ತೆಕ್ಕಟ್ಟೆ : ಸಾಲಬಾಧೆ ಪಂಚಾಯತ್ ಆವರಣದಲ್ಲೇ ಮಹಿಳೆ ಆತ್ಮಹತ್ಯೆ
Udupi News: ಕೋಟ: ಸಾಲಬಾಧೆ ಮತ್ತು ಕೌಟುಂಬಿಕ ಸಮಸ್ಯೆಯಿಂದ ಮನನೊಂದ ಮಹಿಳೆಯೋರ್ವರು ಪಂಚಾಯತ್ ಆಚರಣೆದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿ ನಡೆದಿದೆ.
ಮೃತರನ್ನು ತೆಕ್ಕಟ್ಟೆ ನಿವಾಸಿ ತಾರಾ (54 ವರ್ಷ) ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಸಾಲದ ಬಾಧೆಯಿಂದಾಗಿ ತಾರಾ ಅವರ ಗಂಡ ಮತ್ತು ಮಗ ಇಬ್ಬರೂ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಘಟನೆಯಲ್ಲಿ ತಾರಾ ಮಾತ್ರ ಬದುಕು ಉಳಿದಿದ್ದರು.
Also Read: ಸರಕಾರಿ ಜಾಗದಿಂದ ಸಿಲಿಕಾನ್ ಮರಳು ಅಕ್ರಮ ಸಾಗಾಟ : ಪ್ರಕರಣ ದಾಖಲು
ಪತಿ ಹಾಗೂ ಮಗನನ್ನು ಕಳೆದುಕೊಂಡಿದ್ದ ತಾರಾ ತೀವ್ರವಾಗಿ ಮನನೊಂದಿದ್ದರು. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ತಾರಾ, ನವರಾತ್ರಿ ಹಬ್ಬದ ಸಮಯದಲ್ಲಿ ತಮ್ಮ ಶಿರಿಯಾರದಲ್ಲಿರುವ ಮನೆಗೆ ಬಂದಿದ್ದರು.
ಕೆಲಸಕ್ಕೆ ತೆರವುದಾಗಿ ಹೇಳಿದ್ದ ತಾರಾ ಮನೆಯಿಂದ ಹೊರಗೆ ಹೋಗಿದ್ದಾರೆ. ಆದರೆ ತಾರಾ ಮನೆಗೆ ಬಾರದ ಹಿನ್ನೆಲೆಯಲ್ಲಿ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ.
ಅಂತಿಮವಾಗಿ ತೆಕ್ಕಟ್ಟೆ(Thekkatte) ಪಂಚಾಯತ್ ಆವರಣದಲ್ಲಿ ತಾರಾ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹದ ಪಕ್ಕದಲ್ಲಿ ಯಾವುದೋ ವಿಷದ ಬಾಟಲಿ ಕಂಡುಬಂದಿದೆ.
ಸಾಲದ ಬಾಧೆ ಮತ್ತು ಗಂಡ-ಮಗನ ಸಾವಿನಿಂದ ನೊಂದಿದ್ದ ತಾರಾ ಅವರು ಇದೇ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.
Also Read: ಇನ್‌ಸ್ಟಾಗ್ರಾಮ್ ಜಾಹೀರಾತು ನಂಬಿ 1.93 ಲಕ್ಷ ಕಳೆದುಕೊಂಡ ಯುವತಿ
ತಾರಾ ಅವರ ದೊಡ್ಡಮನ ಮಗ ಹರೀಶ್ ಅವರು ನೀಡಿದ ದೂರಿನ ಆಧಾರದ ಮೇಲೆ ಕೋಟ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



