ವಾಟ್ಸಾಪ್ ‘ಸ್ಟೇಟಸ್’ ಮತ್ತು ‘ಚಾನೆಲ್’ಗಳಲ್ಲಿ ಹೊಸ ಬದಲಾವಣೆ! ಇನ್ಮೇಲೆ ಜಾಹೀರಾತುಗಳ ಹಾವಳಿ
WhatsApp Flooded with Adds soon: ಮೆಟಾ ಮಾಲೀಕತ್ವದ ಜನಪ್ರಿಯ ಸಂದೇಶ ರವಾನೆ ಅಪ್ಲಿಕೇಶನ್ ವಾಟ್ಸಾಪ್ (WhatsApp), ತನ್ನ ಬಳಕೆದಾರರಿಗೆ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. ಇನ್ನು ಮುಂದೆ ವಾಟ್ಸಾಪ್‌ನ ‘ಅಪ್‌ಡೇಟ್ಸ್’ (Updates) ಟ್ಯಾಬ್‌ನಲ್ಲಿ ಜಾಹೀರಾತುಗಳು ಮತ್ತು ಪ್ರಾಯೋಜಿತ ಚಾನೆಲ್‌ಗಳು (Promoted Channels) ಜಾಗತಿಕವಾಗಿ ಕಾಣಿಸಿಕೊಳ್ಳಲಿವೆ.
ಹೊಸ ಬದಲಾವಣೆಗಳೇನು?
- ಸ್ಟೇಟಸ್ ಜಾಹೀರಾತುಗಳು (Status Ads): ಬಳಕೆದಾರರು ತಮ್ಮ ಸ್ನೇಹಿತರ ಸ್ಟೇಟಸ್‌ಗಳನ್ನು ನೋಡುವಾಗ ನಡುವೆ ಜಾಹೀರಾತುಗಳು ಕಾಣಿಸಿಕೊಳ್ಳಲಿವೆ. ಇದನ್ನು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ಗಳಲ್ಲಿ ಬರುವ ಜಾಹೀರಾತುಗಳಂತೆಯೇ ಸ್ಕೈಪ್ (Swipe) ಮಾಡುವ ಮೂಲಕ ಸ್ಕಿಪ್ ಮಾಡಬಹುದು.
- ಪ್ರಮೋಟೆಡ್ ಚಾನೆಲ್ಸ್: ಹೊಸ ಬಿಸಿನೆಸ್ ಮತ್ತು ಬ್ರ್ಯಾಂಡ್‌ಗಳನ್ನು ಸುಲಭವಾಗಿ ಹುಡುಕಲು ವಾಟ್ಸಾಪ್ ಪ್ರಾಯೋಜಿತ ಚಾನೆಲ್‌ಗಳನ್ನು ಪರಿಚಯಿಸಿದೆ. ಇದು ಬಿಸಿನೆಸ್‌ಗಳು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ.
- ನಿಯಂತ್ರಣ ನಿಮ್ಮ ಕೈಲಿ: ಬಳಕೆದಾರರು ತಮಗೆ ಬೇಡದ ಅಥವಾ ಕಿರಿಕಿರಿ ಎನಿಸುವ ಜಾಹೀರಾತುಗಳನ್ನು ಬ್ಲಾಕ್ ಮಾಡುವ ಅಥವಾ ಹೈಡ್ (Hide) ಮಾಡುವ ಆಯ್ಕೆಯನ್ನು ನೀಡಲಾಗಿದೆ.
ನಿಮ್ಮ ವೈಯಕ್ತಿಕ ಚಾಟ್‌ಗಳು ಸುರಕ್ಷಿತವೇ?
ವಾಟ್ಸಾಪ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಜಾಹೀರಾತುಗಳು ಕೇವಲ ‘ಅಪ್‌ಡೇಟ್ಸ್’ (Updates) ಟ್ಯಾಬ್‌ಗೆ ಮಾತ್ರ ಸೀಮಿತವಾಗಿರುತ್ತವೆ. ನಿಮ್ಮ ವೈಯಕ್ತಿಕ ಚಾಟ್‌ಗಳು, ಕರೆಗಳು ಮತ್ತು ಖಾಸಗಿ ಸಂದೇಶಗಳು ಎಂದಿನಂತೆ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿರುತ್ತವೆ ಮತ್ತು ಅವುಗಳಲ್ಲಿ ಯಾವುದೇ ಜಾಹೀರಾತುಗಳು ಬರುವುದಿಲ್ಲ ಎಂದು ಕಂಪನಿ ಭರವಸೆ ನೀಡಿದೆ.
ಶುಭ ಕಾರ್ಯಗಳಲ್ಲಿ 1 ರೂಪಾಯಿಗೆ ಏಕಿಷ್ಟು ಮಹತ್ವ? ಧಾರ್ಮಿಕ ನಂಬಿಕೆಯ ಜೊತೆಗೆ ವೈಜ್ಞಾನಿಕ ಕಾರಣ ಹೀಗಿದೆ
ಜಾಹೀರಾತು ಮುಕ್ತ ಅನುಭವ ಬೇಕೆ?
ಯುರೋಪ್‌ನಂತಹ ಕೆಲವು ಆಯ್ದ ಪ್ರದೇಶಗಳಲ್ಲಿ, ಜಾಹೀರಾತುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ‘ಸಬ್‌ಸ್ಕ್ರಿಪ್ಷನ್’ (Subscription) ಮಾದರಿಯನ್ನು ವಾಟ್ಸಾಪ್ ಪರೀಕ್ಷಿಸುತ್ತಿದೆ. ನಿಗದಿತ ಹಣ ಪಾವತಿಸುವ ಮೂಲಕ ಬಳಕೆದಾರರು ಜಾಹೀರಾತು ಮುಕ್ತ ಅನುಭವವನ್ನು ಪಡೆಯಬಹುದಾಗಿದೆ.
ಗ್ರೂಪ್ ಚಾಟ್ ಹಿಸ್ಟರಿ (Group Chat History):
ಜಾಹೀರಾತುಗಳ ಜೊತೆಗೆ ವಾಟ್ಸಾಪ್ ಮತ್ತೊಂದು ಉಪಯುಕ್ತ ಫೀಚರ್ ಪರಿಚಯಿಸಿದೆ. ಹೊಸದಾಗಿ ಗ್ರೂಪ್ ಸೇರುವ ಸದಸ್ಯರಿಗೆ ಹಳೆಯ 25 ರಿಂದ 100 ಸಂದೇಶಗಳನ್ನು ನೋಡಲು ಅಡ್ಮಿನ್‌ಗಳು ಅನುಮತಿ ನೀಡಬಹುದು. ಇದರಿಂದ ಹೊಸ ಸದಸ್ಯರಿಗೆ ಗ್ರೂಪ್‌ನಲ್ಲಿ ನಡೆಯುತ್ತಿರುವ ಚರ್ಚೆಯ ಸಂದರ್ಭ (Context) ಸುಲಭವಾಗಿ ಅರ್ಥವಾಗುತ್ತದೆ.



