Neena Gupta Fact Check: 66ನೇ ವಯಸ್ಸಿನಲ್ಲಿ ಗರ್ಭಿಣಿಯಾದ್ರಾ ನಟಿ ನೀನಾ ಗುಪ್ತಾ?
Who is Neena Gupta: ಅಲ್ಲದೆ, "ಈ ವಯಸ್ಸಿನಲ್ಲೂ ನನ್ನ ಗರ್ಭಧಾರಣೆಯ ಬಗ್ಗೆ ಜನರು ಚರ್ಚಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಗುತ್ತಿದೆ. ಇದು ನಮ್ಮ ಸಮಾಜ ಮತ್ತು ರಾಷ್ಟ್ರ ವಿಕಸನಗೊಳ್ಳುತ್ತಿರುವುದನ್ನು ತೋರಿಸುತ್ತದೆ" ಎಂದು ತಮಾಷೆಯಾಗಿ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ನಟಿ, 66 ವರ್ಷದ ನೀನಾ ಗುಪ್ತಾ ಅವರು (Actress Neena Gupta Pregnant) ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿತ್ತು. ಈ ವದಂತಿಯ ಹಿಂದಿನ ಸತ್ಯಾಸತ್ಯತೆ (Neena Gupta Pregnant Fact Check) ಮತ್ತು ನೀನಾ ಗುಪ್ತಾ ಅವರು ಇದಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬ ವಿವರ ಇಲ್ಲಿದೆ:
ವದಂತಿ ಶುರುವಾಗಿದ್ದು ಎಲ್ಲಿ?
ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ನಟರಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ ರಿಸೆಪ್ಷನ್ ಕಾರ್ಯಕ್ರಮಕ್ಕೆ ನೀನಾ ಗುಪ್ತಾ ಅವರು ಬಿಳಿ ಬಣ್ಣದ ಸೀರೆಯುಟ್ಟು ಆಗಮಿಸಿದ್ದರು. ಈ ಕಾರ್ಯಕ್ರಮದ ವಿಡಿಯೋಗಳು ವೈರಲ್ ಆದಾಗ, ಅವರ ಹೊಟ್ಟೆಯ ಭಾಗ ಸ್ವಲ್ಪ ಉಬ್ಬಿದಂತೆ ಕಂಡಿದ್ದರಿಂದ ನೆಟ್ಟಿಗರು ಅವರು ಗರ್ಭಿಣಿಯಾಗಿದ್ದಾರೆ ಎಂದು ಚರ್ಚಿಸಲು ಶುರು ಮಾಡಿದರು. ಕೆಲವರು ಅವರ ಹಿಟ್ ಸಿನಿಮಾ ‘ಬದಾಯಿ ಹೋ’ (Badhaai Ho) ಕಥೆ ನಿಜ ಜೀವನದಲ್ಲೂ ಮರುಕಳಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದರು.
ನಟಿ ನೀನಾ ಗುಪ್ತಾ ನೀಡಿದ ಸ್ಪಷ್ಟನೆ:
ಈ ವದಂತಿಗಳ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ನೀನಾ ಗುಪ್ತಾ ಅವರು ನಗುತ್ತಲೇ ಸ್ಪಷ್ಟನೆ ನೀಡಿದ್ದಾರೆ: “ಯಾವುದೇ ‘ಬದಾಯಿ ಹೋ’ ಸನ್ನಿವೇಶ ಇಲ್ಲಿ ನಡೆಯುತ್ತಿಲ್ಲ. ನಾನು ಗರ್ಭಿಣಿಯಲ್ಲ. ಆ ದಿನ ನಾನು ಉಟ್ಟಿದ್ದ ಸೀರೆಯ ಬಟ್ಟೆ (Fabric) ತುಂಬಾ ದಪ್ಪಗಿತ್ತು, ಹಾಗಾಗಿ ನಾನು ಸ್ವಲ್ಪ ದಪ್ಪಗೆ ಕಂಡಿದ್ದೇನೆ ಅಷ್ಟೇ.”
ಚಿಕ್ಕಮಗಳೂರು : ವಾಣಿಜ್ಯ ಸಿಲಿಂಡರ್ ಸಿಗದ್ದಕ್ಕೆ ಕ್ಯಾಂಟೀನ್ನಲ್ಲಿ ಗೃಹೋಪಯೋಗಿ ಸಿಲಿಂಡರ್ ಬಳಕೆ : ಭಾರೀ ಸ್ಫೋಟ
ಅಲ್ಲದೆ, “ಈ ವಯಸ್ಸಿನಲ್ಲೂ ನನ್ನ ಗರ್ಭಧಾರಣೆಯ ಬಗ್ಗೆ ಜನರು ಚರ್ಚಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಗುತ್ತಿದೆ. ಇದು ನಮ್ಮ ಸಮಾಜ ಮತ್ತು ರಾಷ್ಟ್ರ ವಿಕಸನಗೊಳ್ಳುತ್ತಿರುವುದನ್ನು ತೋರಿಸುತ್ತದೆ” ಎಂದು ತಮಾಷೆಯಾಗಿ ಹೇಳಿದ್ದಾರೆ.
[youtube https://www.youtube.com/watch?v=nCMSZDdXGYY]



