Google I/O 2026 : ಆಂಡ್ರಾಯ್ಡ್ 17 ಮತ್ತು ಜೆಮಿನಿ AI ಕ್ರಾಂತಿ ! ಪಿಕ್ಸೆಲ್ 11 ಏನಿದು ಹೊಸ ಫೀಚರ್ಸ್
ಗೂಗಲ್ ತನ್ನ ವಾರ್ಷಿಕ ಸಂಭ್ರಮ 'Google I/O 2026' ಕಾರ್ಯಕ್ರಮಕ್ಕೆ ದಿನಗಣನೆ ಆರಂಭಿಸಿದೆ. ಮೇ 19 ಮತ್ತು 20 ರಂದು ಕ್ಯಾಲಿಫೋರ್ನಿಯಾದ ಶೋರ್‌ಲೈನ್ ಆಂಫಿಥಿಯೇಟರ್‌ನಲ್ಲಿ ಈ ಅದ್ಧೂರಿ ಇವೆಂಟ್ ನಡೆಯಲಿದ್ದು, ಈ ಬಾರಿ ಸಾಫ್ಟ್‌ವೇರ್ ಅಪ್‌ಡೇಟ್‌ಗಳ ಜೊತೆಗೆ ಕೃತಕ ಬುದ್ಧಿಮತ್ತೆ (AI) ಮತ್ತು ಭವಿಷ್ಯದ ಸ್ಮಾರ್ಟ್‌ಫೋನ್ ಹೊಸ ಲೋಕವನ್ನೇ ಸೃಷ್ಟಿಸಲಿದೆ.

Google I/O 2026 : ತಂತ್ರಜ್ಞಾನ ಲೋಕದ ದೈತ್ಯ ಗೂಗಲ್ ತನ್ನ ವಾರ್ಷಿಕ ಸಂಭ್ರಮ ‘Google I/O 2026’ ಕಾರ್ಯಕ್ರಮಕ್ಕೆ ದಿನಗಣನೆ ಆರಂಭಿಸಿದೆ. ಮೇ 19 ಮತ್ತು 20 ರಂದು ಕ್ಯಾಲಿಫೋರ್ನಿಯಾದ ಶೋರ್‌ಲೈನ್ ಆಂಫಿಥಿಯೇಟರ್‌ನಲ್ಲಿ ಈ ಅದ್ಧೂರಿ ಇವೆಂಟ್ ನಡೆಯಲಿದ್ದು, ಈ ಬಾರಿ ಸಾಫ್ಟ್‌ವೇರ್ ಅಪ್‌ಡೇಟ್‌ಗಳ ಜೊತೆಗೆ ಕೃತಕ ಬುದ್ಧಿಮತ್ತೆ (AI) ಮತ್ತು ಭವಿಷ್ಯದ ಸ್ಮಾರ್ಟ್‌ಫೋನ್ ಹೊಸ ಲೋಕವನ್ನೇ ಸೃಷ್ಟಿಸಲಿದೆ.
ಆಂಡ್ರಾಯ್ಡ್ 17: ‘ಸಿನಮನ್ ಬಿನ್’ ಅಬ್ಬರ
ಗೂಗಲ್ ವಾರ್ಷಿಕೋತ್ಸವದ ಈ ಬಾರಿಯ ವಿಶೇಷ ಆಕರ್ಷಣೆಯೇ ಆಂಡ್ರಾಯ್ಡ್ 17 (Cinnamon Bin) ಬಳಕೆದಾರರಿಗೆ ಇದು ವಿಶೇಷ ಅನುಭವವನ್ನು ನೀಡಲಿದೆ. ಅಷ್ಟಕ್ಕೂ ಇದರ ಆಂಡ್ರಾಯ್ಡ್ 17 ಒಳಗೊಂಡಿರುವ ಫೀಚರ್ಸ್‌ಗಳು ಯಾವುವು ಎಂದು ನೋಡೋದಾದ್ರೆ.
- ಸುಧಾರಿತ ಡೆಸ್ಕ್‌ಟಾಪ್ ಮೋಡ್: ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಕಂಪ್ಯೂಟರ್‌ನಂತೆ ಬಳಸಲು ಅನುಕೂಲವಾಗುವಂತೆ ಗೂಗಲ್ ಹೊಸ ಓಎಸ್ ಅನ್ನು ವಿನ್ಯಾಸಗೊಳಿಸಿದೆ.
- ಲಾಕ್ ಸ್ಕ್ರೀನ್ ವಿಜೆಟ್‌ಗಳು: ಹಲವು ವರ್ಷಗಳ ಬಳಿಕ ಆಂಡ್ರಾಯ್ಡ್ ಫೋನ್‌ಗಳ ಲಾಕ್ ಸ್ಕ್ರೀನ್‌ನಲ್ಲಿಯೇ ನೇರವಾಗಿ ವಿಜೆಟ್‌ಗಳನ್ನು ಆಕ್ಸೆಸ್ ಮಾಡುವ ಫೀಚರ್ ಮರಳಿ ಸಿಗಲಿದೆ.
- ಮಲ್ಟಿಟಾಸ್ಕಿಂಗ್ ಬಬಲ್ಸ್: ಯಾವುದೇ ಆ್ಯಪ್ ಅನ್ನು ಸಣ್ಣ ‘ಫ್ಲೋಟಿಂಗ್ ವಿಂಡೋ’ದಲ್ಲಿ ಬಳಸಲು ಅನುವು ಮಾಡಿಕೊಡುವ ‘Bubbles’ ಫೀಚರ್ ಈಗ ಟ್ಯಾಬ್ಲೆಟ್ ಮಾತ್ರವಲ್ಲದೆ ಸ್ಮಾರ್ಟ್‌ಫೋನ್‌ಗಳಿಗೂ ಲಭ್ಯವಾಗಲಿದೆ.
- ಎನ್ಹಾನ್ಸ್ಡ್ ಸೆಕ್ಯುರಿಟಿ: ಫೋನ್ ಕಳುವಾದರೂ ಡೇಟಾ ಸುರಕ್ಷಿತವಾಗಿರಲು ‘Enhanced Factory Reset Protection’ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ.
ಜೆಮಿನಿ AI: ಈಗ ಎಲ್ಲದರಲ್ಲೂ ಕೃತಕ ಬುದ್ಧಿಮತ್ತೆ
ಗೂಗಲ್‌ನ ಜೆಮಿನಿ (Gemini) AI ಈಗ ಕೇವಲ ಚಾಟ್‌ಬಾಟ್ ಆಗಿ ಉಳಿದಿಲ್ಲ. ಈ ಬಾರಿಯ ಇವೆಂಟ್‌ನಲ್ಲಿ ಜೆಮಿನಿಯ ಹೊಸ ಅವತಾರಗಳು ಅನಾವರಣಗೊಳ್ಳಲಿವೆ:
- AI ಎಂಟರ್‌ಪ್ರೈಸ್ ಏಜೆಂಟ್: ವ್ಯವಹಾರಗಳಿಗೆ ನೆರವಾಗಲು ಸ್ವತಂತ್ರವಾಗಿ ಕೆಲಸ ಮಾಡುವ ಸಾಮರ್ಥ್ಯವಿರುವ AI ಏಜೆಂಟ್‌ಗಳನ್ನು ಗೂಗಲ್ ಲಾಂಚ್ ಮಾಡಲಿದೆ.
- ಇಂಟರಾಕ್ಟಿವ್ ಸಿಮ್ಯುಲೇಶನ್: ನೀವು ಕೇಳುವ ಪ್ರಶ್ನೆಗಳಿಗೆ ಜೆಮಿನಿ ಕೇವಲ ಪಠ್ಯದ ಮೂಲಕವಲ್ಲದೆ, ಚಿತ್ರಾತ್ಮಕ ಮತ್ತು ಸಂವಾದಾತ್ಮಕ ಸಿಮ್ಯುಲೇಶನ್‌ಗಳ ಮೂಲಕ ಉತ್ತರ ನೀಡಲಿದೆ.
- Assistant Volume Slider: ಆಂಡ್ರಾಯ್ಡ್‌ನಲ್ಲಿ ಜೆಮಿನಿ ಧ್ವನಿಯನ್ನು ಪ್ರತ್ಯೇಕವಾಗಿ ನಿಯಂತ್ರಿಸಲು ವಿಶೇಷ ವಾಲ್ಯೂಮ್ ಕಂಟ್ರೋಲ್ ಫೀಚರ್ ಬರಲಿದೆ.
ಪಿಕ್ಸೆಲ್ 11 ಸರಣಿ: ಹೇಗಿರಲಿದೆ ಹೊಸ ಫೋನ್?
ಪಿಕ್ಸೆಲ್ 11 ಸರಣಿಯು ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದ್ದರೂ, ಗೂಗಲ್ ಐ/ಒ ಕಾರ್ಯಕ್ರಮದಲ್ಲಿ ಇದರ ಮೊದಲ ಸುಳಿವು ಸಿಗುವ ಸಾಧ್ಯತೆಯಿದೆ :
- ಟೆನ್ಸರ್ G6 ಚಿಪ್: ಗೂಗಲ್‌ನ ಸ್ವಂತ ತಯಾರಿಕೆಯ ಟೆನ್ಸರ್ G6 ಪ್ರೊಸೆಸರ್ ಫೋನ್‌ನ ವೇಗವನ್ನು ಹೆಚ್ಚಿಸುವುದಲ್ಲದೆ ಬ್ಯಾಟರಿ ಉಳಿತಾಯಕ್ಕೆ ಸಹಕಾರಿಯಾಗಲಿದೆ.
- ಪಿಕ್ಸೆಲ್ ಗ್ಲೋ (Pixel Glow): ಹಿಂಭಾಗದಲ್ಲಿ ನೋಟಿಫಿಕೇಶನ್‌ಗಳಿಗಾಗಿ ವಿಶೇಷ ಲೈಟಿಂಗ್ ಫೀಚರ್ ಇರಲಿದ್ದು, ಇದು ಫೋನ್‌ಗೆ ಪ್ರೀಮಿಯಂ ಲುಕ್ ನೀಡಲಿದೆ.
- ಅಂಡರ್-ಡಿಸ್‌ಪ್ಲೇ ಫೇಸ್ ಅನ್‌ಲಾಕ್: ಡಿಸ್‌ಪ್ಲೇ ಒಳಗಿನ ಕ್ಯಾಮೆರಾ ಬಳಸಿ ಹೆಚ್ಚು ಸುರಕ್ಷಿತ ಮತ್ತು ವೇಗದ ಫೇಸ್ ಅನ್‌ಲಾಕ್ ತಂತ್ರಜ್ಞಾನ ಮರಳಿ ಬರಲಿದೆ.
ಮೇ 19ರ ರಾತ್ರಿ 11:30ಕ್ಕೆ (IST) ನಡೆಯುವ ಗೂಗಲ್ ಕೀನೋಟ್ ಮೇಲೆ ಇಡೀ ವಿಶ್ವದ ಕಣ್ಣಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಗೂಗಲ್ ನೀಡುತ್ತಿರುವ ಈ ಕೊಡುಗೆಗಳು ಆಪಲ್ ಮತ್ತು ಮೈಕ್ರೋಸಾಫ್ಟ್ ನಡುವಿನ ಪೈಪೋಟಿಯನ್ನು ಮತ್ತಷ್ಟು ಹೆಚ್ಚಿಸಲಿವೆ.
google io 2026 android 17 gemini ai pixel 11 kannada News



