ಶುಭ ಕಾರ್ಯಗಳಲ್ಲಿ 1 ರೂಪಾಯಿಗೆ ಏಕಿಷ್ಟು ಮಹತ್ವ? ಧಾರ್ಮಿಕ ನಂಬಿಕೆಯ ಜೊತೆಗೆ ವೈಜ್ಞಾನಿಕ ಕಾರಣ ಹೀಗಿದೆ

ಪ್ರತಿಯೊಬ್ಬರೂ ಪ್ರತಿವರ್ಷ ಅದೆಷ್ಟೋ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಆಗೆಲ್ಲಾ ಉಡುಗೊರೆಗಳನ್ನು ಕೊಟ್ಟಿರುತ್ತಾರೆ. ಅದೇ ರೀತಿ ಉಡುಗೊರೆಗಳನ್ನು ಸ್ವೀಕರಿಸಿಯೂ ಇರುತ್ತಾರೆ.

ಸಾಮಾನ್ಯವಾಗಿ ಹಣ ಕೊಡುವಾಗ ಅಥವಾ ಸ್ವೀಕರಿಸಿದಾಗ ಪ್ರತಿಸಲ ಒಂದನ್ನು ಗಮನಿಸಿಯೇ ಇರುತ್ತೇವೆ. ಅದೇನೆಂದರೆ ಅದೆಷ್ಟೇ ದೊಡ್ಡ ಮೊತ್ತದ ಹಣವಿರಲಿ ಅದರಲ್ಲಿ 1 ರೂಪಾಯಿ ಇದ್ದೇ ಇರುತ್ತದೆ. ಏಕೆ ಹಾಗೆ? ಈ ಪ್ರಶ್ನೆ ಬಹಳಷ್ಟು ಜನರ ಮನಸ್ಸಿನಲ್ಲಿ ಪ್ರಶ್ನೆಯಾಗಿ ಉಳಿದಿದೆ.

ಹಿಂದೂ ಸಂಪ್ರದಾಯದಲ್ಲಿ ಮದುವೆ, ಉಪನಯನ, ಪೂಜೆ, ಗುರು ದಕ್ಷಿಣೆ ಇತ್ಯಾದಿ ಶುಭ ಕಾರ್ಯಗಳಲ್ಲಿ 100, 500, 1000 ವನ್ನು ಉಡುಗೊರೆಯಾಗಿ ನೀಡುವುದಿಲ್ಲ. ಬದಲಿಗೆ 101, 501, 1001 ರೂಪಾಯಿಗಳನ್ನು ನೀಡಲಾಗುತ್ತದೆ.

ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ನಮ್ಮ ಪೂರ್ವಜರು 1 ರೂಪಾಯಿ ಸೇರಿಸಿ ಕೊಡುವ ಪದ್ಧತಿಯನ್ನು ಬೆಳೆಸಿಕೊಂಡಿರುವುದರ ಹಿಂದೆ ವಿಶೇಷವಾದ ಕಾರಣವಂತೂ ಇದೆ.

ಈಗಂತೂ ಎನ್ವಲಪ್‌ ಮೇಲೆಯೇ 1 ರೂಪಾಯಿ ನಾಣ್ಯವನ್ನು ಅಂಟಿಸಿರುತ್ತಾರೆ. ಕೆಲವರು 1 ರೂಪಾಯಿ ಜೋಡಿಸಿ ಕೊಡುವುದು ಶುಭದ ಸಂಕೇತವೆಂದು ಪರಿಗಣಿಸಿದರೆ, ಇನ್ನು ಕೆಲವರು ಅದು ಪ್ರಗತಿಯ ಸಂಕೇತವೆಂದೂ ಹೇಳುತ್ತಾರೆ. ಹಾಗಾದರೆ ಶುಭ ಕಾರ್ಯಗಳಲ್ಲಿ 1 ರೂಪಾಯಿಗೆ ಏಕಿಷ್ಟು ಮಹತ್ವ ಎಂದು ತಿಳಿಯೋಣ.

ಒಂದು ರೂಪಾಯಿಗಿರುವ ಮಹತ್ವ
ಪ್ರಾಚೀನ ಕಾಲದಿಂದಲೂ ನಮ್ಮ ಋಷಿ ಮುನಿಗಳು ಸಂಖ್ಯೆಯ ಮಹತ್ವವನ್ನು ಅರಿತುಕೊಂಡಿದ್ದರು. 100, 500, 1000 ಈ ಸಂಖ್ಯೆಗಳು ಶೂನ್ಯದಿಂದ ಅಂದರೆ ಸೊನ್ನೆಯಿಂದ ಕೊನೆಗೊಳ್ಳುತ್ತವೆ. ಅಂದರೆ ಇದರ ಅರ್ಥ ಅಂತ್ಯ ಅಥವಾ ಕೊನೆಯನ್ನು ಸೂಚಿಸುತ್ತದೆ.

ಅದೇ ಈ ಸಂಖ್ಯೆಗಳಿಗೆ 1 ಅನ್ನು ಸೇರಿಸದರೆ ಅದು ಸಕ್ರೀಯ ಸಂಖ್ಯೆಗಳಾಗುತ್ತವೆ. ಅದು ಚಲನ ಶೀಲತೆಯನ್ನು ಸೂಚಿಸುತ್ತದೆ. ಪ್ರೀತಿ, ಸಂಬಂಧ, ಸಂಪತ್ತು, ಮತ್ತು ಶುಭ ಘಟನೆಗಳು ಮುಂದುವರಿಯುವುದನ್ನು ಸೂಚಿಸುತ್ತದೆ.

ಇದು ಸಕಾರಾತ್ಮಕ ಶಕ್ತಿಯ ಸಂಕೇತವಾಗಿದೆ. ಉಡುಗೊರೆ ಕೊಡುವವರ ಹಾಗೂ ಪಡೆಯುವವರ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ.

ಇದನ್ನೂ ಓದಿ: Vastu Tips: ನಿಮ್ಮ ಜೀವನವೂ ಕಲರ್‌ಫುಲ್‌ ಆಗಿರಲು ಹೋಳಿ ಹಬ್ಬದ ಮೊದಲು ಈ ಕೆಲಸ ತಪ್ಪದೇ ಮಾಡಿ

ವೈಜ್ಞಾನಿಕವಾಗಿ 1 ಕ್ಕೆ ಇರುವ ಮಹತ್ವವೇನು?

ಇಂದು ನಾವೆಲ್ಲರೂ ಉಪಯೋಗಿಸುವ ಕಂಪ್ಯೂಟರ್‌ನ ಭಾಷೆ 0 ಮತ್ತು 1. ಅದರಲ್ಲಿ 0 ಎಂದರೆ ಸ್ಟಾಪ್‌, 1 ಎಂದರೆ ಸ್ಟಾರ್ಟ್‌. ಅಂದರೆ 1 ರೂಪಾಯಿ ಪ್ರಾರಂಭವನ್ನು ಸೂಚಿಸುತ್ತದೆ. ಯಾವುದೇ ಕೆಲಸ ನಿಲ್ಲಬಾರದು, ಅದು ಮುಂದುವರಿಯುತ್ತಲೇ ಇರಬೇಕು.

ಸೊನ್ನೆ ಅಥವಾ ಶೂನ್ಯವು ಸ್ಥಿರತೆಯನ್ನು ಸೂಚಿಸುತ್ತದೆ. ಆದರೆ 1 ರೂಪಾಯಿ ಸೇರಿಸುವುದು ಪ್ರಗತಿ ಮತ್ತು ಮುಂದುವರಿಯುವಿಕೆಯ ಸಂಕೇತವಾಗಿದೆ. ಅಷ್ಟೇ ಅಲ್ಲದೇ ಅದು ಮನೋನಂಬಿಕೆಯನ್ನು ಸೃಷ್ಟಿಸುತ್ತದೆ. ಆದ್ದರಿಂದ ವೈಜ್ಞಾನಿಕವಾಗಿಯೂ ಒಂದು ರೂಪಾಯಿಗೆ ಬಹಳ ಮಹತ್ವವಿರುವುದನ್ನು ಕಾಣಬಹುದು.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories