ಮನೆಯಿಂದ ಲೈಸೆನ್ಸ್ ಬಂದೂಕು ಕಳವು : ಗಂಗೊಳ್ಳಿಯಲ್ಲಿ ಪ್ರಕರಣ ದಾಖಲು
ಉಡುಪಿ : ಮನೆಯೊಳಗೆ ಸುರಕ್ಷಿತವಾಗಿ ಇಡಲಾಗಿದ್ದ ಲೈಸೆನ್ಸ್ ಹೊಂದಿದ ಎಸ್ಬಿಬಿಎಲ್ ಬಂದೂಕನ್ನು ಕಳ್ಳರು ಕಳವು ಮಾಡಿರುವ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನೂಜಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಉಡುಪಿ : ಮನೆಯೊಳಗೆ ಸುರಕ್ಷಿತವಾಗಿ ಇಡಲಾಗಿದ್ದ ಲೈಸೆನ್ಸ್ ಹೊಂದಿದ ಎಸ್ಬಿಬಿಎಲ್ ಬಂದೂಕನ್ನು ಕಳ್ಳರು ಕಳವು ಮಾಡಿರುವ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನೂಜಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಡಾ| ವೀಲ್ಸಿ ಥೋಮಸ್ ಅವರು ತಮ್ಮ ಕೃಷಿ ಭೂಮಿಯ ಬೆಳೆ ರಕ್ಷಣೆಗಾಗಿ 2013ರಲ್ಲಿ ಕುಂದಾಪುರ ತಹಶೀಲ್ದಾರರಿಂದ ಗನ್ ಲೈಸೆನ್ಸ್ ನಂ. 286/2 ಪಡೆದು ಎಸ್ಬಿಬಿಎಲ್ ಬಂದೂಕನ್ನು ಹೊಂದಿದ್ದರು. ಈ ಲೈಸೆನ್ಸ್ 2027ರ ಡಿಸೆಂಬರ್ 31ರವರೆಗೆ ಮಾನ್ಯವಾಗಿರುವುದಾಗಿ ತಿಳಿದುಬಂದಿದೆ.
ಏಪ್ರಿಲ್ 1ರಂದು ರಾತ್ರಿ 8 ಗಂಟೆ ಸುಮಾರಿಗೆ ಪ್ರಾರ್ಥನೆಗೆ ತೆರಳುವ ಮುನ್ನ ಮನೆಯ ಕೋಣೆಯಲ್ಲಿ ಬಂದೂಕು ಯಥಾಸ್ಥಿತಿಯಲ್ಲಿ ಇತ್ತು. ಬಳಿಕ ಏಪ್ರಿಲ್ 18ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೃಷಿ ಉತ್ಪನ್ನಗಳನ್ನು ಹಾಳು ಮಾಡುತ್ತಿದ್ದ ಮಂಗಗಳನ್ನು ಓಡಿಸಲು ಬಂದೂಕು ತೆಗೆದುಕೊಳ್ಳಲು ಹೋದಾಗ, ಅದು ಇಟ್ಟಿದ್ದ ಸ್ಥಳದಲ್ಲೇ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
Also Read: ಉಡುಪಿ : ವಕ್ವಾಡಿಯಲ್ಲಿ ಅಪರೂಪದ ಜಿಂಕೆ ಬೇಟೆಯ ವೀರಗಲ್ಲು ಪತ್ತೆ
ಮನೆಯವರು ಇಲ್ಲದ ಸಮಯವನ್ನು ಕಾದುಕೊಂಡ ಕಳ್ಳರು ಮನೆ ಪ್ರವೇಶಿಸಿ ಲೈಸೆನ್ಸ್ ಬಂದೂಕನ್ನು ಕಳವು ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Licensed gun stolen from house Case registered in Gangolli



