ಬ್ರಹ್ಮಾವರ: ಮಾನಸಿಕ ಖಿನ್ನತೆಯಿಂದ ನೊಂದು ಯುವಕ ಆತ್ಮಹತ್ಯೆ

ಮೃತ ಶರತ್ ಕುಮಾರ್ ಕಳೆದ 2-3 ವರ್ಷಗಳಿಂದ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಈ ಸಂಬಂಧ ಅವರಿಗೆ ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ನೀಡಲಾಗುತ್ತಿತ್ತು

ಕೋಟ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಕಳೆದ ಕೆಲವು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಶರತ್ ಕುಮಾರ್ (33 ವರ್ಷ) ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಶರತ್ ಕುಮಾರ್ ಕಳೆದ 2-3 ವರ್ಷಗಳಿಂದ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಈ ಸಂಬಂಧ ಅವರಿಗೆ ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ನೀಡಲಾಗುತ್ತಿತ್ತು. ಆದರೆ, ಕಾಯಿಲೆಯಿಂದ ಗುಣಮುಖರಾಗದ ಕಾರಣ ಅವರು ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ. ಈ ಹಿಂದೆ ಕೂಡ ಅವರು ಒಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Also Read : ಉಡುಪಿಯಲ್ಲಿ ಮಟ್ಕಾ ದಂಧೆ : ಹಿರಿಯಡ್ಕ-ಮಲ್ಪೆಯಲ್ಲಿ ಆರೋಪಿಗಳ ಬಂಧನ

ಅಷ್ಟಕ್ಕೂ ನಡೆದಿದ್ದೇನು ?

ಮಾರ್ಚ್‌ 26 ರಂದು ಬೆಳಿಗ್ಗೆ ಶರತ್ ಅವರ ತಾಯಿ ನೆರೆಮನೆಗೆ ಹೋಗಿದ್ದರು. ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ಅವರು ವಾಪಸ್ ಬಂದಾಗ ಶರತ್ ಮನೆಯಲ್ಲಿ ಕಾಣಿಸಲಿಲ್ಲ. ಗಾಬರಿಗೊಂಡ ಕುಟುಂಬಸ್ಥರು ಹುಡುಕಾಡಿದಾಗ, ಹಳೆಯ ಮನೆಗೆ ತಾಗಿಕೊಂಡಿರುವ ಹೊಸ ಮನೆಯಲ್ಲಿ ಶರತ್ ಸೀರೆಯಿಂದ ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ.

ತಕ್ಷಣವೇ ಅವರನ್ನು ಕೋಟದ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ವಈ ಕುರಿತು ಮೃತರ ಅಕ್ಕ ಸುಮಿತ್ರಾ (37) ಅವರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

brahmavar pandeshwara youth sharat kumar suicide mental health case

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories