ಹೆಬ್ರಿ: ಹೈಟೆಕ್ ಜೂಜಾಟದ ಅಡ್ಡೆ ಮೇಲೆ ಖಾಕಿ ದಾಳಿ; ಮೂವರ ಬಂಧನ, 13 ಲಕ್ಷ ಮೌಲ್ಯದ ಸ್ವತ್ತು ವಶ
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಹೊಸೂರಿನಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ಕಾರ್ಕಳ ವೃತ್ತ ನಿರೀಕ್ಷಕರು ಮತ್ತು ಹೆಬ್ರಿ ಪೊಲೀಸರು ಜಂಟಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದು, ಕಾರು-ಬೈಕ್ ಸೇರಿದಂತೆ ಬೃಹತ್ ಮೊತ್ತದ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ.

ಹೆಬ್ರಿ: ಕರಾವಳಿಯಲ್ಲಿ ಅಕ್ರಮ ಜೂಜಾಟ ಪ್ರಕರಣ ಹೆಚ್ಚುತ್ತಿದೆ. ಇದೀಗ ಹೈಟೆಕ್ ಇಸ್ಪಿಟ್ ದಂಧೆಯನ್ನು ಬೇಧಿಸುವಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ. ಮೂವರು ಆರೋಪಿಗಳನ್ನು ಬಂಧಿಸಿದ್ದು, ಐದು ಕಾರು, ಮೂರು ಬೈಕ್ ಸೇರಿದಂತೆ ಒಟ್ಟು ₹13,07,370 ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಪ್ಪರ ಹಾಕಿ ಹೈಟೆಕ್ ಜೂಜಾಟ
ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಿಗೆ (DySP) ಹೆಬ್ರಿ ಸಮೀಪದ ಹೊಸೂರು ಎಂಬಲ್ಲಿ ವ್ಯವಸ್ಥಿತ ಜೂಜಾಟ ನಡೆಯುತ್ತಿರುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿತ್ತು.ಕಾರ್ಕಳ ವೃತ್ತ ನಿರೀಕ್ಷಕರು ಕೂಡಲೇ ದಾಳಿ ನಡೆಸಿದ್ದಾರೆ. ಆರೋಪಿಗಳು ಚಪ್ಪರ ಹಾಕಿ, ಟಾರ್ಪಲ್ ಹಾಸಿ ಜೂಜು ಅಡ್ಡೆ ನಿರ್ಮಿಸಿದ್ದರು.
ಮೂವರ ಬಂಧನ, 15ಕ್ಕೂ ಅಧಿಕ ಮಂದಿ ಪರಾರಿ
ಪೊಲೀಸರು ದಾಳಿ ನಡೆಸುತ್ತಿದ್ದಂತೆ ಜೂಜಿನ ಅಡ್ಡೆಯಲ್ಲಿದ್ದವರು ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ ಪೊಲೀಸರು ವಿಜೇಶ್, ದಸ್ತಗೀರ್ ಮತ್ತು ರೋಹಿತ್ ಎಂಬವನ್ನು ಬಂಧಿಸಿದ್ದಾರೆ. ಬಂಧಿತರರು ತಾವು ಜೂಜಾಟ ಆಡ್ತಾ ಇರೋದನ್ನು ಒಪ್ಪಿಕೊಂಡಿದ್ದಾರೆ.
Also Read : ಕಾರ್ಕಳ: ವಾಟ್ಸಾಪ್ನಲ್ಲಿ ಆರ್ಟಿಒ ಪಿಡಿಎಫ್ ಓಪನ್, ಬ್ಯಾಂಕ್ ಖಾತೆಯಿಂದ ₹5.63 ಲಕ್ಷ ಕನ್ನ
ವಿಜಯ ಶೆಟ್ಟಿ ಕಾರ್ಕಳ, ನಿತಿನ್ ಮಂಗಳೂರು, ರಫೀಕ್ ಮೂಲ್ಕಿ, ಕಿಶೋರ್ ಪಂಪ್ವೆಲ್, ಸಿದ್ದು ಶೆಟ್ಟಿ ಮೂಲ್ಕಿ, ರಂಗನಾಥ ಮೂಲ್ಕಿ, ಚೇತನ ಬರ್ಕೆ, ನಜೀರ್ ಬೆಳ್ತಂಗಡಿ, ಕಿಶೋರ್ ಪಾಂಗಾಳ, ಮಹೇಶ್ ಜಾರ್ಕಳ, ಮಹಾದೇವ ನಾಯ್ಕ ಭಟ್ಕಳ, ಇಮ್ರಾನ್ ಮೂಲ್ಕಿ, ಕಾರು ಚಾಲಕ ಹಾಗೂ ಹಲವರು ತಲೆ ಮರೆಯಿಸಿಕೊಂಡಿದ್ದಾರೆ.
ಜೂಜಾಟದ ಅಡ್ಡೆಯಿಂದ ಪೊಲೀಸರು ಸುಮಾರು ₹13,07,370 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಬಂಧಿತರ ಬಳಿಯಲ್ಲಿದ್ದ ₹35,000 ಮೌಲ್ಯದ 4 ಮೊಬೈಲ್ ಫೋನ್ಗಳು, ವಾಹನ, ಇಸ್ಪೀಟ್ ಎಲೆಗಳು, ಟೇಬಲ್, ಕುರ್ಚಿಗಳು, ಬ್ಯಾಟರಿ ಮತ್ತು ಲೈಟಿಂಗ್ ಪರಿಕರ ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ. ತಲೆ ಮರೆಯಿಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
Also Read : ಕಾಪು: ಹೆಂಡತಿಯನ್ನು ರೂಮಿನಲ್ಲಿ ಕೂಡಿ ಹಾಕಿ ನಾದಿನಿಯಿಂದ ಚೂರಿ ಇರಿತ ! ಗಂಡನಿಂದಲೂ ಕ್ರೌರ್ಯ
hebri police raid gambling three arrested



