ಜಿಮೇಲ್‌ ಫುಲ್‌ ಆಗಿದ್ದಕ್ಕೆ ಚಿಂತಿಸುವ ಅವಶ್ಯಕತೆಯಿಲ್ಲ: ಈ ಸಲಹೆ ಪಾಲಿಸಿದ್ರೆ ನಿಮ್ಮ ಸ್ಪೇಸ್‌ ನಿಮಗೆ ಸಿಗುತ್ತದೆ

Gmail Space Manage Tips: ಜಿಮೇಲ್‌ ಬಳಸುವ ಪ್ರತಿಯೊಬ್ಬರಿಗೂ ಇದೊಂದು ದೊಡ್ಡ ಕಿರಿಕಿರಿ. ಅದೇನೆಂದರೆ ಆಗಾಗ ಬರುವ ‘ಜಿಮೇಲ್‌ ಫುಲ್‌’ ಎನ್ನುವ ಮೆಸ್ಸೇಜ್. ಒಮ್ಮೊಮ್ಮೆ ಇದು ಎಲ್ಲಿಲ್ಲದ […]

gmail space manage tips

Gmail Space Manage Tips: ಜಿಮೇಲ್‌ ಬಳಸುವ ಪ್ರತಿಯೊಬ್ಬರಿಗೂ ಇದೊಂದು ದೊಡ್ಡ ಕಿರಿಕಿರಿ. ಅದೇನೆಂದರೆ ಆಗಾಗ ಬರುವ ‘ಜಿಮೇಲ್‌ ಫುಲ್‌’ ಎನ್ನುವ ಮೆಸ್ಸೇಜ್. ಒಮ್ಮೊಮ್ಮೆ ಇದು ಎಲ್ಲಿಲ್ಲದ ಸಮಸ್ಯೆಯಾಗಿಬಿಡುತ್ತದೆ.

ಯಾವುದೋ ಅತಿ ಮುಖ್ಯ ಕೆಲಸವಿರುವಾಗ ಬರುವ ಈ ರೀತಿಯ ಮೆಸ್ಸೇಜ್‌ಗಳು ಕೆಲಸವನ್ನು ಅರ್ಧಕ್ಕೆ ಕೈಬಿಡುವಂತೆ ಮಾಡುತ್ತದೆ. ಯಾವುದೇ ಮೇಲ್ ಕಳುಹಿಸಲೂ ಆಗದೇ, ಸ್ವೀಕರಿಸಲೂ ಆಗದೇ ಕೆಲಸ ಸ್ಥಗಿತವಾಗುತ್ತದೆ. ಇದಕ್ಕೆ ಪರಿಹಾರವಾಗಿ ಜಿಮೇಲ್‌ ದುಡ್ಡು ತೆತ್ತಿ ಸಂಗ್ರಹಣೆ ಹೆಚ್ಚಿಸಿಕೊಳ್ಳುವ ಸಲಹೆ ನೀಡುತ್ತದೆ.

ಆದರೆ ನಿಮಗೆ ಅದರ ಅವಶ್ಯಕತೆ ಎಷ್ಟಿದೆ ಅನ್ನುವುದರ ಮೇಲೆ ಸಂಗ್ರಹಣೆ ಹೆಚ್ಚಿಸಿಕೊಳ್ಳುವುದೋ ಅಥವಾ ಬೇಡವೋ ಎಂಬುದು ನಿರ್ಧಾರವಾಗುತ್ತದೆ.

ನಿಮಗೆ ಹೆಚ್ಚಿನ ಸಂಗ್ರಹಣೆ ಅವಶ್ಯಕತೆ ಇಲ್ಲವೆಂದಾದರೆ ನಿಮಗೆ ಬೇಡದ ಫೈಲ್‌ಗಳನ್ನು ಹುಡುಕಿ, ಡಿಲೀಟ್ ಮಾಡಿ ಫ್ರೀ ಸ್ಪೇಸ್‌ ಮರುಸ್ಥಾಪಿಸಿಕೊಳ್ಳಬಹುದು.

ನಿಮ್ಮ ಗೂಗಲ್‌ ಅಕೌಂಟ್‌ನಲ್ಲಿ ತುಂಬಿತುಳುಕುತ್ತಿರುವ ರಾಶಿ ರಾಶಿ ಜಂಕ್‌ ಫೈಲ್‌ಗಳನ್ನು ಸುಲಭವಾಗಿ ಡಿಲೀಟ್‌ ಮಾಡಲು ಇಲ್ಲಿ ಕೆಲವು ಟಿಪ್ಸ್ ಗಳಿವೆ. ಅವುಗಳನ್ನು ಪಾಲಿಸಿ ನಿಮ್ಮ ಸಂಗ್ರಹಣೆಯನ್ನು ಮರು ಸ್ಥಾಪಿಸಿಕೊಳ್ಳಬಹುದು.

ಅನ್‌ರೀಡ್‌ ಇಮೇಲ್‌ಗಳನ್ನು ಡಿಲೀಟ್‌ ಮಾಡಿ

ಅನ್‌ರೀಡ್‌ ಇಮೇಲ್‌ಗಳಿಂದ ಜಿಮೇಲ್ ಬಹಳ ಬೇಗ ತುಂಬಿಹೋಗುತ್ತದೆ. ನೀವು ಯಾವುದೇ ವೆಬ್‌ಸೈಟ್‌ಗೆ ಭೇಟಿ ನೀಡಿದ್ದರೆ ಅವರು ನಿಮಗೆ ಪದೇ ಪದೇ ಮೆಸ್ಸೇಜ್‌ ಕುಳುಹಿಸುತ್ತಲೇ ಇರುತ್ತಾರೆ.

ಅಂತಹ ಮೆಸ್ಸೇಜ್‌ಗಳನ್ನು ಹುಡುಕಿ ಡಿಲೀಟ್ ಮಾಡಿದರೆ ನಿಮಗೆ ನಿಮ್ಮ ಫ್ರೀಸ್ಪೇಸ್‌ ವಾಪಸ್ಸು ಸಿಗುತ್ತದೆ. ಸರ್ಚ್‌ ಬಾರ್‌ನಲ್ಲಿ ಇಸ್‌ ಅನ್‌ರೀಡ್‌ ಎಂದು ಟೈಪಿಸಿ ಸುಲಭವಾಗಿ ಡಿಲೀಟ್‌ ಮಾಡಬಹುದು.

ಹಳೆಯ ಇಮೇಲ್‌ ಡಿಲೀಟ್‌ ಮಾಡಿ

ಅತ್ಯಂತ ಹಳೆಯ, ನಿಮಗೆ ಬೇಡದ ಮೇಲ್‌ಗಳನ್ನು ಡಿಲೀಟ್‌ ಮಾಡುವುದರಿಂದಲೂ ನಿಮಗೆ ಸ್ಪೇಸ್‌ ಸಿಗುತ್ತದೆ. ಸರ್ಚ್‌ ಬಾರ್‌ನಲ್ಲಿ ಬಿಫೋರ್‌ ಮುಂದೆ ವರ್ಷ ಟೈಪಿಸಿ ಹಳೆಯ ಮೇಲ್‌ ಪಡೆದುಕೊಂಡು ಅದನ್ನು ಸುಲಭವಾಗಿ ಡಿಲೀಟ್‌ ಮಾಡಬಹುದು.

ಲಾರ್ಜ್‌ ಇಮೇಲ್‌ ಗಳನ್ನು ಡಿಲೀಟ್‌ ಮಾಡಿ

ಇವು ಅತಿ ಹಚ್ಚು ಸ್ಪೇಸ್‌ ತೆಗೆದುಕೊಳ್ಳುತ್ತವೆ. ಹಾಗಾಗಿ ಸರ್ಚ್‌ ಬಾರ್‌ನಲ್ಲಿ ‘has:attachment larger:15MB’ ಟೈಪಿಸಿ ಡಿಲೀಟ್‌ ಮಾಡಿ. ಇದರಿಂದ ಸಿಕ್ಕಾಪಟ್ಟೆ ಫ್ರೀ ಸ್ಪೇಸ್‌ ಸಿಗುತ್ತದೆ.

ಇದನ್ನೂ ಓದಿ: ಕನ್ನಡದಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್‌ ಮಾಡಿ; 5 ಭಾಷೆಗಳಿಗೆ ಅನುವಾದಿಸಿ!ಮೆಟಾ ಎಐನಿಂದ ಭರ್ಜರಿ ಅಪ್‌ಡೇಟ್!

ಗೂಗಲ್‌ ಫೋಟೋಗಳನ್ನು ಡಿಲೀಟ್‌ ಮಾಡಿ

ಇಮೇಲ್‌ಗಳಷ್ಟೇ ಅಲ್ಲದೇ, ಗೂಗಲ್‌ ಫೋಟೋಗಳು ಮತ್ತು ಡ್ರೈವ್ ಕೂಡ ನಿಮ್ಮ ಜಿಮೇಲ್‌ ಖಾತೆಯ ಸಂಗ್ರಹಣೆಯನ್ನೇ ಬಳಸಿಕೊಳ್ಳುತ್ತವೆ. ಅನಗತ್ಯ ಫೋಟೋ ಹಾಗೂ ವೀಡಿಯೊಗಳನ್ನು ಡಿಲೀಟ್‌ ಮಾಡುವುದರಿಂದಲೂ ಸಂಗ್ರಹಣೆಯನ್ನು ಮರುಸ್ಥಾಪಿಸಿಕೊಳ್ಳಬಹುದು.

ಗೂಗಲ್‌ ಡ್ರೈವ್‌ ಕ್ಲೀನ್‌ ಮಾಡಿ

ಗೂಗಲ್‌ ನಲ್ಲಿರುವ ಪಿಡಿಎಫ್, DOC ಫೈಲ್‌ಗಳು ಮತ್ತು APK ಗಳು ಸೇರಿದಂತೆ ಅನಗತ್ಯ ಮತ್ತು ಹಳೆಯದಾದ ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಪತ್ತೆ ಮಾಡಿ ಅದನ್ನು ಡಿಲೀಟ್‌ ಮಾಡಿ.

Scroll to Top