ಮಾರುಕಟ್ಟೆಗೆ ಬಂದ ಮಿಡ್‌ರೇಂಜ್‌ ಫೋನ್‌: ರಿಯಲ್ಮಿ 15ಟಿ 5ಜಿ ಫೋನ್‌ ಬೆಲೆ ಮತ್ತು ವೈಶಿಷ್ಟ್ಯ

Realme 15T 5G: ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ರಿಯಲ್ಮಿ ಮಿಡ್‌ರೇಂಜ್‌ನ ಹೊಸ ಫೋನ್‌ ಒಂದನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

ಬಿಡುಗಡೆಗೂ ಮುಂಚೆಯೇ ಕಂಪನಿಯು ಅದರಲ್ಲಿರುವ ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿತ್ತು. ಇದೀಗ ಸೆಪ್ಟೆಂಬರ್‌ 2 ರಂದು ರಿಯಲ್ಮಿ15ಟಿ 5ಜಿ ಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಈ ಫೋನ್‌ ಈಗಾಗಲೇ ಲಭ್ಯವಿರುವ ರಿಯಲ್ಮಿ 15 ಮತ್ತು ರಿಯಲ್ಮಿ 15 ಪ್ರೋ ಸರಣಿಯ ಭಾಗವಾಗಿದೆ. ಮಿಡ್‌ ರೇಂಜ್‌ನ ಫೋನ್‌ ಆದ ರಿಯಲ್ಮಿ 15ಟಿ 5ಜಿಯು ದೊಡ್ಡದಾದ ಬ್ಯಾಟರಿ, ಶಕ್ತಿಶಾಲಿ ಪ್ರೊಸೆಸರ್‌, ಆಂಡ್ರಾಯ್ಡ್‌ 15 ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿರುವ 25,000 ಕ್ಕಿಂತ ಕಡಿಮೆ ಬೆಲೆಯ ಒನ್‌ಪ್ಲಸ್‌ ನಾರ್ಡ್‌ CE 5, iQOO Neo 10R, ಮತ್ತು ಇನ್ಫಿನಿಕ್ಸ್‌ GT 30 ಪ್ರೋ ಗಳಿಗೆ ನೇರ ಸ್ಪರ್ಧೆ ನೀಡಲಿದೆ. ಈ ಫೋನ್‌ ಬಗ್ಗೆ ಕಂಪನಿ ಹೇಳಿಕೊಂಡಿರುವ ವೈಶಿಷ್ಟ್ಯ, ಬೆಲೆ ಮತ್ತು ಲಭ್ಯತೆಯನ್ನು ತಿಳಿಯೋಣ.

ಭಾರತದಲ್ಲಿ Realme 15T 5G ಬೆಲೆ

ರಿಯಲ್ಮಿ 15ಟಿ ಸ್ಮಾರ್ಟ್‌ಫೋನ್‌ ಬೆಲೆಯನ್ನು ಅದರ ಸ್ಟೋರೇಜ್‌ ರೂಪಾಂತರದ ಮೇಲೆ ನಿಗದಿಪಡಿಸಲಾಗಿದೆ. 8GB RAM/128GB ಸ್ಟೋರೇಜ್ ರೂಪಾಂತರಕ್ಕೆ 20,999 ರೂ.ಗಳು, 8GB RAM/256GB ಸ್ಟೋರೇಜ್ ರೂಪಾಂತರಕ್ಕೆ 22,999 ರೂ.ಗಳು ಮತ್ತು 12GB RAM/256GB ಸ್ಟೋರೇಜ್ ರೂಪಾಂತರಕ್ಕೆ 24,999 ರೂ.ಗಳಾಗಿವೆ.

ಸೆಪ್ಟೆಂಬರ್‌ 2 ರಿಂದಲೇ ಈ ಫೋನ್‌ನ ಪ್ರೀ ಬುಕಿಂಗ್‌ ಪ್ರಾರಂಭವಾಗಿದೆ. ಸೆಪ್ಟೆಂಬರ್‌ 6 ರಿಂದ ರಿಯಲ್ಮಿಯ ವೆಬ್‌ಸೈಟ್‌, ಫ್ಲಿಪ್‌ಕಾರ್ಟ್‌ ಮತ್ತು ಅಂಗಡಿಗಳಲ್ಲಿ ಖರೀದಿಸಬಹುದಾಗಿದೆ.

ಈ ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ ಬಿಡುಗಡೆಯ ಕೊಡುಗೆಗಗಳನ್ನು ನೀಡಲಾಗಿದೆ. ಅದೇನೆಂದರೆ 2000 ರೂಗಳಷ್ಟು ಬ್ಯಾಂಕ್‌ ಆಫರ್‌ ಅಥವಾ 4000 ರೂ.ಗಳ ವಿನಿಮಯ ಕೊಡುಗೆಗಳನ್ನು ನೀಡಲಾಗಿದೆ.

Realme 15T 5G ವೈಶಿಷ್ಟ್ಯ

ಮಿಡ್‌ರೇಂಜ್‌ನ ಫೋನ್‌ ಆಧ ರಿಯಲ್ಮಿ 15ಟಿ ಫೋನ್‌ ಆಕರ್ಷಕ ವೈಶಿಷ್ಟ್ಯಗಳಿಂದ ಮಾರುಕಟ್ಟೆಗೆ ಕಾಲಿಟ್ಟಿದೆ. ಇದರ 6.57 ಇಂಚಿನ ಪೂರ್ಣ ಪ್ರಮಾಣದ HD+ 120Hz OLED ಡಿಸ್ಪ್ಲೇಯನ್ನು ಹೊಂದಿದೆ.

ಇದರ 4,000 nits ಗರಿಷ್ಠ ಹೊಳಪು ಮತ್ತು 2160Hz PWM ಪರಿಣಾಮಕಾರಿಯಾಗಿ ಬೆಳಕನ್ನು ನಿಯಂತ್ರಿಸುತ್ತದೆ. ಈ ಫೋನ್‌ನ IP68 + IP69 ನೀರು ಮತ್ತು ಧೂಳು ನಿರೋಧಕ ರೇಟ್‌ ಅನ್ನು ಹೊಂದಿದೆ.

ಅಂದರೆ ಇದು 1.5 ಮೀಟರ್‌ಗಳಷ್ಟು ನೀರಿನಲ್ಲಿ 30 ನಿಮಿಷಗಳ ಕಾಲ ಬಿಸಿ ಅಥವಾ ತಂಪು ನೀರಿನಲ್ಲಿ ಮುಳುಗಿದ್ದರು ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲದು.

ಇದನ್ನೂ ಓದಿ: ಇದು ಕೇರಳದ ಶಕ್ತಿಶಾಲಿ ಶಿವನ ಆಲಯ : ಇಲ್ಲಿ ಹೆಣ್ಣು ಮಕ್ಕಳಿಗೆ ಹಗಲಲ್ಲಿ ಇಲ್ಲ ಪ್ರವೇಶ

ಪ್ರೊಸೆಸರ್‌ ಹೇಗಿದೆ?

ರಿಯಲ್ಮಿಯ ಹೊಸ 15 ಟಿ 5ಜಿ ಮೊಬೈಲ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 6400 ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ. ಇದನ್ನು ಆರ್ಮ್ ಮಾಲಿ-ಜಿ 57 ಎಂಸಿ 2 ಜಿಪಿಯು ಜೊತೆ ಜೋಡಿಸಲಾಗಿದೆ.

ಇನ್ನು ರಿಯಲ್ಮಿ 15 ಟಿ ಫೋನ್‌ LPDDR4x RAM ನ 8/12 ಜಿಬಿ ಮತ್ತು 128/256 ಜಿಬಿ ಸಂಗ್ರಹಣೆಯನ್ನು ಬೆಂಬಲಿಸುತ್ತದೆ. ಜೊತೆಗೆ ಇದರ ಸಂಗ್ರಹಣೆಯನ್ನು ಮೈಕ್ರೊ ಎಸ್‌ಡಿ ಕಾರ್ಡ್‌ ಬಳಸಿ 2ಟಿಬಿ ಗಳ ವರೆಗೆ ವಿಸ್ತರಿಸಬಹುದಾಗಿದೆ.

ಬ್ಯಾಟರಿ ಕ್ಷಮತೆ ಹೇಗಿದೆ?

ಈ ಫೋನ್‌ 60W ವೈಡ್‌ ಫಾಸ್ಟ್‌ ಚಾರ್ಜಿಂಗ್‌ನೊಂದಿಗೆ 7000 mAh ಬ್ಯಾಟರಿಯೊಂದಿಗೆ ಬರುತ್ತದೆ. ಅಂದರೆ ಈ ಫೋನ್‌ ಅತ್ಯಂತ ಶಕ್ತಿಶಾಲಿ ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 15 ಆಧಾರಿತ ರಿಯಲ್ಮಿ UI 6.0 ದಲ್ಲಿ ಕಾರ್ಯನಿರ್ವಹಿಸುತ್ತದೆ.

ಈ ಫೋನ್‌ 4 ವರ್ಷಗಳ ಭದ್ರತಾ ಪ್ಯಾಕ್‌ ಮತ್ತು 3 ವರ್ಷಗಳ ಆಂಡ್ರಾಯ್ಡ್‌ ಅಪ್ಡೇಟ್‌ಗಳೊಂದಿಗೆ ಬರುತ್ತದೆ.

ಕ್ಯಾಮೆರಾ ವೈಶಿಷ್ಟ್ಯ

ಇನ್ನು ಕ್ಯಾಮೆರಾದ ಬಗ್ಗೆ ಹೇಳುವುದಾದರೆ ಈ ಫೋನ್‌ ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾವನ್ನು ಹೊಂದಿದೆ. ಅದರಲ್ಲಿ 50MP ಪ್ರೈಮರಿ ಕ್ಯಾಮೆರಾ ಮತ್ತು 2MPಯ ಡೆಪ್ತ್‌ ಸೆನ್ಸಾರ್‌ ಲಿನ್ಸ್‌ಗಳನ್ನು ಹೊಂದಿದೆ. ಮುಂಭಾಗದಲ್ಲಿಯೂ ಸಹ 50MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಸೆಲ್ಫಿ ಮತ್ತು ವಿಡಿಯೋ ಕಾಲ್‌ ಮಾಡಲು ಹೆಚ್ಚಿನ ಅನುಕೂಲವನ್ನು ನೀಡುತ್ತದೆ.

ಇದನ್ನೂ ಓದಿ: ನೀವು ಬಾಯಲ್ಲಿ ಹೇಳಿದ್ರೆ ಪೋಟೋ ಎಡಿಟ್ : ಗೂಗಲ್ Al ಹೊಸ ಫೀಚರ್ಸ್ ರಿಲೀಸ್

(Realme 15T 5G smartphone launched in India know the price and specification)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories