‌ದೀಪಾವಳಿಗೆ ಐಫೋನ್‌ ಖರೀದಿಸಬೇಕಾ? ಇಲ್ಲಿದೆ ನೋಡಿ ಒಂದಕ್ಕಿಂತ ಒಂದು ಸೂಪರ್‌ ಡೀಲ್‌ಗಳು!

iPhone Diwali Deals: ದೀಪಾವಳಿಗೆ ಇನ್ನೇನು ಕೆಲವು ದಿನಗಳು ಮಾತ್ರ ಇವೆ. ಈ ಸಂದರ್ಭದಲ್ಲಿ ಅಮೆಜಾನ್‌, ಫ್ಲಿಪ್‌ಕಾರ್ಟ್‌ಗಳಂತಹ ದೈತ್ಯ ಇ–ಕಾಮರ್ಸ್‌ ವೇದಿಕೆಗಳು ವಿವಿಧ ಐಫೋನ್‌ಗಳ ಮೇಲೆ ಡೀಲ್‌ ಘೋಷಿಸಿವೆ.

ಈ ಡೀಲ್‌ನಲ್ಲಿ ಇತ್ತಿಚೆಗೆ ಅನಾವರಣಗೊಂಡ ಐಫೋನ್‌ 17 ಸರಣಿಯ ಫೋನ್‌ಗಳು ಸೇರಿವೆ. ಕೆಲವು ಹಳೆಯ ಮಾದರಿಯ ಫೋನ್‌ಗಳು ಹೆಚ್ಚಿನ ರಿಯಾಯಿತಿ ಪಡೆದುಕೊಂಡು ಗ್ರಾಹಕರನ್ನು ಆಕರ್ಷಿಸಲು ಮುಂದಾಗಿವೆ.

ಇದರಿಂದ ಅಗ್ಗದ ಬೆಲೆಗೆ ಐಫೋನ್‌ ಖರೀದಿಸಬಹುದಾಗಿದೆ. ಈ ಹಬ್ಬದ ಋತುವಿನ ಮಾರಾಟದಲ್ಲಿ 47,499 ರೂ. ಗಳಿಗೆ ಐಫೋನ್‌ ಖರೀದಿ ಮಾಡಬಹುದಾಗಿದೆ. ಹಾಗಾದರೆ ಐಫೋನ್‌ನ ಯಾವ ಮಾದರಿಯ ಫೋನ್‌ಗಳು ನಿಮ್ಮ ಕೈಗೆಟಕುವಂತಾಗಿದೆ ಎಂದು ನೋಡೋಣ.

ಐಫೋನ್‌ 15

ಉತ್ತಮ ಡೀಲ್‌ಗಳ ಪಟ್ಟಿಯಲ್ಲಿ ಅತ್ಯಂತ ಕಡಿಮೆ ಬೆಲೆಯ ಐಫೋನ್‌ ಎಂದರೆ ಅದು 2023 ರಲ್ಲಿ ಬಿಡುಗಡೆಯಾದ ಐಫೋನ್‌ 15. ಇದು ಈಗ 47,999 ರೂ. ಗಳಿಗೆ ಲಭ್ಯವಿದೆ.

ಆಪಲ್‌ನ ಇನ್‌–ಹೌಸ್‌ A16 ಬಯೋನಿಕ್‌ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ಈ ಫೋನ್‌ 6.1 ಇಂಚಿನ ಸೂಪರ್‌ ರೆಟಿನಾ XDR OLED ಸ್ಕ್ರೀನ್‌ನೊಂದಿಗೆ ಬರುತ್ತದೆ.

ಇದನ್ನು ಸಿರಾಮಿಕ್‌ ಶೀಲ್ಡ್‌ ಗ್ಲಾಸ್‌ನಿಂದ ರಕ್ಷಿಸಲಾಗಿದೆ. ಐಫೋನ್‌ 15 ಫೋನ್‌ iOS 17 ನಲ್ಲಿ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ.

ಇನ್ನು ಈ ಫೋನ್‌ನ ಕ್ಯಾಮೆರಾ ವೈಶಿಷ್ಟ್ಯವೇನೆಂದರೆ 12MP ಅಲ್ಟ್ರಾವೈಡ್ ಶೂಟರ್ ಜೊತೆಗೆ 48MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ.

ಇದನ್ನೂ ಓದಿ: ಶಕ್ತಿಶಾಲಿ ಕ್ಯಾಮೆರಾ, ಸೂಪರ್ ಡಿಸ್ಪೇ ಇರುವ ವಿವೋ X300 ಸರಣಿ ಫೋನ್‌ಗಳು ಅನಾವರಣ

ಐಫೋನ್‌ 16e

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಐಫೋನ್‌ 16e ಸ್ಮಾರ್ಟ್‌ಫೋನ್‌ ದೀಪಾವಳಿ ಸೇಲ್‌ನಲ್ಲಿ 49,990 ರೂ. ಗಳ ಭಾರಿ ರಿಯಾಯಿತಿಯೊಂದಿಗೆ ಮಾರಾಟಕ್ಕೆ ಸಜ್ಜಾಗಿದೆ.

ಕ್ಯಾಂಪಾಕ್ಟ್‌ ಐಫೋನ್‌ ಖರೀದಿಸಲು ಬಯಸುವವರಿಗೆ ಈ ಫೋನ್‌ ಉತ್ತಮವಾಗಬಲ್ಲದು. 167 ಗ್ರಾಂ ತೂಕವಿರುವ ಐಫೋನ್‌ 16e ಫೋನ್‌ 6.1 ಇಂಚಿನ ಸೂಪರ್‌ ರೆಟಿನಾ XDR OLED ಸ್ಕ್ರೀನ್‌ ಹೊಂದಿದೆ. ಇದು iOS 18.3.1 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಆಪಲ್‌ A18 ಚಿಪ್‌ಸೆಟ್‌ನಿಂದ ಚಾಲಿತವಾಗುವ ಫೋನ್‌ 48MP ಸಿಂಗಲ್‌ ಕ್ಯಾಮೆರಾ ಜೊತೆಗೆ 12 MP ಸೆಲ್ಫಿ ಶೂಟರ್‌ ಹೊಂದಿದೆ. ಗೇಮಿಂಗ್‌ನಲ್ಲಿ ಆಸಕ್ತಿ ಇರುವವರಿಗೆ ಈ ಫೋನ್‌ ಇಷ್ಟವಾಗಬಹುದು.

ಐಫೋನ್‌ 16

ಸ್ವಲ್ಪ ಹೆಚ್ಚಿನ ಬಜೆಟ್‌ನ ಉತ್ತಮ ಐಫೋನ್‌ ಖರೀದಿಸಲು ಮನಸ್ಸು ಮಾಡಿದ್ದರೆ ಐಫೋನ್‌ 16 ಉತ್ತಮ ಖರೀದಿಯಾಗಬಹುದು. ಐಫೋನ್‌ 16, 79,990 ರೂ. ಗಳಿಗೆ ಬಿಡುಗಡೆಯಾಗಿತ್ತು.

ಈಗ ಈ ಫೋನ್‌ ಕ್ಯಾಶ್‌ಬ್ಯಾಕ್‌ನ ನಂತರ 60,900 ರೂ.ಗಳಿಗೆ ಮಾರಾಟವಾಗುತ್ತಿದೆ. ಇದು ಐಫೋನ್‌ 16e ನ ವೈಶಿಷ್ಟ್ಯಗಳನ್ನೇ ಎರವಲು ಪಡೆದುಕೊಂಡಿದ್ದರೂ ಇದರಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಇರಲಿದೆ.

48MP ಪ್ರಾಥಮಿಕ ಕ್ಯಾಮೆರಾ ಮತ್ತು 12 MPಯ ಅಲ್ಟ್ರಾವೈಡ್‌ ಶೂಟರ್ ಇರಲಿದೆ. IP68ನಿಂದಾಗಿ ಇದು ಧೂಳು ಮತ್ತು ನೀರಿನಿಂದ ರಕ್ಷಣೆ ಒದಗಿಸುತ್ತದೆ.

ಐಫೋನ್‌ 16 ಪ್ರೋ

ವೆನಿಲ್ಲಾ ಆವೃತ್ತಿಯ ಐಫೋನ್‌ 16 ಪ್ರೋ ಫೋನ್‌ ಖರೀದಿಸುವ ಯೋಚನೆಯಿದೆಯಾ? ಹಾಗಾದರೆ ಈಗ ಅದಕ್ಕೆ ಸುವರ್ಣಾವಕಾಶ ಒದಗಿಬಂದಿದೆ. ಹೇಗೆಂದರೆ 128 ಜಿಬಿಯ ಮೂಲ ಆವೃತ್ತಿಯ ಐಫೋನ್‌ 16 ಪ್ರೋ ಸದ್ಯ ಬಿಗ್‌ಬಾಸ್ಕೆಟ್‌ನಲ್ಲಿ 99,990 ರೂ. ಗಳಿಗೆ ಮಾರಾಟವಾಗುತ್ತಿದೆ.

ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ವೇದಿಕೆಗಳಿಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಆದರೆ 256 ಜಿಬಿಯ ಐಫೋನ್‌ 16 ಪ್ರೋ ಖರೀದಿಸಬೇಕೆಂದಿದ್ದರೆ ಫ್ಲಿಪ್‌ಕಾರ್ಟ್‌ ಉತ್ತಮ ಆಯ್ಕೆಯಾಗಿದೆ.

ಏಕೆಂದರೆ ಫ್ಲಿಪ್‌ಕಾರ್ಟ್‌ ಈ ಫೋನ್‌ ಅನ್ನು 1,04,999 ರೂ. ಗಳಿಗೆ ಮಾರಾಟಮಾಡುತ್ತಿದೆ. ಜೊತೆಗೆ ಇದಕ್ಕೆ ಆಕ್ಸಿಸ್‌ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಆಫ್‌ರ ಲಭ್ಯವಿದೆ.

ಕಳೆದ ತಿಂಗಳು ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಐಫೋನ್‌ 16 ಪ್ರೋ ಒಂದು ಅತ್ಯುತ್ತಮ ಕ್ಯಾಂಪೆಕ್ಟ್‌ ಪೋನ್‌ ಆಗಿದೆ. 6.3 ಇಂಚಿನ ಸೂಪರ್‌ ರೆಟಿನಾ XDR OLED ಡಿಸ್ಪ್ಲೇ ಹೊಂದಿರುವ ಫೋನ್‌ iOS 18ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇದು 48 MP ಮೇನ್‌ ಕ್ಯಾಮೆರಾ ಮತ್ತು 12 MP ಪೆರಿಸ್ಕೋಪ್‌ ಟೆಲಿಫೋಟೋ ಶೂಟರ್‌ ಹಾಗೂ 48 MP ಅಲ್ಟ್ರಾವೈಡ್‌ ಸಂವೇದಕವನ್ನು ಹೊಂದಿದೆ.

ಇದನ್ನೂ ಓದಿ: 15,000ಕ್ಕಿಂತ ಕಡಿಮೆ ಬೆಲೆ, 50MP OIS ಕ್ಯಾಮೆರಾ: ಮೋಟೋರೋಲಾದ ದೀಪಾವಳಿ ಧಮಾಕಾ!

(iPhone Diwali Deals several iphone models available at huge discount price in festival sale)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories