಚ್ಚುವರಿಯಾಗಿ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಡೆಬಿಟ್ ಕಾರ್ಡ್‌ಗಳೊಂದಿಗೆ 1,250 ರೂ. ರಿಯಾಯಿತಿಯೂ ಲಭ್ಯವಿದೆ. ಯುಪಿಐ ಪಾವತಿಗಳೊಂದಿಗೆ 530 ರೂ. ರಿಯಾಯಿತಿ ಲಭ್ಯವಿದೆ.

ಇದನ್ನೂ ಓದಿ: ಎಚ್ಚರಿಕೆ: ನಿಮ್ಮ ಫೋನ್ ನೆಟ್‌ವರ್ಕ್ 5G ಯಿಂದ 2G ಗೆ ಬದಲಾಗುತ್ತಾ? ತಕ್ಷಣ ಹೀಗೆ ಮಾಡಿ

CMF ಫೋನ್ 2 ಪ್ರೊ ವೈಶಿಷ್ಟ್ಯ

CMF ಫೋನ್ 2 ಪ್ರೊ 6.67-ಇಂಚಿನ ಫ್ಲೆಕ್ಸಿಬಲ್ AMOLED ಡಿಸ್ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ದರ ಮತ್ತು 3,000 nits ವರೆಗಿನ ಗರಿಷ್ಠ ಹೊಳಪನ್ನು ಹೊಂದಿದೆ.

CMF ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊ ಚಿಪ್‌ಸೆಟ್‌ನಿಂದ ಚಲಿಸುತ್ತದೆ.

ಈ ಫೋನ್ 5,000mAh ಬ್ಯಾಟರಿಯಿಂದ ಸಹಾಯದಿಂದ ಚಲಿಸುತ್ತದೆ ಮತ್ತು 33W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

CMF ಫೋನ್ 2 ಪ್ರೊ ಫೋನ್ ಆಂಡ್ರಾಯ್ಡ್ 15 ಆಧಾರಿತ ಕಂಪನಿಯ ನಥಿಂಗ್ ಓಎಸ್ 3.0 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇನ್ನು ಈ ಫೋನ್‌ನ ಕ್ಯಾಮೆರಾದ ಬಗ್ಗೆ ಹೇಳುವುದಾದರೆ ಇದರ ಹಿಂಬದಿಯ ಕ್ಯಾಮೆರಾವು 50 MP (ಮುಖ್ಯ), ಟೆಲಿಫೋಟೋ ಮತ್ತು ಅಲ್ಟ್ರಾ-ವೈಡ್ ಲೆನ್ಸ್, f/2.2, 20x ಡಿಜಿಟಲ್ ಜೂಮ್ ಹೊಂದಿದೆ.

ಹಾಗೆಯೇ ಇದರ ಮುಂಭಾಗದ ಕ್ಯಾಮೆರಾವು 16 ಎಂಪಿ (ಎಫ್/2.2) ಹೊಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಫೋನ್‌ ಡ್ಯುಯಲ್‌ ಸಿಮ್‌ ಬೆಂಬಲಿಸುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories