ಗೇಮಿಂಗ್‌ ದುನಿಯಾದ ಸೂಪರ್ ಸ್ಪೀಡ್ ಸ್ಮಾರ್ಟ್‌ಫೋನ್‌: ಒನ್‌ಪ್ಲಸ್‌ 15R ಭಾರತದಲ್ಲಿ ಬಿಡುಗಡೆ

OnePlus 15R Launch: ಕೆಲವು ದಿನಗಳ ಹಿಂದೆ ತಂತ್ರಜ್ಞಾನದ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ 15 ದೊಡ್ಡ ಸಂಚಲನವನ್ನೇ ಮೂಡಿಸಿತ್ತು. ಕಂಪನಿ ಈಗ ಅಂತಹುದ್ದೇ ಒಂದು ದೊಡ್ಡ ಶಕ್ತಿಶಾಲಿ ಸಾಧನವನ್ನು ಬಿಡುಗಡೆ ಮಾಡಲು ತಯಾರಿನಡೆಸುತ್ತಿದೆ.

ಹೌದು, ಈ ಬಾರಿ ಅದು ಸುದೀರ್ಘ ಬಾಳಿಕೆಯ ಬ್ಯಾಟರಿ ಇರುವ ಒನ್‌ಪ್ಲಸ್‌ 15R ಸ್ಮಾರ್ಟ್‌ಫೋನ್‌ ಅನ್ನು ಇದೇ ವಾರ ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ.

ಸುಂದರ ವಿನ್ಯಾಸ, ಅದ್ಭುತ ಕಾರ್ಯಕ್ಷಮತೆ, ದೀರ್ಘ ಬ್ಯಾಟರಿ ಬಾಳಿಕೆ ಮತ್ತು ಸುಧಾರಿತ ಕ್ಯಾಮೆರಾ ವೈಶಿಷ್ಟ್ಯ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಹಲವು ವಿಧಗಳಲ್ಲಿ ಅಚ್ಚರಿ ಮೂಡಿಸಲ ಸಜ್ಜಾಗಿದೆ.

ಕಂಪನಿಯು ಈ ಫೋನ್‌ನ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಅನಾವರಣಗೊಳಿಸಿ ಗ್ರಾಹಕರಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ. ಈ ವಾರ ಬಿಡುಗಡೆಯಾಗಲಿರುವ ಒನ್‌ಪ್ಲಸ್‌ 15R ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯ ಹಾಗೂ ಸಂಭಾವ್ಯ ಬೆಲೆ ತಿಳಿಯೋಣ.

ಒನ್‌ಪ್ಲಸ್‌ 15R ವೈಶಿಷ್ಟ್ಯ

ತಂತ್ರಜ್ಞಾನದ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಕುತೂಹಲ ಹೆಚ್ಚಿಸಿರುವ ಒನ್‌ಪ್ಲಸ್‌ 15R ಸ್ಮಾರ್ಟ್‌ಫೋನ್‌ 165Hz ರಿಫ್ರೆಶ್ ದರ ಮತ್ತು 3,600 nits ವರೆಗಿನ ಗರಿಷ್ಠ ಹೊಳಪಿನೊಂದಿಗೆ 6.83-ಇಂಚಿನ LTPS OLED ಪರದೆಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದು ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್‌ 8 ಜೆನ್‌ 5 ಪ್ರೊಸೆಸ್ಸರ್‌ನಿಂದ ಚಲಿಸುವ ಸಾಧ್ಯತೆಯಿದೆ. ಇದನ್ನು 12GB RAM ಮತ್ತು 512GB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ.

ಅತ್ಯಂತ ವೇಗದ 10 W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ದೊಡ್ಡದಾದ 8,300mAh ಬ್ಯಾಟರಿ ಪ್ಯಾಕ್‌ ನಿರೀಕ್ಷಿಸಬಹುದಾಗಿದೆ.

ಇನ್ನು ಕ್ಯಾಮೆರಾಗಳ ವಿಷಯದಲ್ಲಿ, ಒನ್‌ಪ್ಲಸ್‌ 15R ನಲ್ಲಿ OIS ಬೆಂಬಲದೊಂದಿಗೆ 50MP ಸೋನಿ IMX906 ಪ್ರಾಥಮಿಕ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಇರುತ್ತದೆ.

ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ 32MP ಮುಂಭಾಗದ ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ.

ಒನ್‌ಪ್ಲಸ್‌ 15R ನ ನಿರೀಕ್ಷಿತ ಬೆಲೆ

ಸೋರಿಕೆಯಾಗಿರುವ ವರದಿಯ ಪ್ರಕಾರ, ಭಾರತದಲ್ಲಿ ಒನ್‌ಪ್ಲಸ್‌ 15R ನ 12GB ಮತ್ತು 256GB ರೂಪಾಂತರದ ಬೆಲೆಯು 45,000 ರೂ. ದಿಂದ 49,000 ರೂ.ಗಳ ನಡುವೆ ನಿರೀಕ್ಷಿಸಬಹುದಾಗಿದೆ.

ಆದರೆ 12GB ಮತ್ತು 512GB ರೂಪಾಂತರದ ಫೋನ್‌ ಬೆಲೆಯು 52,000 ರೂ.ಗಳವರೆಗೆ ಅಂದಾಜಿಸಲಾಗಿದೆ.

ಇದನ್ನೂ ಓದಿ: ದೈನಂದಿನ ಬಳಕೆಗೆ ಬೆಸ್ಟ್ ರೆಡ್ಮಿ ನೋಟ್ 14 ಪ್ರೋ: ಭಾರಿ ರಿಯಾಯಿತಿಯೊಂದಿಗೆ ಪ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿ

ಒನ್‌ಪ್ಲಸ್‌15R ಬಿಡುಗಡೆ ದಿನಾಂಕ ಮತ್ತು ಲಭ್ಯತೆ

ಒನ್‌ಪ್ಲಸ್‌15R ಸ್ಮಾರ್ಟ್‌ಪೂನ್‌ ಡಿಸೆಂಬರ್ 17 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಯಾದ ನಂತರ, ಈ ಫೋನ್‌ ಅನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌, ಒನ್‌ಪ್ಲಸ್‌ ನ ಅಧಿಕೃತ ಆನ್‌ಲೈನ್ ಶಾಪ್‌ ಮತ್ತು ರಿಟೇಲ್‌ ಅಂಗಡಿಗಳಲ್ಲಿ ಖರೀದಿಸಬಹುದಾಗಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories