ಮುನಿಯಾಲು ನಾಲಿಗೆ ಹಳಿತಪ್ಪಿದೆ, ಬಾಯಿ ಮುಚ್ಚಿಕೊಂಡು ಇರಲಿ : ಮಹಾವೀರ ಹೆಗ್ಡೆ

ಕಾರ್ಕಳ : ಪರಶುರಾಮ ಥೀಮ್‌ ಪಾರ್ಕ್‌ (karkala Parashurama Theme park ) ವಿಚಾರದಲ್ಲಿ ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಅವರ ನಾಲಗೆ ಹಳಿತಪ್ಪಿದೆ. ಅವರು ಕಾರ್ಕಳದ ಅಭಿವೃದ್ದಿಗಾಗಿ ಬಾಯಿ ಮುಚ್ಚಿಕೊಂಡು ಇರಲಿ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ (Mahaveera hegade) ಹೇಳಿದ್ದಾರೆ.

ಕಾರ್ಕಳ ಬಿಜೆಪಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪರಶುರಾಮ ಥೀಮ್‌ ಪಾರ್ಕ್‌ ಕುರಿತ ಹೇಳಿಕೆಗಳು ಪ್ರಚಲಿತದಲ್ಲಿದೆ. ಅವರ ಹೇಳಿಕೆಗಳು ಎಲ್ಲೆ ಮೀರಿದೆ. ನಾಲಗೆ ಹಿಡಿತದಲ್ಲಿ ಇರಬೇಕು ಎಂದಿದ್ದಾರೆ.

ಸುನಿಲ್‌ ಕುಮಾರ್‌ ಅವರ ಬಗ್ಗೆ ನೀಚ ಪದ ಬಳಕೆ ಮಾಡಿದ್ದಾರೆ. ನೀಚ ಪದದ ಅರ್ಥವನ್ನು ಅವರು ಸ್ಪಷ್ಟ ಪಡಿಸಬೇಕು. ಕಾರ್ಕಳ ರಾಜಕೀಯದ ಇತಿಹಾಸದಲ್ಲಿ ಇಂತಹ ಪದ ಬಳಕೆ ಮಾಡಿದ ಇತಿಹಾಸವೇ ಇಲ್ಲ. ಮುನಿಯಾಲು ಅವರು ತಮ್ಮ ರಾಜಕೀಯದ ತೆವಲಿಗಾಗಿ ಇಂತಹ ಪದ ಪ್ರಯೋಗ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಕಳದ ಅಭಿವೃದ್ದಿಗಾಗಿ ಶಾಸಕರಾದ ಸುನಿಲ್‌ ಕುಮಾರ್‌ ಅವರು ಸಾಕಷ್ಟು ಶ್ರಮಿಸಿದ್ದಾರೆ. ರಸ್ತೆಗಳನ್ನು ಅಭಿವೃದ್ದಿ ಪಡಿಸಿದ್ದಾರೆ. ಸರಕಾರ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿದ್ದಾರೆ. ಇಂಧನ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಕೋಟಿ ಕಂಠ ಗಾಯನ ಆಯೋಜಿಸಿದ್ದಾರೆ. ಪರಸರ ಉತ್ಸವದ ಮೂಲಕ ಸ್ವಚ್ಚತೆಗೆ ಅವರು ನೀಡಿದ ಕೊಡುಗೆ ಕಾರ್ಕಳದ ಜನರಿಗೆ ಗೊತ್ತಿದೆ ಎಂದಿದ್ದಾರೆ.

ಸುನಿಲ್‌ ಕುಮಾರ್‌ ಅವರಿಗೆ ಬಹಿರಂಗ ಕ್ಷಮೆ ಕೋರಲಿ

ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಅವರ ನಾಲಗೆ ಹದ್ದು ಮೀರಿದೆ. ಹೀಗಾಗಿ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಅವರು ಶಾಸಕ ಸುನಿಲ್‌ ಕುಮಾರ್‌ ಅವರ ಕ್ಷಮೆಕೋರಲಿ ಎಂದಿದ್ದಾರೆ.

ಮುನಿಯಾಲು ಮನೆಯಲ್ಲಿ ಅಷ್ಟ ಮಂಗಲ ಪ್ರಶ್ನೆ ಹಾಕಿಸಲಿ

ಪರಶುರಾಮ ಥೀಮ್‌ ಪಾರ್ಕ್‌ ವಿಚಾರದಲ್ಲಿ ಅಷ್ಟಮಂಗಲ ಪ್ರಶ್ನೆ ಹಾಕಿಸಲಿ ಎಂದು ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಅವರು ಹೇಳಿಕೆ ನೀಡುತ್ತಿದ್ದಾರೆ. ಪರಶುರಾಮ ಥೀಮ್‌ ಪಾರ್ಕ್‌ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿಲ್ಲ, ಅದು ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಯಲ್ಲಿದೆ. ಅಷ್ಟ ಮಂಗಲ ಪ್ರಶ್ನೆಯನ್ನು ಥೀಮ್‌ ಪಾರ್ಕ್‌ನಲ್ಲಿ ಇಡುವುದಲ್ಲ, ಮೊದಲು ಮುನಿಯಾಲು ಮನೆಯಲ್ಲಿ ಇಡಲಿ ಎಂದಿದ್ದಾರೆ.

ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಅವರೇ ನಿಮ್ಮ ನಡವಳಿಕೆಗಳು ಸರಿಯಿಲ್ಲ. ನಿಮ್ಮ ವರ್ತನೆ ಬದಲಾಗುತ್ತಲೇ ಇದೆ. ಪರಶುರಾಮ ಥೀಮ್‌ಪಾರ್ಕ್‌ಗೆ ಮೊದಲ ಮಣ್ಣು ಹಾಕಿದ ಬಗ್ಗೆ ಅಷ್ಟಮಂಗಲದಲ್ಲಿ ಕೇಳಿ. ಬಡಶಿಲ್ಪಿಯ ಮನೆಗೆ ಯಾಕೆ ಹೋಗಿದ್ದೀರಿ ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಕೇಳಲಿ. ಪರಶುರಾಮ ಮೂರ್ತಿಯ ಶಿಲ್ಪಿ ಕೃಷ್ಣ ನಾಯ್ಕ್‌ ಅವರ ಮನೆಗೆ ಹೋಗಿದ್ದೀರಿ. ಅಲ್ಲಿಗೆ ಹೋಗಲು ನೀವು ಪೊಲೀಸ್‌ ಅಧಿಕಾರಿಯಾ ಎಂದು ಪ್ರಶ್ನಿಸಿದ್ದಾರೆ.

ಪರಶುರಾಮನ ಮೂರ್ತಿ 2 ಕೋಟಿ ರೂಪಾಯಿ

ಪರಶುರಾಮ ಥೀಮ್‌ ಪಾರ್ಕ್‌ ನಲ್ಲಿರುವ ಪರಶುರಾಮ ಮೂರ್ತಿಗೆ ಒಟ್ಟು ಮೀಸಲಿಟ್ಟ ಅನುದಾನ 2 ಕೋಟಿ ರೂಪಾಯಿ. ಆದರೆ ಸರಕಾರ ಬಿಡುಗಡೆ ಮಾಡಿದ್ದು ಕೇವಲ 1 ಕೋಟಿ ರೂಪಾಯಿ. ಮುನಿಯಾಲು ಫೈಬರ್‌ ಗ್ಯಾಂಗ್‌ ಇಟ್ಟುಕೊಂಡು ಧೂಷಣೆ ಮಾಡುತ್ತಿದ್ದೀರಿ. ಒಂದು ಕೋಟಿಯಲ್ಲಿ ಎಷ್ಟು ಅವ್ಯವಹಾರ ಆಗಿದೆ ಎಂದು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಸರಕಾರಿ ಯೋಜನೆಗಳನ್ನು ನೀವು ಬಿಡುಗಡೆ ಮಾಡುವುದು ಸರಿಯಲ್ಲ ಅನ್ನೋ ಕನಿಷ್ಠ ಜ್ಞಾನವೂ ನಿಮಗೆ ಇಲ್ಲ. ಎಲ್ಲಾ ಕಾಮಗಾರಿಯನ್ನು ಚುನಾವಣೆಯಲ್ಲಿ ಸೋತ ನೀವೇ ಉದ್ಘಾಟನೆ ಮಾಡಿದ್ರೆ ಎಮ್‌ಎಲ್‌ಎ ಅವರು ಏನು ಮಾಡಬೇಕು. ಕಾರ್ಕಳದ ಅಭಿವೃದ್ದಿಯ ಬಗ್ಗೆ ನಿಮಗೆ ಮನಸಿದ್ರೆ ಬಾಲ ಮುಚ್ಚಿಕೊಂಡು ಸುಮ್ನೆ ಇರಿ. ಬಡ ಶಿಲ್ಪಿಯನ್ನು ಜೈಲಿನಲ್ಲಿ ಇಡುವುದು ನಿಮಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.

karkala Parashurama Theme park Mahaveera hegade Outrage Muniyalu Udaya kumar Shetty

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories