ಕಾರ್ಕಳ : ಅಜೇಕಾರಿನಲ್ಲಿ ಹುಲ್ಲಿನ ಗೋದಾಮು ಬೆಂಕಿಗೆ ಆಹುತಿ

Karkala Ajekar Fire : ಕಾರ್ಕಳ : ಭತ್ತದ ಹುಲ್ಲು ಸಂಗ್ರಹಿಸಿಟ್ಟಿದ್ದ ಗೋದಾಮು ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೇಕಾರಿನಲ್ಲಿ ನಡೆದಿದೆ.
ಕಾರ್ಕಳ ತಾಲೂಕಿನ ಅಜೇಕಾರು ಸಮೀಪದ ಪತ್ತೊಂಜಿಕಟ್ಟೆ ಎಂಬಲ್ಲಿ ಭತ್ತದ ಹುಲ್ಲನ್ನು ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಆದರೆ ಇಂದು ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಲಕ್ಷಾಂತರ ಮೌಲ್ಯದ ನಷ್ಟ ಸಂಭವಿಸಿದೆ.
ಶಶಾಂಕ್ ಎಸ್ ರಾವ್ ಎಂಬುವವರಿಗೆ ಸೇರಿದ ಗೋದಾಮು ಎಂದು ತಿಳಿದು ಬಂದಿದೆ. ಈ ಗೋದಾಮು ಅಣಬೆ (Mushroom) ಕಾರ್ಖಾನೆಯ ಪಕ್ಕದಲ್ಲಿ ಇತ್ತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ
ಇದನ್ನೂ ಓದಿ : 5 ರೂಪಾಯಿ ಡಾಕ್ಟರ್ ಎಂದೇ ಖ್ಯಾತರಾದ ಡಾ. ಕೆ.ಪಿ.ಶೆಟ್ಟಿ ವಿಧಿವಶ
ಅಗ್ನಿ ಅವಘಡದಿಂದಾಗಿ ಸುಮಾರು ₹3 ಲಕ್ಷ ರೂಪಾಯಿ ಮೌಲ್ಯದ ಭತ್ತದ ಹುಲ್ಲು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಘಟನೆ ನಡೆಯುತ್ತಲೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. ಹೀಗಾಗಿ ಅಕ್ಕಪಕ್ಕದ ಪ್ರದೇಶಗಳಿಗೆ ಬೆಂಕಿ ವ್ಯಾಪಿಸುವುದು ತಪ್ಪಿಸಿದಂತಾಗಿದೆ.
ಅಗ್ನಿಅವಘಡದಲ್ಲಿ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ನೇತೃತ್ವವನ್ನು ಠಾಣಾಧಿಕಾರಿ ಚಂದ್ರಶೇಖರ್ ವಹಿಸಿದ್ದರು. ಸಿಬ್ಬಂದಿ ರೂಪೇಶ್, ಸುಕೇಶ್, ಸಂಜಯ್, ಮುಜಾಬಿಲ್ ಮತ್ತು ನಿತ್ಯಾನಂದ್ ಅವರು ಸಹಕಾರ ನೀಡಿದ್ದಾರೆ.
ಇದನ್ನೂ ಓದಿ : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಭಕ್ತರಿಗೆ ಸೈಬರ್ ವಂಚನೆ ಜಾಲ
Karkala Ajekar Fire destroys paddy straw godown



