iPhone ಪ್ರಿಯರಿಗೆ ಗುಡ್ ನ್ಯೂಸ್! ಬಿಡುಗಡೆ ಸಜ್ಜಾದ ಐಫೋನ್ 17 ಸರಣಿ
iPhone 17 Series: ಬಹು ನಿರೀಕ್ಷಿತ ಐಫೋನ್ 17 ಸರಣಿ ಬಿಡುಗಡೆ ಸಜ್ಜಾಗಿದೆ. ಆಪಲ್, ಸೆಪ್ಟೆಂಬರ್ 9 ರಂದು ಏವ್–ಡ್ರಾಪಿಂಗ್ ಈವೆಂಟ್‌ನಲ್ಲಿ ಬಿಡುಗಡೆ ಮಾಡಲಿದೆ.
ಆಪಲ್ ಐಫೋನ್ 17 ಸರಣಿಯಲ್ಲಿ ಒಟ್ಟು 4 ಮಾದರಿಗಳನ್ನು ಪರಿಚಯಿಸುತ್ತಿದೆ. ಅವುಗಳು ಐಫೋನ್ 17, ಐಫೋನ್ 7 ಪ್ರೊ, ಪ್ರೀಮಿಯಂ ಐಫೋನ್ 17 ಪ್ರೊ ಮ್ಯಾಕ್ಸ್ ಮತ್ತು ಐಫೋನ್ 17 ಏರ್.
ಈ ಫೋನ್‌ಗಳನ್ನು ಖರೀದಿಸಬೇಕೆಂಬ ಯೋಚನೆಯಿದ್ದರೆ ಅವುಗಳ ಸಂಭಾವ್ಯ ಬೆಲೆಗಳನ್ನು ತಿಳಿದುಕೊಳ್ಳಿ. ಈಗಾಗಲೇ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ ಭಾರತ ಮತ್ತು ಯುಎಸ್‌ನಲ್ಲಿ ಇದರ ಬಲೆಗಳನ್ನು ಗಮನಾರ್ಹವಾಗಿ ಹೆಚ್ಚಿಸಲಾಗುತ್ತಿದೆ.
ಹಾಗಾಗಿ ಆಪಲ್ ಗ್ರಾಹಕರು ಈ ಫೋನ್ ಖರೀದಿಸಲು ದುಬಾರಿ ಬೆಲೆ ನೀಡಬೇಕಾಗಬಹುದು.
ಅಮೆರಿಕದಲ್ಲಿ ಐಫೋನ್ 17, ಐಫೋನ್ 17 ಏರ್, ಐಫೋನ್ 17 ಪ್ರೊ, ಐಫೋನ್ 17 ಪ್ರೊ ಮ್ಯಾಕ್ಸ್ ಬೆಲೆ
ಸೋರಿಕೆಯಾದ ಮಾಹಿತಿಯ ಪ್ರಕಾರ ಯುಎಸ್‌ನಲ್ಲಿ ಐಫೋನ್ ಮೂಲ ಮಾದರಿಯ ಬೆಲೆ ಸುಮಾರು 799 ಡಾಲರ್ (ಸುಮಾರು 70,000 ರೂ.)ನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.
ಆದರೆ ಅದೇ ಪ್ರೀಮಿಯಂ ಮಾದರಿಯ ಐಫೋನ್ 17 ಪ್ರೊ ಮ್ಯಾಕ್ಸ್ ಬೆಲೆ ಸುಮಾರು 1,200 ಡಾಲರ್ (ಸುಮಾರು 1,05,000 ರೂ.) ಆಗಿರಬಹುದೆಂದು ಅಂದಾಜಿಸಲಾಗಿದೆ. ಇದು ಈವರೆಗಿನ ಅತ್ಯಂತ ದುಬಾರಿ ಐಫೋನ್‌ಗಳಲ್ಲಿ ಒಂದಾಗಿದೆ.
ಐಫೋನ್ 17 ಏರ್ ಬೆಲೆ 900 ಡಾಲರ್ (ಸುಮಾರು 79,000 ರೂ.) ಮತ್ತು ಐಫೋನ್ 17 ಪ್ರೊ ಬೆಲೆ ಸುಮಾರು 1,000 ಡಾಲರ್ (ಸುಮಾರು 96,000ರೂ.) ಆಗಿರಬಹುದೆಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: WordCamp Bengaluru 2025: 2 ಸೆಷನ್ WordCamp ಬೆಂಗಳೂರು 2025 ಜನಮೆಚ್ಚುಗೆ
ಭಾರತದಲ್ಲಿ ಐಫೋನ್ 17, ಐಫೋನ್ 17 ಏರ್, ಐಫೋನ್ 17 ಪ್ರೊ, ಐಫೋನ್ 17 ಪ್ರೊ ಮ್ಯಾಕ್ಸ್‌ನ ನಿರೀಕ್ಷಿತ ಬೆಲೆ
ಭಾರತದಲ್ಲಿ ಐಫೋನ್ 17 ಬೆಲೆ ಬೇಸ್ ಮಾಡೆಲ್‌ಗೆ ಸುಮಾರು 79,990 ರೂ.ಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಐಫೋನ್ 17 ಏರ್ ಬೆಲೆ 99,990 ರೂ.ಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
ಆದರೆ ಐಫೋನ್ 17 ಪ್ರೊ ಬೆಲೆ 1,24,990 ರೂ. ಹಾಗೂ ಟಾಪ್-ಎಂಡ್ ಐಫೋನ್ 17 ಪ್ರೊ ಮ್ಯಾಕ್ಸ್ ಬೆಲೆ 1,59,000ರೂ. ಗಳಿಂದ 1,64,990 ರೂ. ಗಳ ಒಳಗೆ ಖರೀದಿಗೆ ಲಭ್ಯವಿರಬಹುದು ಎಂಬ ಮಾಹಿತಿಯಿದೆ. ಇದು ಆಪಲ್‌ನ ಅತ್ಯಂತ ದುಬಾರಿ ಐಫೋನ್ ಆಗಿರುವ ಎಲ್ಲ ಸಾಧ್ಯತೆಗಳಿವೆ.
iPhone 17 Series: ಐಫೋನ್ 17 ಸರಣಿಯ ವೈಶಿಷ್ಟ್ಯಗಳು
ಐಫೋನ್ 17
ಇದು ಐಫೋನ್ 17 ಸರಣಿಯ ಮೂಲ ಮಾದರಿಯ ಫೋನ್. ಈ ಬಾರಿ ಇದು ಹೊಸ ಚಿಪ್ A19 ಮತ್ತು iOS 26 ಕಾರ್ಯನಿರ್ವಹಿಸುತ್ತದೆ. 6.1 ಇಂಚಿನ OLED ಡಿಸ್ಪ್ಲೇ ಹೊಂದಿದ್ದು 120 Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ.
ಈ ಹೊಸ ಫೋನ್‌ನಲ್ಲಿ ವಿನ್ಯಾಸ ಮತ್ತು ಬಣ್ಣಗಳ ಆಯ್ಕೆ ಹೊಸದಾಗಿರುತ್ತದೆ. ಇನ್ನು ಕ್ಯಾಮೆರಾದ ಬಗ್ಗೆ ಹೇಳುವುದಾರೆ ಇದು 48 MPಪ್ರೈಮರಿ ಕ್ಯಾಮೆರಾ ಮತ್ತು 24 MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ.
ಇದನ್ನೂ ಓದಿ: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2025 ಯಾವಾಗ ಪ್ರಾರಂಭ? ಯಾವುದಕ್ಕಿದೆ ಭರ್ಜರಿ ಆಫರ್?
ಐಫೋನ್ 17 ಏರ್
ಈ ಬಾರಿ ಆಪಲ್ ಹೊಸ ಮಾದರಿಯ ಐಫೋನ್ 17 ಏರ್ ಅನ್ನು ಹೊರತರುತ್ತಿದೆ. ಇದು ಸುಮಾರು 5.5 ಮಿಮೀ ದಪ್ಪವಿರುವ ಅತ್ಯಂತ ತೆಳುವಾದ ಐಫೋನ್ ಆಗಿರುತ್ತದೆ ಎಂದು ಸೋರಿಕೆಯಾದ ಮಾಹಿತಿಗಳು ಹೇಳುತ್ತಿವೆ.
ಇದು 6.6-ಇಂಚಿನ OLED ಡಿಸ್ಟ್ರೇ, A19 ಚಿಪ್ ಮತ್ತು ಹಗುರವಾದ ಆದರೆ ಪ್ರೀಮಿಯಂ ವಿನ್ಯಾಸವನ್ನು ಹೊಂದಿರುತ್ತದೆ. ಇದು 48MP ಹಿಂಭಾಗದ ಕ್ಯಾಮೆರಾ ಮತ್ತು 24MP ಮುಂಭಾಗದ ಕ್ಯಾಮೆರಾದೊಂದಿಗೆ ಬರುತ್ತದೆ.
ಈ ಫೋನ್ ಅನ್ನು ವಿಶೇಷವಾಗಿ ಸ್ಟೈಲಿಶ್ ಮತ್ತು ಸ್ಲಿಮ್ ಫೋನ್‌ಗಳನ್ನು ಇಷ್ಟಪಡುವವರನ್ನು ಗುರಿಯಾಗಿರಿಸಿಕೊಂಡು ನಿರ್ಮಿಸಲಾಗಿದೆ.
ಐಫೋನ್ 17 ಪ್ರೊ
ಐಫೋನ್ 17 ಪ್ರೊನಲ್ಲಿ ಅತಿದೊಡ್ಡ ಅಪ್‌ಗ್ರೇಡ್ ಕಾಣಬಹುದಾಗಿದೆ. ಇದು A19 ಪ್ರೊ ಚಿಪ್ (3nm ತಂತ್ರಜ್ಞಾನ) ಮತ್ತು 12GB RAM ಅನ್ನು ಹೊಂದಿರುತ್ತದೆ.
6.3-ಇಂಚಿನ ಡಿಸ್ಪ್ಲೇ, ಪ್ರೊಮೋಷನ್ OLED ಡೈನಾಮಿಕ್ ಐಲ್ಯಾಂಡ್ ಮತ್ತು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದರಲ್ಲಿ ಕ್ಯಾಮೆರಾ ಟ್ರಿಪಲ್ ಸೆಟಪ್ ಅನ್ನು ಕಾಣಬಹುದಾಗಿದೆ.
ಇದು 48MP ಪ್ರೈಮರಿ, 48MP ಅಲ್ಮಾ-ವೈಡ್ ಮತ್ತು 48MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುತ್ತದೆ. ಇದರ ಬ್ಯಾಟರಿ ಬಾಳಿಕೆಯನ್ನು ಸಹ ಸುಧಾರಿಸಲಾಗಿದೆ.
ಈ ಫೋನ್ ವೃತ್ತಿಪರ ಬಳಕೆದಾರರು ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಫೋನ್ ಬಯಸುವ ಛಾಯಾಗ್ರಹಣ ಪ್ರಿಯರಿಗೆ ಹೆಚ್ಚು ಹೊಂದಿಕೆಯಾಗುತ್ತದೆ.
ಐಫೋನ್ 17 ಪ್ರೊ ಮ್ಯಾಕ್ಸ್
ಇದು ಈ ಸರಣಿಯಲ್ಲಿ ಅತ್ಯಂತ ಪ್ರೀಮಿಯಂ ಮಾದರಿಯ ಫೋನ್ ಆಗಲಿದೆ. ಇದು 6.9-ಇಂಚಿನ ಪ್ರೊಮೋಷನ್ OLED ಡಿಸ್ಸೇ, A19 ಪ್ರೊ ಚಿಪ್ ಮತ್ತು 12GB RAM ಅನ್ನು ಹೊಂದಿರುತ್ತದೆ.
ಇದರಲ್ಲಿ ಸುಧಾರಿತ ಕ್ಯಾಮೆರಾ ನೋಡಬಹುದಾಗಿದೆ. ಟ್ರಿಪಲ್ 48MP ಲೆನ್ಸ್ ಜೊತೆಗೆ, ಇದು ಪೆರಿಸ್ಕೋಪ್ ಜೂಮ್ ಲೆನ್ಸ್ ಅನ್ನು ಸಹ ಈ ಫೋನ್‌ನಲ್ಲಿದೆ. ಇದು 10x ಆಪ್ಟಿಕಲ್ ಜೂಮ್ ವರೆಗೆ ಬೆಂಬಲಿಸುತ್ತದೆ.
ಬ್ಯಾಟರಿ ಮತ್ತು ಕೂಲಿಂಗ್ ವ್ಯವಸ್ಥೆಯನ್ನು ಸಹ ಅಪ್‌ಗ್ರೇಡ್ ಮಾಡಲಾಗಿದೆ. ಐಫೋನ್ 17 ಪ್ರೊ ಮ್ಯಾಕ್ಸ್ ಅನ್ನು ಐಫೋನ್ ಪ್ರಿಯರ ಕನಸಿನ ಫೋನ್ ಎಂದು ಕರೆಯಬಹುದು.
ಇದನ್ನೂ ಓದಿ: ಮಾರುಕಟ್ಟೆಗೆ ಬಂದ ಮಿಡ್‌ರೇಂಜ್ ಫೋನ್: ರಿಯ 15ಟಿ 5ಜಿ ಫೋನ್ ಬೆಲೆ ಮತ್ತು ವೈಶಿಷ್ಟ್ಯ
(iPhone 17 Series Price in India leaked ahead of apple awe dropping event and Specifications)



